For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆಯಿಂದಲೇ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದ ನಟ ಸುನೀಲ್

  |

  ತೆಲುಗಿನ ಖ್ಯಾತ ಹಾಸ್ಯ ನಟ ಸುನಿಲ್ ನಿನ್ನೆ (ಜನವರಿ 23) ಆನಾರೋಗ್ಯದ ಕಾರಣ ಹೈದರಾಬಾದ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ನಟ ಸುನೀಲ್ ವರ್ಮಾ ಚಿಕಿತ್ಸೆ ಪಡೆಯುತ್ತಿರುವ ಫೋಟೋವೊಂದು ಬಹಿರಂಗವಾಗಿತ್ತು.

  ಈ ಫೋಟೋ ನೋಡಿದ ಅಭಿಮಾನಿಗಳು ಹಾಗೂ ಟಾಲಿವುಡ್ ಮಂದಿಗೆ ಆಘಾತವಾಗಿತ್ತು. ಸುನಿಲ್ ಅವರಿಗೆ ಏನಾಯ್ತು ಎಂಬ ಆತಂಕ ಹೆಚ್ಚಾಗಿತ್ತು. ಜ್ವರ ಹೆಚ್ಚಾಗಿದ್ದ ಕಾರಣ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು ಎಂಬ ವಿಷಯ ತಿಳಿದ ಮೇಲೆ ಫ್ಯಾನ್ಸ್ ನಿರಾಳರಾದರು.

  ಖ್ಯಾತ ಹಾಸ್ಯ ನಟ ಸುನಿಲ್ ವರ್ಮ ಆಸ್ಪತ್ರೆಗೆ ದಾಖಲು: ಐಸಿಯುನಲ್ಲಿ ಚಿಕಿತ್ಸೆಖ್ಯಾತ ಹಾಸ್ಯ ನಟ ಸುನಿಲ್ ವರ್ಮ ಆಸ್ಪತ್ರೆಗೆ ದಾಖಲು: ಐಸಿಯುನಲ್ಲಿ ಚಿಕಿತ್ಸೆ

  ಇದೀಗ, ಸ್ವತಃ ಸುನಿಲ್ ಅವರೇ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಅಷ್ಟಕ್ಕೂ, ಸುನಿಲ್ ಆರೋಗ್ಯ ಸ್ಥಿತಿ ಹೇಗಿದೆ? ಮುಂದೆ ಓದಿ...

  ನಾನು ಆರೋಗ್ಯವಾಗಿದ್ದೇನೆ

  ನಾನು ಆರೋಗ್ಯವಾಗಿದ್ದೇನೆ

  ''ನನ್ನ ಬಗ್ಗೆ ಇಷ್ಟೊಂದು ಕಾಳಜಿ ತೋರಿಸುವ ನಿಮ್ಮಂತ ಹಿತೈಷಿಗಳ ಆಶೀರ್ವಾದಿಂದ ನಾನು ಆರಾಮಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಹಾರೈಕೆಗೆ ನನ್ನ ಧನ್ಯವಾದಗಳು'' ಎಂದು ನಟ ಸುನಿಲ್ ಸ್ಪಷ್ಟನೆ ನೀಡಿದ್ದಾರೆ.

  ಡಿಸ್ಕೋರಾಜ ನೋಡಿರಿ

  ಡಿಸ್ಕೋರಾಜ ನೋಡಿರಿ

  'ನಾಳೆಯಿಂದ ಚಿತ್ರಮಂದಿರದಲ್ಲಿ ಡಿಸ್ಕೋರಾಜ ಸಿನಿಮಾ ನೋಡಿ ಮನರಂಜನೆ ಪಡೆಯಿರಿ' ಎಂದು ಮನವಿ ಮಾಡಿಕೊಂಡಿದ್ದಾರೆ. ರವಿತೇಜ ನಟಿಸಿರುವ ಈ ಚಿತ್ರದಲ್ಲಿ ನಟ ಸುನಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಲಿವರ್ ಸಮಸ್ಯೆ ಎನ್ನಲಾಗಿದೆ

  ಲಿವರ್ ಸಮಸ್ಯೆ ಎನ್ನಲಾಗಿದೆ

  ಸುನಿಲ್ ವರ್ಮಾಗೆ ಲಿವರ್ ಸಮಸ್ಯೆ ಇದೆ ಎನ್ನಲಾಗಿದೆ. ಬಹಳ ಕಾಲದಿಂದ ಆ ಸಮಸ್ಯೆಯಿಂದ ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರಂತೆ. ಆದರೆ, ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದು ಮಾತ್ರ ಜ್ವರದ ಕಾರಣದಿಂದ. ಈಗ ಜ್ವರ ಕಮ್ಮಿಯಾಗಿದ್ದು ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

  ಹೀರೋ ಆಗಿ ನಟಿಸಬೇಡಿ

  ಹೀರೋ ಆಗಿ ನಟಿಸಬೇಡಿ

  ಒಂದು ಸಮಯದಲ್ಲಿ ನಟ ಸುನಿಲ್ ತೆಲುಗು ಇಂಡಸ್ಟ್ರಿಗೆ ಬಹುಬೇಡಿಕೆ ಹಾಸ್ಯ ನಟ. ಪ್ರತಿಯೊಬ್ಬ ಸ್ಟಾರ್ ನಟನ ಚಿತ್ರಗಳಲ್ಲೂ ಸುನಿಲ್ ಇರಬೇಕಿತ್ತು ಎಂಬ ಬೇಡಿಕೆ ಇತ್ತು. ಬಳಿಕ, ಸುನಿಲ್ ಅವರು ಹಾಸ್ಯನಟನೆ ಬಿಟ್ಟು ಹೀರೋ ಆಗಿ ನಟಿಸಲು ಆರಂಭಿಸಿದರು. ಒಂದೆರೆಡು ಸಿನಿಮಾ ಬಿಟ್ಟರೆ ಉಳಿದ ಚಿತ್ರಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಆಗಲಿಲ್ಲ. ಹಾಗಾಗಿ, ಹೀರೋ ಆಗಿ ನಟಿಸಬೇಡಿ, ಹಾಸ್ಯನಟನಾಗಿ ಮುಂದುವರಿಯಿರಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

  English summary
  Telugu famous comedy actor Sunil Varma has admitted in hospital at hyderabad. after treatment he clarified about his health condition.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X