'ಬಾಹುಬಲಿ' ಚಿತ್ರದ ನಂತರ ಮತ್ತೆ ಒಂದಾದ ಪ್ರಭಾಸ್ ಮತ್ತು ರಾಜಮೌಳಿ
Recommended Video
ಅಭಿಮಾನಿಗಳ ನೆಚ್ಚಿನ ಡಾರ್ಲಿಂಗ್ ಪ್ರಭಾಸ್ ಮತ್ತು ಸ್ಟಾರ್ ನಿರ್ದೇಶಕ ಎಸ್ಎಸ್ ರಾಜಮೌಳಿ ಮತ್ತೆ ಒಂದಾಗುತ್ತಿದ್ದಾರೆ. ಬಾಹುಬಲಿಯಂತಹ ಸೂಪರ್ ಹಿಟ್ ಸಿನಿಮಾ ನೀಡಿದ ಖ್ಯಾತ ಜೋಡಿ ಮತ್ತೆ ಒಂದಾಗುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇಡೀ ವಿಶ್ವವೆ ದಕ್ಷಿಣ ಭಾರತೀಯ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ್ದ ಈ ಮ್ಯಾಜಿಕ್ ಜೋಡಿ ಮತ್ತೆ ಒಂದಾಗಿದೆ ಅಂದರೆ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಬರುವುದಂತು ಪಕ್ಕಾ. ಆದರೆ ಈ ಬಾರಿ ಇವರಿಬ್ಬರು ಒಂದಾಗಿ ಹೊಸಬ ಸಿನಿಮಾ ಮಾಡುತ್ತಿದ್ದಾರೆ ಅಂತ ಅಂದ್ಕೋಬೇಡಿ. ರಾಜಮೌಳಿ ನಿರ್ದೇಶನ ಮಾಡುತ್ತಿಲ್ಲ, ಪ್ರಭಾಸ್ ಅಭಿನಯಿಸುತ್ತಿಲ್ಲ.
ಈ ಜೋಡಿ ಒಂದಾಗಿ ಸಿನಿಮಾ ನಿರ್ಮಾಣ ಮಾಡುವ ಪ್ಲಾನ್ ಮಾಡುತ್ತಿದೆಯಂತೆ. ಹೌದು, ಪ್ರಭಾಸ್ ಮತ್ತು ರಾಜಮೌಳಿ ಜಂಟಿಯಾಗಿ ನಿರ್ಮಾಣ ಸಂಸ್ಥೆ ಹುಟ್ಟುಹಾಕುವ ಯೋಜನೆ ನಿರೂಪಿಸಿದೆ ಎಂದು ಹೇಳಲಾಗುತ್ತಿದೆ. ಸಿನಿಮಾದಲ್ಲಿ ಆಸಕ್ತಿ ಇರುವ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಈ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಶುರು ಮಾಡುತ್ತಿದ್ದಾರೆ.

ಇಬ್ಬರ ನಿರ್ಮಾಣದಲ್ಲಿ ಯಾವ ರೀತಿಯ ಸಿನಿಮಾಗಳು ಮೂಡಿಬರಲಿವೆ ಎನ್ನುವುದು ಅಭಿಮಾನಿಗಳ ಕುತೂಹಲವಾಗಿದೆ. ಅಂದ್ಹಾಗೆ ಪ್ರಭಾಸ್ ಸದ್ಯ ರಾಧಕೃಷ್ಣ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಪೂಜಾ ಹೆಗಡೆ ಕಾಣಿಸಿಕೊಳ್ಳುತ್ತಿದ್ದಾರೆ.
ಮತ್ತೊಂದೆಡೆ ನಿರ್ದೇಶಕ ರಾಜಮೌಳಿ ಆರ್ ಆರ್ ಆರ್ ಸಿನಿಮಾದಲ್ಲಿ ನಿರತರಾಗಿದ್ದಾರೆ. ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದರ ನಡುವೆಯು ಇಬ್ಬರು ಸೇರಿ ನಿರ್ಮಾಣ ಸಂಸ್ಥೆ ಸ್ಥಾಪಿಸಿ ವಿಭಿನ್ನ ರೀತಿಯ ಸಿನಿಮಾಗಳನ್ನು ಮಾಡುವ ಪ್ಲಾನ್ ಮಾಡಿಕೊಂಡಿದೆ.


Click it and Unblock the Notifications











