For Quick Alerts
  ALLOW NOTIFICATIONS  
  For Daily Alerts

  ಹೊಸ ಸಾಹಸಕ್ಕೆ ಕೈ ಹಾಕಿದ ನಟಿ ತಮನ್ನಾ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ತಮನ್ನಾ ಹೊಸ ಸಾಹಸಕ್ಕೆ ಹಾಕಿದ್ದಾರೆ. ಸಿನಿಮಾ, ವೆಬ್ ಸೀರಿಸ್ ಬಳಿಕ ಈಗ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ತಮನ್ನಾ ಕಿರುತೆರೆಗೆ ಮರಳುತ್ತಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

  ಅಂದಹಾಗೆ ತಮನ್ನಾ ಪ್ರಸಿದ್ಧ ಅಡುಗೆ ಶೋ ನಡೆಸಿಕೊಡುತ್ತಿದ್ದಾರೆ. ಕಿರುತೆರೆಯ ಜನಪ್ರಿಯ ಅಡುಗೆ ಶೋ ಮಾಸ್ಟರ್ ಶೆಫ್ ಗಾಗಿ ತಮನ್ನಾ ಇನ್ಮುಂದೆ ಟಿವಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ತೆಲುಗು ಕಿರುತೆರೆಯ ಪ್ರಸಿದ್ಧ ಅಡುಗೆ ಶೋ ಮಾಸ್ಟರ್ ಶೆಫ್ ನಡೆಸಿಕೊಡಲು ತಮನ್ನಾ ಈಗಾಗಲೇ ಸಹಿ ಮಾಡಿದ್ದು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

  ಸದ್ಯದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ ಶೋ ಆಯೋಜಕರು ಎನ್ನುವ ಮಾತು ಕೇಳಿಬರುತ್ತಿದೆ. ಅಂದಹಾಗೆ ಪ್ರಸಿದ್ಧ ಅಡಿಗೆ ಶೋ ಜೆಮಿನಿ ಟಿವಿಯಲ್ಲಿ ಪ್ರಸಾರವಾಗಲಿಗೆ. ಮೊದಲ ಬಾರಿಗೆ ಕಿರುತೆರೆ ಶೋ ಹೋಸ್ಟ್ ಮಾಡುತ್ತಿರುವ ತಮನ್ನಾ ನೋಡಲು ಅಭಿಮಾನಿಗಳು ಸಹ ಕುತೂಹಲದಿಂದ ಕಾಯುತ್ತಿದ್ದಾರೆ.

  ಇತ್ತೀಚಿಗಷ್ಟೆ ತಮಿಳು ಮಾಸ್ಟರ್ ಶೆಫ್ ಗಾಗಿ ನಟ ವಿಜಯ್ ಸೇತುಪತಿ ಕಿರುತೆಗೆ ರಿ-ಎಂಟ್ರಿ ಕೊಟ್ಟಿದ್ದರು. ತಮಿಳು ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಮಾಸ್ಟರ್ ಶೆಫ್ ಅಡುಗೆ ಶೋವನ್ನು ವಿಜಯ್ ಸೇತುಪತಿ ನಡೆಸಿಕೊಡುತ್ತಿದ್ದಾರೆ. ಇದೀಗ ತೆಲುಗು ಮಾಸ್ಟರ್ ಶೆಫ್ ಗೆ ತಮನ್ನಾ ಎಂಟ್ರಿ ಕೊಟ್ಟಿದ್ದಾರೆ. ಇನ್ನು ವಿಶೇಷ ಎಂದರೆ ಕನ್ನಡದಲ್ಲೂ ಮಾಸ್ಟರ್ ಶೆಫ್ ಶೋ ಬರುತ್ತಿದ್ದು, ಕಿಚ್ಚ ಸುದೀಪ್ ನಡೆಸಿಕೊಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ನಟನಾಗುವ ಆಸೆಯೇ ಅವರಿಗಿರಲಿಲ್ಲ, ಹಾಗಾದ್ರೆ Sanchari Vijay ಬಯಸಿದ್ದೇನು?? | Filmibeat Kannada

  ಇನ್ನು ತಮನ್ನಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಹಿಂದಿಯ ಸೂಪರ್ ಹಿಟ್ ಅಂಧಾಧುನ್ ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ. ಇನ್ನೂ ಕನ್ನಡದ ಲವ್ ಮಾಕ್ಟೇಲ್ ರಿಮೇಕ್ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ

  English summary
  Telugu Actor Tamannaah makes her TV Debut as host of Master Chef show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X