ಪವನ್ ಕಲ್ಯಾಣ್‌ಗೆ ಕೊರೊನಾ: ಆರೋಗ್ಯ ಸ್ಥಿತಿ ತುಸು ಗಂಭೀರ

ತೆಲುಗಿನ ಸ್ಟಾರ್ ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಕೆಲವು ದಿನಗಳಿಂದಲೂ ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು. ಇಂದು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಪವನ್‌ಗೆ ಕೊರೊನಾ ಪಾಸಿಟಿವ್ ಆಗಿರುವುದು ಗೊತ್ತಾಗಿದೆ.

ಕೆಲವು ದಿನಗಳ ಹಿಂದಷ್ಟೆ ಪವನ್ ಕಲ್ಯಾಣ್ ಅವರ ಆಪ್ತ ಸಿಬ್ಬಂದಿ ಕೆಲವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ವೈದ್ಯರ ಸಲಹೆ ಮೇರೆಗೆ ಏಪ್ರಿಲ್ 12ರಿಂದಲೂ ಪವನ್ ಕಲ್ಯಾಣ್ ಅವರು ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದರು.

ಕ್ವಾರಂಟೈನ್‌ನಲ್ಲಿದ್ದ ಪವನ್ ಕಲ್ಯಾಣ್‌ಗೆ ತುಸು ಎದೆ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಅವರನ್ನು ಇಂದು ಆಸ್ಪತ್ರೆಗೆ ಕರೆತಂದು ತಪಾಸಣೆ ಮಾಡಿದಾಗ ಕೊರೊನಾ ಆಗಿರುವುದು ಗೊತ್ತಾಗಿದೆ. ಪವನ್‌ಗೆ ಎದೆನೋವಿನ ಜೊತೆಗೆ ಜ್ವರ ಸಹ ಇತ್ತು ಎನ್ನಲಾಗಿದೆ.

 Telugu Actor Pawan Kalyan Tests Positive for Covid-19

ಪವನ್ ಕಲ್ಯಾಣ್ ಅವರಿಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಪವನ್‌ಗೆ ಚಿಕಿತ್ಸೆ ನೀಡಲೆಂದು ಖ್ಯಾತ ವೈದ್ಯ ಡಾ.ಕಮ್ಮನ್ ಅವರು ತಿರುಪತಿಯಿಂದ ಹೈದರಾಬಾದ್‌ಗೆ ಇಂದು ಮಧ್ಯಾಹ್ನದ ವೇಳೆಗೆ ಆಗಮಿಸಿದ್ದಾರೆ. ಪವನ್‌ಗೆ ಎದೆ ನೋವು ಇದ್ದ ಕಾರಣ ಅವರಿಗೆ ಸಿಲಿಂಡರ್ ಮೂಲಕ ಆಮ್ಲಜನಕ ನೀಡಲಾಗುತ್ತಿದೆ ಎನ್ನಲಾಗಿದೆ. ಪವನ್ ಸಹೋದರ ಚಿರಂಜೀವಿ ಹಾಗೂ ಪುತ್ರ ರಾಮ್ ಚರಣ್ ತೇಜ ಅವರು ಆಸ್ಪತ್ರೆಗೆ ಭೇಟಿ ನೀಡಿ ಪವನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.

 Telugu Actor Pawan Kalyan Tests Positive for Covid-19

Recommended Video

ಅಭಿಮಾನಿಗಳ ಪಾಲಿಗೆ ದರ್ಶನ್ ಡಿ ಬಾಸ್ ಹೇಗಾದ್ರು ಗೊತ್ತಾ? | Filmibeat Kannada

ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಸಿನಿಮಾ ಏಪ್ರಿಲ್ 9 ರಂದು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಇದೀಗ ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್‌ನಲ್ಲಿ ನಟಿಸುತ್ತಿದ್ದಾರೆ ಪವನ್ ಅದರ ಜೊತೆಗೆ 'ಹರಿ ಹರ ವೀರ ಮಲ್ಲು' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

More from Filmibeat

English summary
Telugu actor and politician Pawan Kalyan gets corona positive. He has been treated by specialized doctors in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X