ನಟ ನಿತಿನ್ ಮದುವೆ ಫೋಟೋಗಳು: ಗೆಳತಿ ಶಾಲಿನಿ ಜೊತೆ ಹಸೆಮಣೆ ಏರಿದ ನಿತಿನ್
ತೆಲುಗು ಖ್ಯಾತ ನಟ ನಿತಿನ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಆತಂಕದ ನಡುವೆಯೂ ನಿತಿನ್, ಗೆಳತಿ ಶಾಲಿನಿ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ನಿತಿನ್ ಮದುವೆ ಮುಂದೂಡುತ್ತಲ್ಲೆ ಬಂದಿದ್ದರು. ಅಲ್ಲದೆ ವಿದೇಶದಲ್ಲಿ ಅದ್ದೂರಿಯಾಗಿ ಮದುವೆಯಾಗುವ ಪ್ಲಾನ್ ಮಾಡಿಕೊಂಡಿದ್ದರು. ಆದರೆ ಕೊರೊನಾ ಲಾಕ್ ಡೌನ್ ಎಲ್ಲಾ ಯೋಜನೆಗಳಿಗೆ ತಣ್ಣೀರು ಎರಚಿದೆ. ಆದರೀಗ ನಿತಿನ್ ಸರಳವಾಗಿ ಕೆಲವೇ ಕೆಲವು ಜನರ ಮಧ್ಯೆ ಹಸೆಮಣೆ ಏರಿದ್ದಾರೆ.
Recommended Video
ಇತ್ತೀಚಿಗಷ್ಟೆ ಅಂದರೆ ಕಳೆದ ವಾರ ನಿತಿನ್ ಮತ್ತು ಶಾಲಿನಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸುಮಾರು ನಾಲ್ಕೈದು ದಿನಗಳಿಂದ ನಿತಿನ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಮದುವೆ ಪೂರ್ವ ಶಾಸ್ತ್ರಗಳು ಜೋರಾಗಿ ನಡೆದಿದೆ. ನಿನ್ನೆ ಭಾನುವಾರ(ಜುಲೈ 26) ನಿತಿನ್ ಗೆಳತಿ ಶಾಲಿನಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ಇಬ್ಬರು ಪತಿ-ಪತ್ನಿಯರಾಗಿದ್ದಾರೆ. ಮುಂದೆ ಓದಿ...

ಹೈದರಾಬಾದ್ ನಲ್ಲಿ ನಡೆದ ಮದುವೆ
ನಿತಿನ್ ಮತ್ತು ಶಾಲಿನಿ ಮದುವೆ ಹೈದರಾಬಾದ್ ನ ಫಲಕನುಮಾ ಅರಮನೆಯಲ್ಲಿ ನಡೆದಿದೆ. ಮದುವೆ ಸಮಾರಂಭಕ್ಕೆ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿ ನವ ಜೋಡಿಗೆ ಆಶೀರ್ವಾದ ಮಾಡಿದ್ದಾರೆ. ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಹಿಂದೂ ಸಂಪ್ರದಾಯದ ಪ್ರಕಾರ ಮದುವೆ
ಹಿಂದೂ ಸಂಪ್ರದಾಯದ ಪ್ರಕಾರ, ಶಾಸ್ತ್ರೋಕ್ತವಾಗಿ ನಟ ನಿತಿನ್ ಗೆಳತಿ ಶಾಲಿನಿಗೆ ಮೂರು ಗಂಟು ಹಾಕಿದ್ದಾರೆ. ಇಬ್ಬರು ಸಂಪ್ರದಾಯದ ಉಡುಪಿನಲ್ಲಿ ಮಿಂಚುತ್ತಿದ್ದರು. ನಿತಿನ್ ಕೆಂಪು ಬಣ್ಣದ ಎಂಬ್ರಾಯಿಡರಿ ಶೆರ್ವಾನಿ ಧರಿಸಿದ್ದರೆ, ಶಾಲಿನಿ ಬಳಿ ಮತ್ತು ಗೋಲ್ಡ್ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು.

ನಿತಿನ್ ಮದುವೆಯಲ್ಲಿ ತಾರೆಯರ ರಂಗು
ನಟ ನಿತಿನ್ ಮದುವೆಯಲ್ಲಿ ತಲುಗು ಚಿತ್ರರಂಗದಿಂದ ಕೆಲವೇ ಕೆಲವು ಮಂದಿ ಮಾತ್ರ ಭಾಗಿಯಾಗಿದ್ದರು. ಅವರಲ್ಲಿ ನಟ ವರುಣ್ ತೇಜ್, ಸಾಯಿ ಧರಮ್ ಮತ್ತು ಕಾರ್ತಿಕೇಯ ಸೇರಿದ್ದಂತೆ ಕಲೆವರು ಮಾತ್ರ ಹಾಜರಿದ್ದು ನಿತಿನ್ ಗೆ ಶುಭಹಾರೈಸಿದ್ದಾರೆ. ಇನ್ನೂ ಅನೇಕ ಮಂದಿ ಸಾಮಾಜಿಕ ಜಾಲತಾಣದ ಮೂಲಕವೇ ನಿತಿನ್ ಮತ್ತು ಶಾಲಿನಿ ಫೋಟೋ ಶೇರ್ ಮಾಡಿ ಶುಭಕೋರುತ್ತಿದ್ದಾರೆ.

ದುಬೈನಲ್ಲಿ ಮದುವೆ ನಡೆಯಬೇಕಿತ್ತು
ಅಂದುಕೊಂಡಂತೆ ಆಗಿದ್ದರೆ ಮದುವೆ ಏಪ್ರಿಲ್ 16ರಂದು ದುಬೈನಲ್ಲಿ ನಡೆಯಬೇಕಿತ್ತು. ಅದ್ದೂರಿಯಾಗಿ ಮದುವೆಯಾಗಲು ಇಬ್ಬರು ನಿರ್ಧರಿಸಿದ್ದರು. ಮದುವೆ ಸಮಾರಂಭದ ಕಾರ್ಯಗಳು ಮುಗಿದ ಬಳಿಕ ಚಿತ್ರರಂಗದ ಗಣ್ಯರಿಗಾಗಿ ಹೈದರಾಬಾದ್‌ನಲ್ಲಿ ವಿಶೇಷ ಸಮಾರಂಭ ಏರ್ಪಡಿಸಿ ರಿಸೆಪ್ಷನ್ ಮಾಡಲು ಬಯಸಿದ್ದರು. ಆದರೆ ಕೊರೊನಾ ವೈರಸ್ ಪರಿಣಾಮ ಅವರ ಉದ್ದೇಶವೆಲ್ಲ ತಲೆಕೆಳಗಾಗಿತ್ತು.

ಲಂಡನ್‌ನಲ್ಲಿ ಎಂಬಿಎ ಪದವಿ ಮಾಡಿರುವ ಶಾಲಿನಿ
36 ವರ್ಷದ ನಿತಿನ್ ಮತ್ತು ಲಂಡನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿರುವ ಶಾಲಿನಿ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ತಮ್ಮ ಪ್ರೀತಿಯ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಮದುವೆಯ ಹಂತಕ್ಕೆ ಬಂದ ಬಳಿಕ ಮನೆಯಲ್ಲಿ ಮಾತುಕತೆ ನಡೆಸಿ ಬಹಿರಂಗಪಡಿಸಿದ್ದರು.


Click it and Unblock the Notifications











