ಪ್ರಭಾಸ್ ಗೆ 41ನೇ ಹುಟ್ಟುಹಬ್ಬದ ಸಂಭ್ರಮ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ಟಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಡಾರ್ಲಿಂಗ್ ಪ್ರಭಾಸ್ ಗೆ ಇಂದು(ಅ.23) ಹುಟ್ಟುಹಬ್ಬದ ಸಂಭ್ರಮ. 41ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಭಾಸ್ ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ. ಸೂಪರ್ ಹಿಟ್ ಬಾಹುಬಲಿ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಪ್ರಭಾಸ್ ಗೆ ದೇಶದಾದ್ಯಂತ ಅಭಿಮಾನಿಗಳು ಶುಭಹಾರೈಕೆ ತಿಳಿಸುತ್ತಿದ್ದಾರೆ.
ಕೊರೊನಾ ಕಾರಣದಿಂದ ಈ ಬಾರಿ ಪ್ರಭಾಸ್ ಅದ್ದೂರಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಸರಳವಾಗಿ ಕುಟುಂಬದ ಮತ್ತು ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಬ್ಬದಂತೆ ಸಂಭ್ರಮ ಮಾಡುತ್ತಿದ್ದಾರೆ. ಜೊತೆಗೆ ಇಂದು ಪ್ರಭಾಸ್ ಕಡೆಯಿಂದ ಏನೆಲ್ಲ ಗಿಫ್ಟ್ ಸಿಗಬಹುದು ಎಂದು ಕಾತರದಿಂದ ಕಾಯುತ್ತಿದ್ದಾರೆ. ಮುಂದೆ ಓದಿ...

ರಾಧೆ ಶ್ಯಾಮ್ ಸಿನಿಮಾದಿಂದ ಸಿಗಲಿ ಉಡುಗೊರೆ
ಪ್ರಭಾಸ್ ಅಭಿನಯದ ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾದಿಂದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಹುಟ್ಟುಹಬ್ಬಕ್ಕೆ 3 ದಿನಗಳ ಮುಂಚೆಯೇ ಲುಕ್ ರಿವೀಲ್ ಆಗಿದೆ. ಚಿತ್ರದಲ್ಲಿ ಪ್ರಭಾಸ್ 'ವಿಕ್ರಮಾದಿತ್ಯ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಇಂದು ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾತಂಡ #beatsofRadheshyam ಎಂದು ಅಪ್ ಡೇಟ್ ನೀಡಿದೆ. ಹಾಗಾಗಿ ಚಿತ್ರದ ಹಾಡು ರಿಲೀಸ್ ಆಗುವ ಸಾಧ್ಯತೆ ಇದೆ. ಏನಿರಬಹುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಅಭಿಮಾನಿಗಳ ಸಂಭ್ರಮ ಹೆಚ್ಚಿಸುತ್ತಾ 'ಆದಿಪುರುಷ್' ಟೀಂ
ಪ್ರಭಾಸ್ ಬಳಿ ಸದ್ಯ ರಾಧೆ ಶ್ಯಾಮ್ ಸಿನಿಮಾ ಮಾತ್ರವಲ್ಲ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಜೆಟ್ ಚಿತ್ರಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಬಾಲಿವುಡ್ ನಿರ್ದೇಶಕ ಓ ರಾವುತ್ ನಿರ್ದೇಶನದ ಅದಿಪುರುಷ್ ಸಿನಿಮಾ ಸಹ ಪ್ರಭಾಸ್ ಬಳಿ ಇದೆ. ಈಗಾಗಲೇ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿರುವ ಆದಿಪುರುಷ್ ಸಿನಿಮಾದಿಂದ ಇಂದು ಏನಾದರು ವಿಶೇಷ ಉಡುಗೊರೆ ನೀಡಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ಈ ಸಿನಿಮಾದಲ್ಲಿ ಪ್ರಭಾಸ್ ರಾಮ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್ ಮಿಂಚುತ್ತಿದ್ದಾರೆ.

ಪ್ರಭಾಸ್ ಬಳಿ ಇದೆ ಮತ್ತೊಂದು ಬಿಗ್ ಬಜೆಟ್ ಸಿನಿಮಾ
ಮಹಾನಟಿ ಸಿನಿಮಾ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಜೊತೆಯೂ ಪ್ರಭಾಸ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಈ ಚಿತ್ರದಲ್ಲಿ ಪ್ರಭಾಸ್ ಬಾಲಿವುಡ್ ನಟ ದೀಪಿಕಾ ಪಡುಕೋಣೆ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಾರೆ. ವಿಶೇಷ ಅಂದರೆ ಸಿನಿಮಾದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರಭಾಸ್ ಮದುವೆ ಯಾವಾಗ?
ಪ್ರಭಾಸ್ ಸದ್ಯ ರಾಧೆ ಶ್ಯಾಮ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೊನೆ ಹಂತದ ಚಿತ್ರೀಕರಣ ಮಾಡುತ್ತಿರುವ ಸಿನಿಮಾತಂಡ ಸದ್ಯ ಇಟಲಿಯಲ್ಲಿ ಶೂಟಿಂಗ್ ಮಾಡುತ್ತಿದೆ. ಈ ಸಿನಿಮಾ ಮುಂದೆ ವರ್ಷ ತೆರೆಗೆ ಬರಲಿದೆ. ಅಂದ್ಹಾಗೆ ಪ್ರಭಾಸ್ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಅವರ ಅಭಿನಮಾನಿಗಳಲ್ಲಿ ಕಾಡುತ್ತಿರುವುದು ಒಂದೇ ಪ್ರಶ್ನೆ, ಪ್ರಭಾಸ್ ಮದುವೆ ಯಾವಾಗ? ಎಂದು. ಪ್ರಭಾಸ್ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಿರುತ್ತೆ. ಆದರೆ ಗಾಸಿಪ್ ಗೆ ತಲೆಕೆಡಿಸಿಕೊಳ್ಳದ ಪ್ರಭಾಸ್ ಮದುವೆ ಸುದ್ದಿಯನ್ನು ಯಾವಾಗ ನೀಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.


Click it and Unblock the Notifications











