ಡಾರ್ಲಿಂಗ್ ಮನೆ ಸೇರಿದ ಅದೃಷ್ಟದ ಮರ; ಅಂಬಾನಿ ಆಗಿಬಿಡ್ತಾರಾ ಪ್ರಭಾಸ್?
ಬಾಹುಬಲಿ ನಟ ಪ್ರಭಾಸ್ ದೇಶ ವಿದೇಶಗಳಲ್ಲಿ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಕಮಾಲ್ ಮಾಡುತ್ತಾ ಬರ್ತಿದ್ದಾರೆ. ಚಿತ್ರವೊಂದಕ್ಕೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಸದ್ಯ ನಾಲ್ಕೈದು ಸಿನಿಮಾಗಳು ಡಾರ್ಲಿಂಗ್ ಕೈಯಲ್ಲಿದೆ.
ಖ್ಯಾತ ತೆಲುಗು ನಟ ಕೃಷ್ಣಂ ರಾಜು ಸಹೋದರನ ಮಗ ಪ್ರಭಾಸ್. ಹಾಗಾಗಿ ಅವರು ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಆದರೆ ಬಂದ ಮೇಲೆ ತಮ್ಮದೇ ಪರಿಶ್ರಮದಿಂದ ಸ್ಟಾರ್ ನಟನಾಗಿ ಗುರ್ತಿಸಿಕೊಂಡರು. ತಮ್ಮ ಡೆಡಿಕೇಷನ್ ಮೂಲಕ ಅಸಾಧ್ಯವನ್ನು ಸಾಧಿಸಿದರು. 'ಬಾಹುಬಲಿ' ಸರಣಿ ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದರು. ಈ ಚಿತ್ರಕ್ಕಾಗಿ 5 ವರ್ಷ ಮೀಸಲಿಟ್ಟಿದ್ದರು. ಅವರ ನಂಬಿಕೆ ಸುಳ್ಳಾಗಲಿದೆ. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಬಳಿಕ ಸಂಭಾವನೆ ಹೆಚ್ಚಿತು. ಬಾಲಿವುಡ್ ಮಂದಿ ರತ್ನಗಂಬಳಿ ಹಾಸಿದರು.

ಚಿತ್ರರಂಗದ ಮಂದಿ ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರ ನಂಬುತ್ತಾರೆ. ಹೇಳಿ ಕೇಳಿ ಇದು ಅದೃಷ್ಟವನ್ನು ನಂಬಿಕೊಂಡಿರುವ ಇಂಡಸ್ಟ್ರಿ. ಕೋಟಿ ಕೋಟಿ ವ್ಯವಹಾರ ನಡೆಯುತ್ತದೆ. ಹಾಗಾಗಿ ಇಂಥದ್ದನ್ನೆಲ್ಲಾ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ನಂಬುತ್ತಾರೆ. ಪ್ರಭಾಸ್ ಕೂಡ ಇದಕ್ಕೆ ಹೊರತಲ್ಲ. ಇದೀಗ ಪ್ರಭಾಸ್ ಮನೆಗೆ ಕಲ್ಪವೃಕ್ಷ ಸೇರಿದೆ. ಕಲ್ಪವೃಕ್ಷ ಬೇಡಿದ ವರ ಕೊಡುತ್ತದೆ ಎನ್ನುವ ನಂಬಿಕೆಯಿದೆ. ಭಾರತದಲ್ಲಿ ಇಬ್ಬರು ಮೂವರ ಬಳಿ ಮಾತ್ರ ಈ ಮರ ಇದೆಯಂತೆ.
ಮುಖೇಶ್ ಅಂಬಾನಿ ಮನೆಯಲ್ಲಿ ಕಲ್ಪವೃಕ್ಷದ ಮರ ಇದೆಯಂತೆ. ಅದು ಬಿಟ್ಟರೆ ಪ್ರಭಾಸ್ ಹಾಗೂ ನನ್ನ ಬಳಿ ಮಾತ್ರ ಈ ವೃಕ್ಷ ಇದೆ ಎಂದು ಎಕ್ಸ್‌ಪೀರಿಯಂ ಇಕೋ ಪಾರ್ಕ್ ಸಂಸ್ಥಾಪಕ ರಾಮ್‌ದೇವ್ ಹೇಳಿದ್ದಾರೆ. ಅವರಿಬ್ಬರಿಗೂ ಈ ಮರ ಕೊಟ್ಟಿದ್ದು ನಾನೇ ಎಂದು ತಿಳಿಸಿದ್ದಾರೆ. ಸುಮನ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿರುವ ವೀಡಿಯೋ ಈಗ ವೈರಲ್ ಆಗುತ್ತಿದೆ.
ಎಕ್ಸ್‌ಪೀರಿಯಂ ಇಕೋ ಪಾರ್ಕ್‌ನಲ್ಲಿ 25 ಸಾವಿರಕ್ಕೂ ಅಧಿಕ ಮರಗಳನ್ನು ಪ್ರಭೇದಗಳ 10 ಲಕ್ಷ ಗಿಡ ಮರಗಳನ್ನು ಬೆಳೆಸಲಾಗಿದೆ. 150 ಎಕರೆಗಳ ದೊಡ್ಡ ಪಾರ್ಕ್ ಇದು. ಸಾವಿರಾರು ವರ್ಷ ವಯಸ್ಸಿನ ಮರಗಳು ಈ ಪಾರ್ಕ್‌ನಲ್ಲಿವೆ. ಲಕ್ಷ ಲಕ್ಷ ರೂಪಾಯಿ ಬೆಲೆ ಬಾಳುವ ಮರಗಳನ್ನು ಇಲ್ಲಿ ನೋಡಬಹುದು. 3.50 ಕೋಟಿ ರೂ. ದರದ ಮರವೂ ಇದೆಯಂತೆ. ಇದೇ ಪಾರ್ಕ್‌ನಲ್ಲಿ ಕಲ್ಪವೃಕ್ಷ ಮರ ಕೂಡ ಇದೆ ಎಂದು ರಾಮ್‌ದೇವ್ ಹೇಳಿದ್ದಾರೆ.
ಚಿಕ್ಕ ಚಿಕ್ಕ ಕಲ್ಪವೃಕ್ಷ ಮರಗಳು ಬೇರೆ ಕಡೆಗಳಲ್ಲಿ ಇವೆ. ಆದರೆ ಸಾವಿರಾರು ವರ್ಷಗಳ ಹಳೆಯ ಮರಗಳು ನಮ್ಮ ಬಳಿ ಮಾತ್ರ ಇದೆ ಎಂದು ರಾಮ್‌ದೇವ್ ಹೇಳಿದ್ದಾರೆ. 1500 ವರ್ಷಗಳ ಹಳೆಯ ಮರ ತಮ್ಮ ಪಾರ್ಕ್‌ನಲ್ಲಿ ಇರುವುದನ್ನು ತೋರಿಸಿದ್ದಾರೆ. ಇದರ ಬೆಲೆ 1 ಕೋಟಿ ರೂ. ಎಂದು ರಾಮ್ ದೇವ್ ಹೇಳಿದ್ದಾರೆ. ಪ್ರಭಾಸ್ ಹೊಸದಾಗಿ ಕಟ್ಟುತ್ತಿರುವ ಮನೆಯಲ್ಲಿ ಇದನ್ನು ನೆಟ್ಟು ಬೆಳೆಸುತ್ತಿದ್ದಾರೆ ಎಂದು ರಾಮ್‌ದೇವ್ ಹೇಳಿದ್ದಾರೆ.
ಅಭಿಮಾನಿಗಳು ಈ ವೀಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಪ್ರಭಾಸ್ ಚಿತ್ರವೊಂದಕ್ಕೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅವರಿಗೆ 1 ಕೋಟಿ ರೂ. ಯಾವ ಲೆಕ್ಕ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಪ್ರಭಾಸ್ ನಟನೆಯ 'ರಾಜಾಸಾಬ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 'ಫೌಜಿ' ಎನ್ನುವ ಮತ್ತೊಂದು ಸಿನಿಮಾ ಚಿತ್ರೀಕರಣ ನಡೀತಿದೆ.
ಮುಂದೆ 'ಸಲಾರ್'-2 ಹಾಗೂ 'ಕಲ್ಕಿ 2898AD' ಪಾರ್ಟ್-2 ಸಿನಿಮಾಗಳಲ್ಲಿ ಪ್ರಭಾಸ್ ನಟಿಸಬೇಕಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮತ್ತೆರಡು ಸಿನಿಮಾಗಳನ್ನು ಮಾಡಲು ಪ್ರಭಾಸ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











