ರಾಮ್‌ಚರಣ್ ಮಗ ಎಷ್ಟು ಸಾವಿರ ಕೋಟಿ ಆಸ್ತಿಗೆ ವಾರಸ್ದಾರ ಗೊತ್ತಾ? ಭಾರತದಲ್ಲೇ ಬಹಳ ಶ್ರೀಮಂತ ಮಗು!

ತೆಲುಗು ನಟ ರಾಮ್‌ಚರಣ್ ಹಾಗೂ ಉಪಾಸನಾ ದಂಪತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಮೆಗಾ ವಾರಸ್ದಾರ ಬಂದ ಎಂದು ಅತ್ತ ಚಿರಂಜೀವಿ ಕುಟುಂಬ ಹಾಗೂ ಆಪ್ತರು ಸಂಭ್ರಮಿಸುತ್ತಿದ್ದಾರೆ. ಮೊಮ್ಮಗ ಬೇಕು ಎಂದು ಚಿರಂಜೀವಿ ವೇದಿಕೆಯಲ್ಲಿ ಆಸೆ ವ್ಯಕ್ತಪಡಿಸಿದ್ದರು. ಅದು ಈಗ ಈಡೇರಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ರಾಮ್‌ಚರಣ್ ಬಹಳ ಶ್ರೀಮಂತ ನಟ. ತಂದೆ ಚಿರಂಜೀವಿ ಕೂಡಿಟ್ಟ ಆಸ್ತಿ ಜೊತೆಗೆ ಚಿತ್ರನಟನಾಗಿ, ಉದ್ಯಮಿಯಾಗಿ ಚರಣ್ ಸಾಕಷ್ಟು ಸಂಪಾದನೆ ಮಾಡಿದ್ದಾರೆ. ಇನ್ನು ಭಾರತದಲ್ಲಿ ಖ್ಯಾತಿ ಗಳಿಸಿರುವ ಅಪೊಲೊ ಹಾಸ್ಪಿಟಲ್ಸ್ ವ್ಯವಸ್ಥಾಪಕ ಡಾ. ಪ್ರತಾಪ್ ರೆಡ್ಡಿ ಮೊಮ್ಮಗಳು ಉಪಾಸನಾ ಕೋನಿದೇಲ. ಹಾಗಾಗಿ ಚರಣ್ ಹಾಗೂ ಉಪಾಸನಾ ಒಟ್ಟು ಆಸ್ತಿ ಮೌಲ್ಯ 2000 ಕೋಟಿ ರೂ.ಗೂ ಅಧಿಕ ಇರಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ. ಅಂದರೆ ಅಷ್ಟು ಆಸ್ತಿಗೆ ಈಗ ಹುಟ್ಟಿರುವ ಮಗು ವಾರಸ್ದಾರ ಎಂದು ಟಾಲಿವುಡ್ ಅಂಗಳದಲ್ಲಿ ಚರ್ಚೆ ನಡೀತಿದೆ.

Telugu Actor RamCharan Upasana s Newborn Touted as India s Richest Star Kid

ಎರಡೂವರೆ ವರ್ಷದ ಹಿಂದೆ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಗೆ ಕ್ಲಿಂಕಾರ ಎಂದು ಹೆಸರಿಟ್ಟಿದ್ದಾರೆ. ಹೈದರಾಬಾದ್ ಅಪೊಲೊ ಆಸ್ಪತ್ರೆಯಲ್ಲಿ ಉಪಾಸನಾಗೆ 2ನೇ ಬಾರಿ ಹೆರಿಗೆ ಆಗಿದೆ. ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಜನಿಸಿದೆ. ಅವಳಿ ಮಕ್ಕಳು, ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರ ಜೊತೆ ಚಿರಂಜೀವಿ ಮಾಹಿತಿ ನೀಡಿದ್ದರು. ನಿನ್ನೆ(ಫೆಬ್ರವರಿ) ಆಸ್ಪತ್ರೆಯಿಂದ ರಾಮ್‌ಚರಣ್ ಮಗಳು ಕ್ಲಿಂಕಾರ ಜೊತೆ ಹೊರ ಬಂದಿದ್ದರು. ದೊಡ್ಡಮಟ್ಟದಲ್ಲಿ ಸೇರಿದ್ದ ಅಭಿಮಾನಿಗಳು ಒಮ್ಮೆಲೆ ಮುತ್ತಿಕೊಂಡ ಪರಿಣಾಮ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಗಳನ್ನು ಎದೆಗವಚಿಕೊಂಡು ಆಸ್ಪತ್ರೆಯಿಂದ ಚರಣ್ ಹೊರ ಬಂದಿದ್ದರು.

ಇನ್ನು ಮೆಗಾ ವಾರದ್ದಾರ ಹುಟ್ಟಿದ ಸಂಭ್ರಮದಲ್ಲಿ ಆಸ್ಪತ್ರೆ ಬಳಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಬಗ್ಗೆ ಕೂಡ ಪರ ವಿರೋಧ ಚರ್ಚೆ ನಡೆಯುತ್ತಿದೆ. ಇನ್ನು ಹುಟ್ಟಿನಿಂದಲೇ ಜ್ಯೂ. ರಾಮ್‌ಚರಣ್ ದರ್ಬಾರ್ ಶುರುವಾಗಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಅಂದಾಜು 77,000 ಕೋಟಿ ರೂಪಾಯಿ ಮೌಲ್ಯದ ಅಪೊಲೊ ಗ್ರೂಪ್ ಆಫ್ ಕಂಪನಿಗಳ ಉತ್ತರಾಧಿಕಾರಿ ಉಪಾಸನಾ ಕೊನಿಡೇಲಾ. ತಾತನಿಗೆ ಅಷ್ಟೆಲ್ಲಾ ಆಸ್ತಿ ಇದ್ದರೂ ಆಕೆ ಕೂಡ ಉದ್ಯಮ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ. ಅಪೋಲೋ ಹಾಸ್ಪಿಟಲ್ಸ್ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ವಿಭಾಗದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ಆಕೆಯ ಆಸ್ತಿ ಮೌಲ್ಯ 1130 ಕೋಟಿ ರೂ. ಎನ್ನಲಾಗ್ತಿದೆ. ಇನ್ನು ಚಿರಂಜೀವಿ ವಾರಸ್ದಾರ ರಾಮ್‌ಚರಣ್ 1370 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂದು ಚರ್ಚೆ ನಡೀತಿದೆ. ಈಗ ಹುಟ್ಟಿರುವ ರಾಮ್‌ ಚರಣ್ ಮಗ ಇಷ್ಟೆಲ್ಲಾ ಆಸ್ತಿಗೆ ಒಡೆಯನಾಗುತ್ತಾನೆ ಎಂದು ಹೇಳಲಾಗ್ತಿದೆ.

ಅಪೋಲೊ ಸಂಸ್ಥೆಯ ಆಸ್ತಿಯಲ್ಲಿ ಉಪಾಸನಾಗೆ 10000ದಿಂದ 15000 ಕೋಟಿ ಆಸ್ತಿ ಸಿಗಬಹುದು. ಇನ್ನು ಚಿರಂಜಿವಿ ಕಡೆಯಿಂದ 500 ಕೋಟಿ ರೂ. ಎಂದುಕೊಂಡರೂ ಎಲ್ಲಾ ಸೇರಿ 20000 ಕೋಟಿ ರೂ. ಆಸ್ತಿ ಎನ್ನಲಾಗ್ತಿದೆ. ರಾಮ್‌ಚರಣ್ ಇಬ್ಬರೂ ಹೆಣ್ಣು ಮಕ್ಕಳಿಗೆ ಕೊಂಚ ಕೊಟ್ಟರೂ ಉಳಿದ ಅಷ್ಟು ಆಸ್ತಿಗೆ ರಾಮ್‌ಚರಣ್ ಮಗನೇ ವಾರಸ್ದಾರ ಎಂದು ಚರ್ಚೆ ನಡೀತಿದೆ. ಅಬ್ಬಬ್ಬಾ ಅದೃಷ್ಟ ಅಂದರೆ ಇದಲ್ವಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ರಾಮ್‌ಚರಣ್ ಸದ್ಯ 'ಪೆದ್ದಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬುಚ್ಚಿಬಾಬು ನಿರ್ದೇಶನದ ಚಿತ್ರಕ್ಕೆ ಎ. ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಾರ್ಚ್ 27ರಂದು ಸಿನಿಮಾ ತೆರೆಗೆ ಬರಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ ಹಿಟ್ ಆಗಿದೆ.

More from Filmibeat

Read more about: ramcharan chiranjeevi tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X