twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗು ನಟ ಶ್ರೀಕಾಂತ್ ಅವರ ತಂದೆ ನಿಧನ

    |

    ತೆಲುಗು ನಟ ಶ್ರೀಕಾಂತ್ ಅವರ ತಂದೆ ಪರಮೇಶ್ವರ ರಾವ್ (70) ನಿಧನರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಪರಮೇಶ್ವರ ರಾವ್ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.

    ಹಲವು ವರ್ಷಗಳಿಂದ ಶ್ರೀಕಾಂತ್ ಅವರ ತಂದೆಗೆ ಉಸಿರಾಟ ತೊಂದರೆ ಕಾಡುತ್ತಿತ್ತು. ನಾಲ್ಕೈದು ತಿಂಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

    ಅನುಷ್ಕಾ ಶರ್ಮಾ ಗಾಡ್ ಫಾದರ್, ಫ್ಯಾಶನ್ ಡಿಸೈನರ್ ವೆಂಡೆಲ್ ರಾಡ್ರಿಕ್ಸ್ ನಿಧನಅನುಷ್ಕಾ ಶರ್ಮಾ ಗಾಡ್ ಫಾದರ್, ಫ್ಯಾಶನ್ ಡಿಸೈನರ್ ವೆಂಡೆಲ್ ರಾಡ್ರಿಕ್ಸ್ ನಿಧನ

    ಮೂಲತಃ ಕರ್ನಾಟಕದವರಾಗಿದ್ದ ಪರಮೇಶ್ವರ್ ರಾವ್ ಕರ್ನಾಟಕದ ಗಂಗಾವತಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿದ್ದರು. ಈಗ ಪತ್ನಿ ಝಾನ್ಸಿ ಮತ್ತು ಶ್ರೀಕಾಂತ್, ಅನಿಲ್ ಹಾಗೂ ನಿರ್ಮಲ ಅವರನ್ನು ಬಿಟ್ಟು ಅಗಲಿದ್ದಾರೆ.

    Telugu Actor Srikanth Father Is No More

    ಶ್ರೀಕಾಂತ್ ಅವರ ತಂದೆ ನಿಧನಕ್ಕೆ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ. ಚಿರಂಜೀವಿ ಸೇರಿದಂತೆ ಹಲವು ನಟರು, ನಿರ್ದೇಶಕ, ನಿರ್ಮಾಪಕರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆದಿದೆ.

    English summary
    Telugu actor srikanth's father Parameshwar Rao (70) passed away last mid night.
    Monday, February 17, 2020, 16:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X