ತೆಲುಗು ನಟ ರಾಜಶೇಖರ್‌ಗೆ ಪ್ಲಾಸ್ಮಾ ಚಿಕಿತ್ಸೆ: ಆರೋಗ್ಯ ಕುರಿತು ಮಾಹಿತಿ
ತೆಲುಗು ನಟ ರಾಜಶೇಖರ್ ಅವರ ಆರೋಗ್ಯ ಸುಧಾರಣೆ ಆಗಿದೆ ಎಂದು ಆಸ್ಪತ್ರೆಯ ವೈದ್ಯರು ಮಂಗಳವಾರ ಮಧ್ಯಾಹ್ನ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.
ಕೊರೊನಾ ವೈರಸ್‌ಗೆ ತುತ್ತಾಗಿದ್ದ ನಟ ರಾಜಶೇಖರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ರಾಜಶೇಖರ್ ಪುತ್ರಿ ಸಹ ಪ್ರತಿಕ್ರಿಯಿಸಿ ''ತಂದೆಯವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಆತಂಕ ಪಡುವ ಅಗತ್ಯವಿಲ್ಲ, ತಂದೆಗಾಗಿ ಪ್ರಾರ್ಥಿಸಿ'' ಎಂದು ಮನವಿ ಮಾಡಿದ್ದರು.
ರಾಜಶೇಖರ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ ಎಂದು ಸಿಟಿ ನ್ಯೂರೋ ಕ್ಲಿನಿಕ್ ವೈದ್ಯರು ಮಾಹಿತಿ ನೀಡಿದ್ದಾರೆ. ರಾಜಶೇಖರ್ ಅವರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ರಾಜಶೇಖರ್ ಅವರ ಪತ್ನಿ ಜೀವಿತಾ ರಾಜಶೇಖರ್ ಅವರಿಗೂ ಸಹ ಕೊರೊನಾ ವೈರಸ್ ಅಂಟಿಕೊಂಡಿತ್ತು. ಈಗ ಜೀವಿತಾ ಅವರು ಗುಣುಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ರಾಜಶೇಖರ್ ದಂಪತಿ ಜೊತೆ ಮಕ್ಕಳಾದ ಶಿವಾನಿ ಮತ್ತು ಶಿವಾತ್ಮಿಕ ಅವರಿಗೂ ಕೊರೊನಾ ತಗುಲಿತ್ತು. ಇವರಿಬ್ಬರು ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ.
ರಾಜಶೇಖರ್ ಅವರ ಆರೋಗ್ಯ ಸ್ಥಿತಿ ಗಂಭೀರ ಎಂದು ಹೇಳಿದ ತಕ್ಷಣ ಚಿತ್ರರಂಗ ಆತಂಕಗೊಂಡಿತ್ತು. ಬಳಿಕ, ರಾಜಶೇಖರ್ ಆದಷ್ಟೂ ಬೇಗ ಚೇತರಿಕೆ ಕಾಣಲಿ ಎಂದು ಹಾರೈಸಿದ್ದಾರೆ.


Click it and Unblock the Notifications











