ಅಂಬಾನಿ ಮಗನ ಮದುವೆಗೆ 7.5 ಕೋಟಿ ರೂಪಾಯಿ ಬೆಲೆಯ ಕಾರ್‌ ಏರಿ ಹೊರಟ ರಾಮ್‌ಚರಣ್‌!

ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳು ಸಾವಿರಾರು ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಕೆಲವರು ಚಿನ್ನನ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರಾದರೆ ಕೆಲವರು ಸ್ವಂತ ಪರಿಶ್ರಮದಿಂದ ನೂರಾರು ಕೋಟಿ ಕೂಡಿಟ್ಟಿದ್ದಾರೆ. ತೆಲುಗಿನ ನಾಗಾರ್ಜುನ, ಮಹೇಶ್‌ಬಾಬು, ರಾಮ್‌ಚರಣ್‌ ಸೇರಿದಂತೆ ಕೆಲ ನಟರ ಆಸ್ತಿ ಮೌಲ್ಯ 1000 ಕೋಟಿ ರೂ. ದಾಟಿದೆ.

ಸ್ಟಾರ್‌ ನಟರು ತಮ್ಮ ಆಸ್ತಿ, ಆದಾಯಕ್ಕೆ ತಕ್ಕಂತೆ ಐಷಾರಾಮಿ ಜೀವನ ಸಾಗಿಸುತ್ತಾರೆ. ದುಬಾರಿ ಬಂಗಲೆಗಳಲ್ಲಿ ವಾಸಿಸುತ್ತಾರೆ. ಇನ್ನು ಐಷಾರಾಮಿ ಕಾರುಗಳನ್ನು ಏರಿ ಸುತ್ತಾಡುತ್ತಾರೆ. ಒಂದೊಂದು ಕಾರ್ ಬೆಲೆ ಕೋಟಿ ಲೆಕ್ಕದಲ್ಲಿರುತ್ತದೆ. ಸದ್ಯ ತೆಲುಗು ನಟ ರಾಮ್‌ಚರಣ್ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರು ಖರೀದಿಸಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ ಅಂಬಾನಿ ಮಗನ ಮದುವೆಗೆ ಹಾಜರಾಗಲು ಇದೇ ಕಾರ್ ಏರಿ ಚರಣ್ ದಂಪತಿ ಹೊರಟಿದ್ದಾರೆ. ಆ ಫೋಟೊ, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Telugu actor Ram Charan bought a rolls royce car worth Rs 7 5 crs Check its features

ಇಂದಿನಿಂದ(ಜುಲೈ 12) 3 ದಿನಗಳ ಕಾಲ ಅನಂತ್ ಮತ್ತು ರಾಧಿಕಾ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಮುಕೇಶ್ ಅಂಬಾನಿ ಮನೆ ವಿವಾಹ ಸಮಾರಂಭದ ಬಗ್ಗೆ ಅಂತರಾಷ್ಟ್ರೀಯ ಪತ್ರಿಕೆಗಳು ಕೂಡ ವಿಶೇಷ ಸುದ್ದಿಗಳನ್ನು ಪ್ರಕಟಿಸುತ್ತಿವೆ. ಈ ಮದುವೆಗೆ ಮುಖೇಶ್ ಅಂಬಾನಿ ನೂರಾರು ಕೋಟಿ ಖರ್ಚು ಮಾಡುತ್ತಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಜಿಯೋ ವರ್ಲ್ಡ್ ಕನ್ವೆನ್ಷನ್‌ನಲ್ಲಿ ಮದುವೆ ಆಚರಣೆಗಳು ನಡೆಯಲಿವೆ.

ಕೆಲವೇ ಸೌತ್ ಸಿನಿಮಾ ತಾರೆಯರಿಗೆ ಅನಂತ್ ಮತ್ತು ರಾಧಿಕಾ ಮದುವೆಗೆ ಹಾಜರಾಗಲು ಆಮಂತ್ರಣ ಸಿಕ್ಕಿದೆ. ಅದರಲ್ಲಿ ರಾಮ್ ಚರಣ್ ಕೂಡ ಒಬ್ಬರು. ಮದುವೆ ಸಮಾರಂಭದಲ್ಲಿ ಭಾಗವಹಿಸಲು ಪತ್ನಿ ಮತ್ತು ಮಗುವಿನೊಂದಿಗೆ ಅವರು ತೆರಳಿದ್ದಾರೆ. ಗುರುವಾರ(ಜುಲೈ 11) ಬೆಳಗ್ಗೆ ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಚರಣ್ ಬಹಳ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಕಾರ್‌ ಇಳಿದು ಬಂದ ವೀಡಿಯೋ ವೈರಲ್ ಆಗುತ್ತಿದೆ. ಸದ್ಯ ಈ ಹೊಸ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಹೈದರಾಬಾದ್‌ನಲ್ಲಿ ಈ ಮಾಡೆಲ್ ಕಾರ್ ಮತ್ಯಾರ ಬಳಿ ಕೂಡ ಇಲ್ಲವಂತೆ. ಇದೇ ವರ್ಷ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಲಾಂಚ್ ಆಗಿತ್ತು. ಈ ಹಿಂದೆ ಚೆನ್ನೈ ಉದ್ಯಮಿ ಒಬ್ಬರು ಇದನ್ನು ಖರೀದಿಸಿದ್ದು ಸುದ್ದಿಯಾಗಿತ್ತು. ಇದೀಗ ರಾಮ್‌ ಚರಣ್ ಬಳಿ ಇರುವ ಐಷಾರಾಮಿ ಕಾರ್ ಎಲ್ಲರ ಕಣ್ಣು ಕುಕ್ಕುತ್ತಿದೆ.

Telugu actor Ram Charan bought a rolls royce car worth Rs 7 5 crs Check its features

ರಾಯಲ್ಟಿಗೆ ಮತ್ತೊಂದು ಹೆಸರು ರೋಲ್ಸ್ ರಾಯ್ಸ್.. ಅದೆಷ್ಟೇ ಐಷಾರಾಮಿ ಕಾರುಗಳು ಬಂದ್ರು ಹೋದ್ರು ರೋಲ್ಸ್ ರಾಯ್ಸ್ ಖದರ್ರೇ ಬೇರೆ. ಬಹಳ ಅದ್ಧೂರಿಯಾದ ರೋಲ್ಸ್ ರಾಯ್ಸ್ ರಸ್ತೆಗಿದರೆ ಎಲ್ಲರೂ ಒಮ್ಮೆ ತಿರುಗಿ ನೋಡುವಂತೆ ಇರುತ್ತದೆ. ಭಾರತದಲ್ಲಿ ಕೆಲವರ ಬಳಿ ಮಾತ್ರ ರೋಲ್ಸ್ ರಾಯ್ಸ್ ಕಾರುಗಳಿವೆ. ಹೆಚ್ಚು ಸಿನಿಮಾ ತಾರೆಯರು ಹಾಗೂ ದೊಡ್ಡ ಉದ್ಯಮಿಗಳು ಈ ಕಾರ್ ಬಳಸುತ್ತಿದ್ದಾರೆ.

ಟಾಲಿವುಡ್‌ನಲ್ಲಿ ಚಿರಂಜೀವಿ ಹಾಗೂ ಪ್ರಭಾಸ್ ಬಳಿ ಕೂಡ ರೋಲ್ಸ್ ರಾಯ್ಸ್ ಕಾರು ಇದೆ. ಆದರೆ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರ್(ರೋಲ್ಸ್ ರಾಯ್ಸ್ ಸ್ಪೆಕ್ಟರ್) ಖರೀದಿಸಿದವರಲ್ಲಿ ರಾಮ್‌ಚರಣ್ ಮೊದಲಿಗರು ಎನ್ನಲಾಗ್ತಿದೆ. ಅಂದಹಾಗೆ ಮೆಗಾ ಪವರ್ ಸ್ಟಾರ್ ಖರೀದಿಸಿರುವ ಈ ಕಾರ್ ವಿಶೇಷತೆಗಳು ಏನು ಎನ್ನುವುದನ್ನು ನೋಡುವುದಾದರೆ 102 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಇದೆ. ಸಂಪೂರ್ಣವಾಗಿ ಚಾರ್ಜ್‌ ಮಾಡಿದರೆ 530 ಕಿಲೋಮೀಟರ್ ಮೈಲೇಜ್ ಕೊಡುತ್ತದೆ.

ಇನ್ನೂ ಈ ಕಾರಿನಲ್ಲಿ ಡುಯಲ್ ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದೆ. ಇದರಿಂದ 585 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 900 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಕೇವಲ 4.5 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗ ಪಡೆಯುವ ಸಾಮರ್ಥ್ಯ ಇದಕ್ಕಿದೆ. 34 ನಿಮಿಷಕ್ಕೆ ಸಂಪೂರ್ಣವಾಗಿ ಕಾರ್ ಚಾರ್ಜ್ ಆಗಿಬಿಡುತ್ತದೆ.

ಇನ್ನುಳಿದಂತೆ ಮಲ್ಟಿ ಡಿಜಿಟಲ್ ಸ್ಕ್ರೀನ್, ಒನ್-ಟ್ಯಾಪ್ ಡೋರ್ ಓಪನ್ ಫಂಕ್ಷನ್, ವೆಂಟಿಲೇಟೆಡ್ - ಹೀಟೆಡ್ ಹಾಗೂ ಮಸಾಜ್ ಸೀಟ್‌ಗಳು, ಮಲ್ಟಿ ಜೋನ್ ಕ್ಲೇಮೇಟ್ ಕಂಟ್ರೋಲ್, ಕನೆಕ್ಟ್ಡ್ ಕಾರ್ ಟೆಕ್ ಸೇರಿದಂತೆ ಸಾಕಷ್ಟು ವೈಶಿಷ್ಟ್ಯಗಳು ಈ ಕಾರ್‌ನಲ್ಲಿವೆ. 4 ಜನ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರಿನಲ್ಲಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಲಗೇಜ್ ಸಾಗಿಸಲು ಬೂಟ್ ಸ್ಪೇಸ್ ಇದೆ.

More from Filmibeat

English summary
Ram Charan Stylish Entry On Rolls Royce Spectre Car At Begumpet Airport;
Read more about: ramcharan telugu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X