For Quick Alerts
  ALLOW NOTIFICATIONS  
  For Daily Alerts

  ನಟ-ನಿರ್ಮಾಪಕ ಯಾದಾ ಕೃಷ್ಣ ಹೃದಯಾಘಾತದಿಂದ ನಿಧನ

  |

  ತೆಲುಗು ನಟ-ನಿರ್ಮಾಪಕ ಯಾದ ಕೃಷ್ಣ ಇಂದು (ಡಿಸೆಂಬರ್ 3) ರಂದು ಹೃದಯಾಘಾತದಿಂದಾಗಿ ನಿಧನ ಹೊಂದಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.

  ನಟನಾಗಿ 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದ ಯಾದಾ ಕೃಷ್ಣ, ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿಯೂ ನಟಿಸಿದ್ದರು. ಅವರ ನಿಧನದ ಸುದ್ದಿಯನ್ನು ನಿರ್ಮಾಪಕ ಬಿಎ ರಾಜು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

  1990 ರಲ್ಲಿ ನಟನೆ ಪ್ರಾರಂಭಿಸಿದ್ದ ಯಾದಾ ಕೃಷ್ಣ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಒಳ್ಳೆಯ ಹಾಸ್ಯ ಸಿನಿಮಾಗಳನ್ನು ಸಹ ಅವರು ತೆಲುಗು ಚಿತ್ರರಂಗಕ್ಕೆ ನೀಡಿದ್ದಾರೆ. ನಟನೆ ಜೊತೆಗೆ ಅವರು ಕೆಲವು ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.

  Prashant Neal ಗೆ ಕ್ಲಾಸ್ ತೆಗೆದುಕೊಂಡ ಕನ್ನಡಿಗರು | Hombale Films | Filmibeat Kannada

  2010 ರಲ್ಲಿ ಬಿಡುಗಡೆ ಆಗಿದ್ದ 'ಸಂಕ್ರಾಂತಿ ಅಲ್ಲುಡು' ಸಿನಿಮಾ ಯಾದಾ ಕೃಷ್ಣ ನಟಿಸಿದ್ದ ಕೊನೆಯ ಸಿನಿಮಾ. ಯಾದಾ ಕೃಷ್ಣ ನಿಧನಕ್ಕೆ ತೆಲುಗು ಸಿನಿರಂಗದ ಕೆಲವು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

  English summary
  Telugu Actor, producer Yada Krishna passed away due to heart attack. He acted in more than 20 movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X