ದೀಪಾವಳಿಗೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಉಪೇಂದ್ರ; ಯಾವ ಸಿನಿಮಾ?

ರಿಯಾಲ್ ಸ್ಟಾರ್ ಉಪೇಂದ್ರ ಬಳಿ ಕೈತುಂಬ ಸಿನಿಮಾಗಳಿವೆ. ಸಿನಿಮಾ ಮತ್ತು ಪ್ರಜಾಕೀಯ ಎರಡರಲ್ಲೂ ಬ್ಯುಸಿ ಇರುವ ಉಪೇಂದ್ರ ಕನ್ನಡ ಮಾತ್ರವಲ್ಲದೇ ಪರಭಾಷೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಸದ್ಯ ರಿಯಲ್ ಸ್ಟಾರ್ ಬಹು ನಿರೀಕ್ಷೆಯ 'ಕಬ್ಜ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಈಗಾಗಲೇ ಪೋಸ್ಟರ್ ಗಳ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿರುವ 'ಕಬ್ಜ' ಕನ್ನಡದ ಜೊತೆಗೆ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಪ್ಯಾನ್ ಇಂಡಿಯಾ 'ಕಬ್ಜ' ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಹುನಿರೀಕ್ಷೆಯ ಚಿತ್ರಕ್ಕೆ ಆರ್.ಚಂದ್ರು ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಕಬ್ಜ' ಚಿತ್ರದ ಬ್ಯುಸಿಯ ನಡುವೆಯೂ ಉಪೇಂದ್ರ ಈ ವರ್ಷ ದೀಪಾವಳಿಗೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ಅಂದಹಾಗೆ 'ಕಬ್ಜ' ಸಿನಿಮಾ ಬಿಡುಗಡೆ ಸಿದ್ಧವಾಗಿದೆಯಾ ಅಂತ ಯೋಚಿಸಬೇಡಿ. ರಿಯಲ್ ಸ್ಟಾರ್ ಅಭಿಮಾನಿಗಳ ಮುಂದೆ ಬರ್ತಿರುವುದು ಕನ್ನಡ ಸಿನಿಮಾ ಮೂಲಕ ಅಲ್ಲ, ತೆಲುಗು ಸಿನಿಮಾದಿಂದ. ಉಪೇಂದ್ರ ನಟನೆಯ ತೆಲುಗಿನ 'ಗನಿ' ಸಿನಿಮಾ ದೀಪಾವಳಿಗೆ ಬಿಡುಗಡೆಯಾಗುವುದಾಗಿ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಅಂದಹಾಗೆ 'ಗನಿ' ತೆಲುಗು ಸ್ಟಾರ್ ವರುಣ್ ತೇಜ್ ನಾಯಕನಾಗಿ ನಟಿಸಿರುವ ಸಿನಿಮಾ. ಚಿತ್ರದಲ್ಲಿ ವರುಣ್ ಬಾಕ್ಸರ್ ಆಗಿ ಮಿಂಚಿದ್ದಾರೆ. ಈಗಾಗಲೇ ಪೋಸ್ಟರ್ ಗಳ ಮೂಲಕ ಅಭಿಮಾನಿಗಳ ಕುತೂಹಲ ಕೆರಳಿಸಿದ್ದ ಗನಿ ದೀಪಾವಳಿಗೆ ಎಂಟ್ರಿ ಕೊಡುತ್ತಿದೆ.

Telugu Actor Varun Tej and Real star Upendra starrer Ghani movie will release on Deepawali

ಕೊರೊನಾ 2ನೇ ಮುಗಿದು ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಅನೇಕ ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತಿವೆ. ಈಗಾಗಲೇ ಅನೇಕ ಸಿನಿಮಾಗಳ ಬಿಡುಗಡೆ ದಿನಾಂಕ ಲಾಕ್ ಆಗಿದೆ. ಇನ್ನು ಕೆಲವು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ಹೆಚ್ಚು ತಲೆ ಕೆಡಿಸಿಕೊಂಡಿವೆ. ಕೊರೊನಾ 3ನೇ ಅಲೆ ಮತ್ತೆ ಸದ್ದು ಮಾಡುತ್ತಿರುವ ಕಾರಣ ಕೆಲವು ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಣೆ ಮಾಡದೆ ಕಾಯುತ್ತಿವೆ.

ಈ ನಡುವೆ ವರುಣ್ ತೇಜ್ 'ಗನಿ' ಸಿನಿಮಾ ಧೈರ್ಯ ಮಾಡಿ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ದೀಪಾವಳಿಗೆ ಅಂದರೆ ನವೆಂಬರ್ 4ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸದ್ಯ ದೀಪಾವಳಿಗೆ ಎಂದು ಅನೌನ್ಸ್ ಮಾಡಿರುವ ತಂಡ ದಿನಾಂಕವನ್ನು ನಿಗಧಿ ಮಾಡಿಲ್ಲ. ಈ ಕ್ರೀಡಾ ಆಧಾರಿತ ಚಿತ್ರಕ್ಕೆ ಕಿರಣ್ ಕೊರಪತಿ ಆಕ್ಷನ್ ಕಟ್ ಹೇಳಿದ್ದಾರೆ.

ಈ ಚಿತ್ರದಲ್ಲಿ ಕನ್ನಡ ರಿಯಲ್ ಸ್ಟಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೋಚ್ ಪಾತ್ರ ನಿರ್ವಹಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಪಾತ್ರದ ಬಗ್ಗೆ ಇನ್ನು ರಿವೀಲ್ ಆಗಿಲ್ಲ. ಅಂದಹಾಗೆ ರಿಯಲ್ ಸ್ಟಾರ್ ಜೊತೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮತ್ತು ಖ್ಯಾತ ವಿಲನ್ ಜಗಪತಿ ಬಾಬ್ ಕೂಡ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ವರುಣ್ ತೇಜ್ ಗೆ ನಾಯಕಿಯಾಗಿ ಬಾಲಿವುಡ್ ಖ್ಯಾತ ನಟಿ ಸಾಯಿ ಮಂಜ್ರೇಕರ್ ಬಣ್ಣ ಹಚ್ಚಿದ್ದಾರೆ. ಮೊದಲ ಬಾರಿಗೆ ಸಾಯಿ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಲ್ಲು ಅರವಿಂದ್ ಹಿರಿಯ ಪುತ್ರ ಅಲ್ಲು ಬಾಬಿ ನಿರ್ಮಾಣ ಮಾಡುತ್ತಿದ್ದಾರೆ.

Telugu Actor Varun Tej and Real star Upendra starrer Ghani movie will release on Deepawali

ಇನ್ನು ಈ ಚಿತ್ರದಲ್ಲಿ ನಟಿ ತಮನ್ನಾ ಭಾಟಿಯಾ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಚಿತ್ರದಲ್ಲಿ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳಿದ್ದು ಹಾಲಿವುಡ್ ಆಕ್ಷನ್ ನಿರ್ದೇಶಕರು ಆಕ್ಷನ್ ಸೀಕ್ವೆನ್ಸ್ ನಿರ್ದೇಶನ ಮಾಡಿದ್ದಾರೆ. ಅಮೆರಿಕನ್ ಸಿವಿಲ್ ವಾರ್, ಕ್ಯಾಪ್ಟನ್ ಅಮೆರಿಕ ಅಂಥ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದ ಲರ್ನೆಲ್ ಸ್ಟೋವಾಲ್ ಸ್ಟಂಟ್ ನಿರ್ದೇಶನ ಮಾಡಿದ್ದಾರೆ. ಎಸ್ ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ರಿಯಲ್ ಸ್ಟಾರ್ ಈ ವರ್ಷ ಕನ್ನಡ ಅಭಿಮಾನಿಗಳ ಮುಂದೆ ಬರುವುದು ಅನುಮಾನ. ಆದರೆ ತೆಲುಗು ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ರಿಯಲ್ ಸ್ಟಾರ್ 5 ವರ್ಷದ ಬಳಿಕ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ನಟನೆಯ 'ಸನ್ ಆಫ್ ಸತ್ಯಮೂರ್ತಿ' ಬಳಿಕ 'ಗನಿ' ಸಿನಿಮಾದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟಿದ್ದಾರೆ.

ಸದ್ಯ ರಿಯಲ್ ಸ್ಟಾರ್ ಬಳಿ ಕನ್ನಡದಲ್ಲಿ 'ಹೋಮ್ ಮಿನಿಸ್ಟರ್', 'ತ್ರಿಶೂಲಮ್', 'ಲಗಾಮ್', 'ಬುದ್ಧಿವಂತ-2' ಸಿನಿಮಾಗಳಿವೆ. ಕೊನೆಯದಾಗಿ ರಿಯಲ್ ಸ್ಟಾರ್ 'ಐ ಲವ್ ಯೂ' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

More from Filmibeat

English summary
Telugu Actor Varun Tej and Real star Upendra starrer Ghani movie will release on Deepawali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X