'ಕೆಜಿಎಫ್ 2': ಅಲ್ಲು ಅರ್ಜುನ್ ಬಳಿಕ ರಾಮ್ ಚರಣ್ ಗುಣಗಾನ

'ಕೆಜಿಎಫ್ 2' ಸಿನಿಮಾ ಇತಿಹಾಸದ ಪುಟಗಳನ್ನು ಸೇರಿ ಆಗಿದೆ. ಸಿನಿಮಾ ಮಾಡಿರುವ ಹಲವು ದಾಖಲೆಗಳನ್ನು ಮುರಿಯುವುದು ಸುಲಭಕ್ಕೆ ಸಾಧ್ಯವಲ್ಲ.

'ಕೆಜಿಎಫ್ 2' ಸಿನಿಮಾ ಗಳಿಕೆ ವಿಚಾರದಲ್ಲಿ ಭಾರತದ ಹಲವು ಸಿನಿಮಾಗಳನ್ನು ಹಿಂದಿಕ್ಕಿ ಮುಂದೆ ಸಾಗಿದೆ. ಗಳಿಕೆ ವಿಷಯದಲ್ಲಿ ಮಾತ್ರವೆ ಅಲ್ಲ ಸಿನಿಮಾ ತನ್ನ ತಾಂತ್ರಿಕ ಅಂಶದಿಂದಲೂ ಬಹುವಾಗಿ ಗಮನ ಸೆಳೆದಿದೆ. ಸಿನಿಮಾವನ್ನು ಪ್ರೇಕ್ಷಕರು ಮಾತ್ರವೇ ಅಲ್ಲ, ನೆರೆ-ಹೊರೆಯ ಜನಪ್ರಿಯ ಸ್ಟಾರ್ ನಟರು, ನಿರ್ದೇಶಕರು ಸಹ ಹೊಗಳುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ನಟ ಅಲ್ಲು ಅರ್ಜುನ್, 'ಕೆಜಿಎಫ್ 2' ಸಿನಿಮಾವನ್ನು ಬಹುವಾಗಿ ಮೆಚ್ಚಿ ಮಾತನಾಡಿದ್ದರು, ಇದೀಗ ಮೆಗಾ ಕುಟುಂಬದ ಸ್ಟಾರ್ ನಟ ರಾಮ್ ಚರಣ್ ತೇಜ, 'ಕೆಜಿಎಫ್ 2' ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Recommended Video

KGF2 ಸಿನಿಮಾ ನೋಡಿ ರಾಮ್ ಚರಣ್ ಏನಂದ್ರು ? | KGF 2 | Yash | Ram Charan Teja

Telugu Actor Ram Charan Teja Praised KGF 2 Movie

'ಕೆಜಿಎಫ್ 2' ಸಿನಿಮಾ ನೋಡಿ ಟ್ವೀಟ್ ಮಾಡಿರುವ ನಟ ರಾಮ್ ಚರಣ್, ''ಸಹೋದರ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಮ್ಸ್‌ ಹಾಗೂ ಇಡೀ 'ಕೆಜಿಎಫ್ 2' ಚಿತ್ರತಂಡಕ್ಕೆ ಅಭಿನಂದನೆಗಳು. ಪ್ರಿಯ ಯಶ್ ನಿಮ್ಮ ನಟನೆ ಅದ್ಭುತ, ತೆರೆಯ ಮೇಲೆ ನೀವು ಅದ್ಭುತವಾಗಿ ಕಾಣುತ್ತೀರಿ'' ಎಂದು ರಾಮ್ ಚರಣ್ ಹೇಳಿದ್ದಾರೆ.

ರಾಮ್ ಚರಣ್‌ ಮೊದಲಿನಿಂದಲೂ 'ಕೆಜಿಎಫ್' ಸಿನಿಮಾದ ಅಭಿಮಾನಿ. ಮಾರ್ಚ್ 25 ರಂದು ಬಿಡುಗಡೆ ಆದ 'RRR' ಸಿನಿಮಾದಲ್ಲಿ ನಟಿಸಿರುವ ರಾಮ್ ಚರಣ್, ಸಿನಿಮಾದ ಪ್ರಚಾರಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಮ್ ಚರಣ್, ತಮಗೆ 'ಕೆಜಿಎಫ್' ಸಿನಿಮಾ ಇಷ್ಟವಾಗಿದ್ದಾಗಿ ಹೇಳಿದ್ದರಷ್ಟೆ ಅಲ್ಲದೆ, 'ಕೆಜಿಎಫ್' ಸಿನಿಮಾದ 'ಧೀರ ಧೀರ ಧೀರ ಈ ಸುಲ್ತಾನಾ' ಹಾಡು ತನ್ನ ಜೀವನದ ಹಿನ್ನೆಲೆ ಸಂಗೀತ ಆಗಿರಬೇಕು ಎಂದಿದ್ದರು. ಜೀವನ ಪರ್ಯಂತ ರಾಮ್ ಚರಣ್ ಎಲ್ಲೇ ಹೋದರು ಆ ಹಾಡು ಹಿನ್ನೆಲೆ ಸಂಗೀತವಾಗಿ ಪ್ಲೇ ಆಗಬೇಕೆಂಬುದು ಅವರ ಆಸೆ.

ಇನ್ನು ನಟ ಅಲ್ಲು ಅರ್ಜುನ್ ಸಹ ಕೆಲವು ದಿನಗಳ ಹಿಂದಷ್ಟೆ 'ಕೆಜಿಎಫ್ 2' ಸಿನಿಮಾವನ್ನು ಹೊಗಳಿ ಟ್ವೀಟ್ ಮಾಡಿದ್ದರು, "ಕೆಜಿಎಫ್ 2 ತಂಡಕ್ಕೆ ಶುಭಾಶಯಗಳು. ಯಶ್ ನಟನೆ, ಕಾರ್ಯಕ್ಷಮತೆ ಅದ್ಭುತವಾಗಿದೆ. ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಎಲ್ಲರ ಅಭಿನಯ ಸೆಳೆಯುತ್ತಿದೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಭುವನ್ ಗೌಡ ದೃಶ್ಯ ವೈಭವ ಸಖತ್ತಾಗಿದೆ. ಎಲ್ಲಾ ತಂತ್ರಜ್ಞರನ್ನು ನಾನು ಗೌರವಿಸುತ್ತೇನೆ." ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದರು.

ತಮಿಳಿನ ನಟ ವಿಶಾಲ್, ಸೂರ್ಯ ಸಹೋದರ ಕಾರ್ತಿ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಹಲವು ಬಾಲಿವುಡ್ ನಟ, ನಿರ್ದೇಶಕರು ಇನ್ನೂ ಹಲವಾರು ಮಂದಿ 'ಕೆಜಿಎಫ್ 2' ಸಿನಿಮಾವನ್ನು ಹೊಗಳಿದ್ದಾರೆ. ವಿಶ್ವ ಪ್ರಸಿದ್ಧ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‌ಬಾಲ್ ತಂಡ ಸಹ 'ಕೆಜಿಎಫ್ 2' ಮೇನಿಯಾದಿಂದ ತಪ್ಪಿಸಿಕೊಳ್ಳಲಾಗಿಲ್ಲ, ಫುಟ್‌ಬಾಲ್ ಕ್ಲಬ್‌ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ 'ಕೆಜಿಎಫ್' ಕುರಿತಾದ ಪೋಸ್ಟ್ ಹಾಕಿದೆ.

More from Filmibeat

English summary
Telugu star actor Ram Charan Teja praised KGF 2 movie.He congratulated director Prashanth Neel and Hombale Films and also praised Yash's acting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X