ದಿನಕ್ಕೆ ₹2 ಕೋಟಿ ಸಂಭಾವನೆ ಬಿಟ್ಟು ಪಾಲಿಟಿಕ್ಸ್‌ಗೆ ಬಂದ ಪವನ್ ಬಳಿ ಒಟ್ಟು ಆಸ್ತಿ ಎಷ್ಟಿದೆ?

ತೆಲುಗು ನಟ ಪವನ್ ಕಲ್ಯಾಣ್‌ ಸಿನಿಮಾ ಬಿಟ್ಟು ರಾಜಕೀಯರಂಗದಲ್ಲಿ ಫುಲ್ ಟೈಮ್ ಬ್ಯುಸಿಯಾಗಿಬಿಟ್ಟಿದ್ದಾರೆ. ಆಂಧ್ರದ ಡಿಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಟಿಸುತ್ತಿದ್ದ ಸಿನಿಮಾಗಳನ್ನು ಅರ್ಧಕ್ಕೆ ಬಿಟ್ಟು ಸರ್ಕಾರದ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ. ಪವರ್ ಸ್ಟಾರ್ ನಟಿಸುತ್ತಿದ್ದ ಸಿನಿಮಾಗಳ ಕಥೆಯೇನು? ಎನ್ನುವ ಪ್ರಶ್ನೆಯೂ ಕೆಲವರನ್ನು ಕಾಡುತ್ತಿದೆ.

ರಾಜಕೀಯರಂಗದಲ್ಲಿ ಸಕ್ರಿಯರಾಗಿರುವ ಪವನ್ ಕಲ್ಯಾಣ್ ಮತ್ತೆ ಚಿತ್ರಗಳಲ್ಲಿ ನಟಿಸಲ್ವಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಇದೆಲ್ಲದರ ನಡುವೆ ಅಭಿಮಾನಿಗಳು ಮಾತ್ರ ಮತ್ತೆ ತೆರೆಮೇಲೆ ನೆಚ್ಚಿನ ನಟನನ್ನು ನೋಡಲು ಕಾಯುತ್ತಿದ್ದಾರೆ. ಸದ್ಯ 'ಗಬ್ಬರ್ ಸಿಂಗ್' ಸಿನಿಮಾ ರೀ ರಿಲೀಸ್ ಆಗಿ ಸದ್ದು ಮಾಡ್ತಿದೆ. ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದಾಗಲೇ ಪವರ್ ಸ್ಟಾರ್ ರಾಜಕೀಯ ಪ್ರವೇಶ ಕೆಲವರಿಗೆ ಬೇಸರ ತಂದಿದೆ.

Telugu Actor turned politician Pawan Kalyan s Total net worth

ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಹಲವರು ರಾಜಕೀಯರಂಗಕ್ಕೆ ಬಂದಿದ್ದಾರೆ. ಕೆಲವರು ಗೆದ್ದಿದ್ದಾರೆ. ಮತ್ತೆ ಕೆಲವರು ಸೋತಿದ್ದಾರೆ. ಸತತ 10 ವರ್ಷಗಳ ಹೋರಾಟದ ಫಲವಾಗಿ ಪವನ್ ಕಲ್ಯಾಣ್ ಆಂಧ್ರ ಡಿಸಿಎಂ ಪಟ್ಟಕ್ಕೆ ಏರಿದ್ದಾರೆ. ಇನ್ನು ರಾಜಕೀಯರಂಗಕ್ಕೆ ಬಂದ ಮೇಲೂ ಕೆಲವರು ಸಿನಿಮಾಗಳಲ್ಲಿ ನಟಿಸುವುದು ಬಿಟ್ಟಿಲ್ಲ.

ಕಮಲ್ ಹಾಸನ್, ಬಾಲಕೃಷ್ಣ ಸೇರಿದಂತೆ ಕೆಲವರು ರಾಜಕೀಯ- ಸಿನಿಮಾ ಎರಡನ್ನೂ ಸರಿದೂಗಿಸಿಕೊಮಡು ಹೋಗುತ್ತಿದ್ದಾರೆ. ಪವನ್ ಕಲ್ಯಾಣ್ ಮಾತ್ರ ಸಂಪೂರ್ಣವಾಗಿ ಪಾಲಿಟಿಕ್ಸ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ. ಪವರ್ ಸ್ಟಾರ್ ರಾಜಕೀಯರಂಗಕ್ಕೆ ಬಂದು ಬದಲಾವಣೆ ತರಬೇಕು ಎಂದುಕೊಂಡವರೇ ಇನ್ನುಮುಂದೆ ಸಿನಿಮಾಗಳಲ್ಲಿ ನಟಿಸಲ್ವಾ? ಎಂದು ಈಗ ಕೇಳುವಂತಾಗಿದೆ.

ತೆಲುಗು ಚಿತ್ರರಂಗದಲ್ಲಿ ಪವರ್‌ ಕಲ್ಯಾಣ್‌ಗೆ ಭಾರೀ ಕ್ರೇಜ್‌ ಇದೆ. ಅವರ ಸಿನಿಮಾಗಳು ನೂರಾರು ಕೋಟಿ ಬ್ಯುಸಿನೆಸ್ ಮಾಡುತ್ತದೆ. ದೇಶ ವಿದೇಶಗಳಲ್ಲಿ ಕೂಡ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತದೆ. ಅದೇ ಕಾರಣಕ್ಕೆ ಕೋಟಿ ಕೋಟಿ ಸಂಭಾವನೆ ಕೊಡಲು ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಇನ್ನು ಸಹೋದರ ಚಿರಂಜೀವಿ ಪ್ರಭಾವಳಿಯಲ್ಲೇ ಪವನ್ ಚಿತ್ರರಂಗಕ್ಕೆ ಬಂದರು. ಆದರೆ ಬಳಿಕ ತಮ್ಮದೇ ಹೊಸ ಇಮೇಜ್ ಸೃಷ್ಟಿಸಿಕೊಂಡರು. ವಿಭಿನ್ನ ಸ್ಟೈಲ್, ಮ್ಯಾನರಿಸಂ ಅಭಿಮಾನಿಗಳ ಮನಗೆದ್ದರು.

Telugu Actor turned politician Pawan Kalyan s Total net worth

ಅಂದಹಾಗೆ ಪವನ್ ಕಲ್ಯಾಣ್ ಚಿತ್ರವೊಂದರಲ್ಲಿ ನಟಿಸಲು ಒಂದು ದಿನ ಕಾಲ್‌ಶೀಟ್‌ಗೆ 2 ಕೋಟಿ ಸಂಭಾವನೆ ಪಡೆದಿರುವುದು ಇದೆ. 'ಬ್ರೋ' ಎನ್ನುವ ಚಿತ್ರಕ್ಕೆ 22 ದಿನಗಳ ಕಾಲ್‌ಶೀಟ್ ಕೊಟ್ಟು 45 ಕೋಟಿ ರೂ. ಸಂಭಾವನೆ ಪಡೆದಿದ್ದರು. ಇದನ್ನು ಸ್ವತಃ ಪವನ್ ಕಲ್ಯಾಣ್ ಬಹಿರಂಗ ವೇದಿಕೆಯಲ್ಲಿ ಘೋಷಿಸಿದ್ದರು. ದಿನಕ್ಕೆ 2 ಕೋಟಿ ರೂ. ಅಂದ್ರೆ ತಮಾಷೆ ಮಾತಲ್ಲ. ಚಿತ್ರರಂಗದಲ್ಲಿ ಇಷ್ಟು ಬೇಡಿಕೆಯಲ್ಲಿದ್ದ ಪವರ್ ಸ್ಟಾರ್ ದಿಢೀರ್ ಚಿತ್ರಗಳಲ್ಲಿ ನಟಿಸುವುದು ನಿಲ್ಲಿಸಿದ್ದಾರೆ.

1996ರಲ್ಲಿ 'ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ' ಚಿತ್ರದ ಮೂಲಕ ಪವನ್ ಚಿತ್ರರಂಗಕ್ಕೆ ಬಂದರು. ಬಳಿಕ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಕೋಟಿ ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಸಿನಿಮಾ ಬಿಟ್ಟು ಬೇರೆ ವ್ಯವಹಾರಗಳಲ್ಲಿ ಕೂಡ ಹಣ ತೊಡಗಿಸಿದ್ದಾರೆ. ಇನ್ನು ಪತ್ನಿಯರಿಂದ ಕೂಡ ಸಾಕಷ್ಟು ಆಸ್ತಿ ಸಿಕ್ಕಿದೆ. ಆದರೆ ಜಾಹೀರಾತುಗಳಲ್ಲಿ ನಟಿಸಿದ್ದು ಕಮ್ಮಿ. ಆರಂಭದಲ್ಲಿ ಒಂದೆರಡು ಉತ್ಪನ್ನಗಳ ರಾಯಭಾರಿ ಆಗಿದ್ದರು. ಬಳಿಕ ಮುಂದುವರೆಸಲಿಲ್ಲ. ಇನ್ನು ಪವನ್ ಒಟ್ಟು ಆಸ್ತಿ ಮೌಲ್ಯ ಎಷ್ಟಿರಬಹುದು ಎನ್ನುವ ಕುತೂಹಲ ಸಹಜ.

ಇತ್ತೀಚೆಗೆ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಪೀಠಾಪುರಂ ಜನಸೇನಾ ಶಾಸಕನಾಗಿ ಪವನ್ ಸ್ಪರ್ಧಿಸಿ ಗೆದ್ದರು. ಆದರೆ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ವಿವರ ನೀಡಿದ್ದರು. ಅಫಿಡವಿಟ್ ಪ್ರಕಾರ ಪವನ್ ಕಲ್ಯಾಣ್ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಬಳಿ ಒಟ್ಟು 164.53 ಕೋಟಿ ರೂ. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ತಮ್ಮ ಬಳಿ 65.77 ಕೋಟಿ ರೂ. ಮೌಲ್ಯದ ಆಸ್ತಿ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಕೊನೆ 5 ವರ್ಷಗಳಲ್ಲಿ 114 ಕೋಟಿ ರೂ. ಆಸ್ತಿ ಸಂಪಾದಿಸಿರುವುದಾಗಿ ತಿಳಿಸಿದ್ದರು.

ಆಸ್ತಿ ಮೌಲ್ಯ ಮಾತ್ರವಲ್ಲ 64 ಕೋಟಿ ರೂ. ಸಾಲ ಇರುವುದಾಗಿಯೂ ಮಾಹಿತಿ ನೀಡಿದ್ದರು. ಬ್ಯಾಂಕ್‌ಗಳಿಂದ ಹಾಗೂ ಕೆಲ ವ್ಯಕ್ತಿಗಳಿಂದ ಸಾಲ ಪಡೆದಿರುವುದಾಗಿ ವಿವರಿಸಿದ್ದರು. ಅತ್ತಿಗೆ ಸುರೇಖಾ ಬಳಿಕ ಕೂಡ 2 ಕೋಟಿ ರೂ. ಸಾಲ ಪಡೆದಿರುವುದಾಗಿ ನಮೂದಿಸಿದ್ದರು. ಇನ್ನು ಮೂರನೇ ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿರುವ ಆಸ್ತಿ ಬಗ್ಗೆಯೂ ಮಾಹಿತಿ ನೀಡಿದ್ದರು. ಇನ್ನು ಐಷಾರಾಮಿ ಬಂಗಲೆ, ಕಾರುಗಳು ಪವರ್ ಸ್ಟಾರ್ ಬಳಿಯಿವೆ.

More from Filmibeat

English summary
Andhra DCM Pawan Kalyan's net worth recently revealed in his affidavit;
Read more about: pawan kalyan tollywood telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X