ತೆಲುಗು ನಟ, ರಾಜಕಾರಣಿ ತಾರಕ ರತ್ನ ತೀವ್ರ ಅಸ್ವಸ್ಥ: ಬೆಂಗಳೂರಿನಲ್ಲಿ ಚಿಕಿತ್ಸೆ

By ಫಿಲ್ಮಿಬೀಟ್ ಡೆಸ್ಕ್

ತೆಲುಗು ಸಿನಿಮಾ ನಟ ಹಾಗೂ ರಾಜಕಾರಣಿ ನಂದಮೂರಿ ತಾರಕ್ ಅವರ ಆರೋಗ್ಯ ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತೆಲುಗಿನ ಜನಪ್ರಿಯ ಸಿನಿಮಾ ಕುಟುಂಬವಾದ ನಂದಮೂರಿ ಕುಟುಂಬಕ್ಕೆ ಸೇರಿದ ನಂದಮೂರಿ ತಾರಕ್ ರತ್ನ ಇಂದು ರಾಜಕೀಯ ಪಾದಯಾತ್ರೆಯೊಂದರಲ್ಲಿ ಪಾಲ್ಗೊಂಡಿದ್ದಾಗ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ.

ಸೋದರ ಸಂಬಂಧಿಯಾದ ಆಂಧ್ರದ ಪ್ರಮುಖ ರಾಜಕಾರಣಿ ನಾರಾ ಲೋಕೇಶ್ ಅವರು ನಡೆಸುತ್ತಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನಂದಮೂರಿ ತಾರಕ್ ರತ್ನ ಚಿತ್ತೂರು ಜಿಲ್ಲೆ ಕೊಪ್ಪಂನಲ್ಲಿ ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ.

Telugu Actor, Politician Nandamuri Tarak Rathna Seriously Ill, Shifted To Hospital

ಕುಸಿದು ಬಿದ್ದು ಪ್ರಜ್ಞಾಹೀನರಾದ ತಾರಕ್ ರತ್ನ ಅವರನ್ನು ಕೂಡಲೇ ಕುಪ್ಪಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ನಂತರ ಕೂಡಲೇ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೆಲವು ವರದಿಗಳ ಪ್ರಕಾರ ತಾರಕ್ ರತ್ನಗೆ ಹೃದಯಾಘಾತವಾಗಿದೆ ಎನ್ನಲಾಗುತ್ತಿದೆಯಾದರೂ ಸ್ಪಷ್ಟ ಚಿತ್ರಣ ಇನ್ನಷ್ಟೆ ಸಿಗಬೇಕಿದೆ.

ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಬೃಹತ್ ಪಾದಯಾತ್ರೆಯನ್ನು ಆಯೋಜಸಿದ್ದು, ಇದರ ಭಾಗವಾಗಿ ಕುಪ್ಪಂನಲ್ಲಿ ಮಸೀದಿಯೊಂದಕ್ಕೆ ಭೇಟಿ ನೀಡಿದ್ದಾಗ ಭಾರಿ ಸಂಖ್ಯೆಯ ಜನ ಜಮಾಯಿಸಿ ನೂಕಾಟ-ತಳ್ಳಾಟಗಳು ನಡೆದ ಸಂದರ್ಭದಲ್ಲಿ ತಾರಕ್‌ ಅಸ್ವಸ್ಥರಾಗಿ ಕುಸಿದು ಬಿದಿದ್ದಾರೆ.

ತಾರಕ್ ರತ್ನ, ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ನಟ ಬಾಲಕೃಷ್ಣ, ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ನಂದಮೂರಿ ಕುಟುಂಬದವರು ಪ್ರಸ್ತುತ ಆತಂಕದಲ್ಲಿದ್ದಾರೆ.

ಲಿಜೆಂಡರಿ ನಟ, ಅವಿಭಜಿತ ಆಂಧ್ರದ ಮಾಜಿ ಸಿಎಂ ನಂದಮೂರಿ ತಾರಕರ ರಾಮಾರಾವ್ ಅವರ ಮೊಮ್ಮಗ ನಂದಮೂರಿ ತಾರಕ್ ರತ್ನ, 2002 ರಲ್ಲಿ 'ಒಗಟೋ ನಂಬರ್ ಕುರ್ರೋಡು' ಹೆಸರಿನ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. 2021 ರ ವರೆಗೆ ಸುಮಾರು 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ತಾರಕ್ ರತ್ನ ನಟಿಸಿದ್ದಾರೆ. 2022 ರಲ್ಲಿ ಬಿಡುಗಡೆ ಆದ '9 ಹವರ್ಸ್' ಹೆಸರಿನ ವೆಬ್ ಸರಣಿಯಲ್ಲಿಯೂ ರತ್ನ ನಟಿಸಿದ್ದಾರೆ.

More from Filmibeat

English summary
Telugu actor, politician Nandamuri Tarak Ratna seriously ill, shifted to hospital. He fainted during a political padayatra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X