ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಟಾಲಿವುಡ್‌ ಸ್ಟಾರ್ ಶ್ರೀಕಾಂತ್ ಇದ್ದಿದ್ದು ನಿಜಾನಾ..?

ಚಿತ್ರರಂಗದ ಸುತ್ತ ಮುತ್ತ ಮತ್ತೊಮ್ಮೆ ಡ್ರಗ್ಸ್ ಘಾಟು ಎತ್ತಿದೆ. ಬೆಂಗಳೂರು ಹೊರ ವಲಯದಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಪಕ್ಕದ ತೆಲುಗು ಚಿತ್ರ ಉದ್ಯಮದ ದೊಡ್ಡ ದೊಡ್ಡವರು ಕುಣಿದು ಕುಪ್ಪಳಿಸಿದ್ದಾರೆ ಅನ್ನುವ ಸುದ್ದಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಆ ಪೈಕಿ ತೆಲುಗು ನಟಿ ಹೇಮಾ ಹೆಸರು ಮುಂಚೂಣಿಯಲ್ಲಿದ್ದರೆ, ಬೆಸಿಕಲಿ ಕರ್ನಾಟಕದವರಾದ ಶ್ರೀಕಾಂತ್ ಹೆಸರು ಕೂಡ ಚಾಲ್ತಿಯಲ್ಲಿದೆ. ಈ ಕಾರಣಕ್ಕೆ ಕೆರಳಿ ಕೆಂಡವಾಗಿರುವ ಶ್ರೀಕಾಂತ್ ಸದ್ಯಕ್ಕೆ ಸ್ಪಷ್ಟೀಕರಣವನ್ನ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ನಾನು ಇದ್ದೇ ಎಂಬ ವಿಚಾರ ಕೇಳಿ ನನಗೆ ಶಾಕ್ ಆಯಿತು ಎಂದಿರುವ ಶ್ರೀಕಾಂತ್ ಈ ಸುದ್ದಿ ಕೇಳಿ ಮೊದಲಿಗೆ ನನ್ನ ಕುಟುಂಬದರು ನಕ್ಕರು ಎಂದಿದ್ದಾರೆ. ನಾನು ಎಲ್ಲಿಯೂ ಹೋಗಿಲ್ಲ ಮನೆಯಲ್ಲಿಯೇ ಇದ್ದೇನೆ ಎಂದಿದ್ದಾರೆ.

Telugu Actor Srikanth Clarifies Allegations Surrounding Bengaluru Rave Party

ನನ್ನ ಹೆಸರನ್ನ ಸುಖಾ ಸುಮ್ಮನೆ ರೇವ್ ಪಾರ್ಟಿಯಲ್ಲಿ ಸೇರಿಸಿರುವುದರಲ್ಲಿ ತಪ್ಪಿಲ್ಲ. ಯಾಕೆಂದರೆ ಮೊದಲ ಬಾರಿಗೆ ನಾನು ವಿಡಿಯೋದಲ್ಲಿ ಗಡ್ಡ ಇರುವ ವ್ಯಕ್ತಿಯನ್ನು ನೋಡಿದಾಗ ನನ್ನ ರೀತಿಯೇ ಆತ ಕಾಣಿಸಿದ್ದಾನೆ ಎಂದಿರುವ ಶ್ರೀಕಾಂತ್ 'ಸುದ್ದಿ ಪ್ರಸಾರ ಮಾಡುವುದಕ್ಕೂ ಮುನ್ನ ಮಾಧ್ಯಮದ ಅನೇಕ ಸ್ನೇಹಿತರು ನನಗೆ ಕರೆ ಮಾಡಿ ವಿಷಯವನ್ನು ಸ್ಪಷ್ಟಪಡಿಸಿಕೊಂಡರು. ಆದರೆ ಕೆಲವು ವಾಹಿನಿಯವರು ಖಚಿತತೆ ಇಲ್ಲದೇ ಸುದ್ದಿ ಪ್ರಸಾರ ಮಾಡಿದರು ಎಂದಿದ್ದಾರೆ.

ಇನ್ನೂ ರೇವ್ ಪಾರ್ಟಿ ಅಂದರೆ ಏನು ಅನ್ನುವುದೇ ನನಗೆ ಗೊತ್ತಿಲ್ಲ ಎಂದಿರುವ ಶ್ರೀಕಾಂತ್, ನಾನು ಬರ್ತ್​ಡೇ ಪಾರ್ಟಿಗಳಿಗೆ ಹೋಗುತ್ತೇನೆ. ಆದರೆ ಒಂದು ಗಂಟೆಯೊಳಗೆ ಮರಳಿ ಮನೆಗೆ ಬರುತ್ತೇನೆ ಎಂದಿದ್ದಾರೆ. ಇದೇ ವೇಳೆ ಸುದ್ದಿ ಪ್ರಸಾರ ಮಾಡುವುದಕ್ಕೂ ಮುನ್ನ, ಆ ಸುದ್ದಿಯ ಆಲ-ಅಗಲ-ಸತ್ಯ-ಮಿಥ್ಯವನ್ನ ಪರಿಶೀಲಿಸಿ ಎಂದು ಮಾಧ್ಯಮದವರಲ್ಲಿ ಮನವಿ ಮಾಡಿಕೊಂಡಿರುವ ಶ್ರೀಕಾಂತ್ ನಾನವನಲ್ಲ, ನನಗೂ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಗೆ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

Telugu Actor Srikanth Clarifies Allegations Surrounding Bengaluru Rave Party

ಅಂದ್ಹಾಗೇ ಕಾನ್ ಕಾರ್ಡ್ ಗೋಪಾಲ ರೆಡ್ಡಿ ಎಂಬುವವರ ಮಾಲಿಕತ್ವದ ಜಿ ಆರ್.ಫಾರ್ಮ್​​​ಹೌಸ್​​ನಲ್ಲಿ ಹೈದರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜನೆ ಮಾಡಿದ್ದ. ಬರ್ತಡೇ ಪಾರ್ಟಿ ಹೆಸರಿನಲ್ಲಿ ನಡೆಯುತ್ತಿದ್ದ ಈ ಪಾರ್ಟಿ ತಡರಾತ್ರಿ 2 ಗಂಟೆಯಾದ್ರೂ ಮುಗಿದಿರಲಿಲ್ಲ. ಅವಧಿ ಮೀರಿ ಪಾರ್ಟಿ ಮಾಡಲಾಗುತ್ತಿರುವ ಸುದ್ದಿ ತಿಳಿದ ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದಾಗ ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ.

ಬೆಂಜ್ ಕಾರಿನಲ್ಲಿ ಆಂಧ್ರ ಶಾಸಕನ ಪಾಸ್ ಪತ್ತೆಯಾಗಿದೆ. ಎಂಎಲ್​ಎ ಕಾಕನಿ ಗೋವರ್ಧನರೆಡ್ಡಿ ಹೆಸರಿನ ಪಾಸ್ ಸಿಕ್ಕಿದೆ. ಜೊತೆಗೆ ದಾಳಿ ನಡೆದ ಫಾರ್ಮ್​​​ಹೌಸ್ ಬಳಿ ಮರ್ಸಿಡಿಸ್-ಬೆನ್ಜ್, ಜಾಗ್ವಾರ್, ಆಡಿ ಕಾರ್ ಸೇರಿದಂತೆ 15ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಪಾರ್ಟಿಯಲ್ಲಿ ಮಾಡೆಲ್​​ಗಳು, ಟೆಕ್ಕಿಗಳು ತೆಲುಗು ನಟಿಯರು ಸೇರಿದಂತೆ ಅನೇಕರು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ಗುರುತು ಪತ್ತೆ ಮಾಡುತ್ತಿದ್ದಾರೆ. ಎಲೆಕ್ಟ್ರಾನಿಕ್​​ಸಿಟಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.

More from Filmibeat

English summary
Tollywood Actor Srikanth Issues Clarification Against Bengaluru Rave Party,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X