For Quick Alerts
  ALLOW NOTIFICATIONS  
  For Daily Alerts

  15 ಕೋಟಿ ಬೆಲೆಬಾಳುವ ಹೊಸ ಮನೆ ಖರೀದಿಸಿದ ನಟ ವಿಜಯ್ ದೇವರಕೊಂಡ

  |

  ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಷನ್ ನಟ ವಿಜಯ್ ದೇವರಕೊಂಡ ಹೊಸ ಮನೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಅರ್ಜುನ್ ರೆಡ್ಡಿ ಚಿತ್ರದ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದ ನಟ ವಿಜಯ್ ದೇವರಕೊಂಡ ಹೆಸರು ಈಗ ತೆಲುಗು ಚಿತ್ರರಂಗ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.

  ತೆಲುಗು ಸ್ಟಾರ್ ನಟರ ಸಾಲಿನಲ್ಲಿ ನಿಂತು ಮೆರೆಯುತ್ತಿರುವ ವಿಜಯ್ ದೇವರಕೊಂಡ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ತೆಲುಗು ಮಾತ್ರವಲ್ಲದೆ ಗಡಿಗು ಮೀರಿ ಅಭಿಮಾನಿ ಬಳಗ ಸಂಪಾದಿಸಿರುವ ವಿಜಯ್ ಯುವಕರ ಮತ್ತು ಯುವತಿರಯ ಹಾಟ್ ಫೇವರಿಟ್ ನಟ. ಸದಾ ಒಂದಲ್ಲೊಂದು ವಿಚಾರದ ಮೂಲಕ ಸದ್ದು ಸುದ್ದಿ ಮಾಡುವ ವಿಜಯ ಈಗ ಹೊಸ ಮನೆ ಖರೀದಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

  ವಿಜಯ್ ದೇವರಕೊಂಡ ಮುಂದೆಯೇ 'ಅರ್ಜುನ್ ರೆಡ್ಡಿ' ಸಿನಿಮಾ ತಪ್ಪನ್ನು ಎತ್ತಿಹಿಡಿದ 'ಮಿಲನ' ನಟಿವಿಜಯ್ ದೇವರಕೊಂಡ ಮುಂದೆಯೇ 'ಅರ್ಜುನ್ ರೆಡ್ಡಿ' ಸಿನಿಮಾ ತಪ್ಪನ್ನು ಎತ್ತಿಹಿಡಿದ 'ಮಿಲನ' ನಟಿ

  15 ಕೋಟಿ ಬೆಲೆಬಾಳುವ ವಿಜಯ್ ಹೊಸ ಮನೆ

  15 ಕೋಟಿ ಬೆಲೆಬಾಳುವ ವಿಜಯ್ ಹೊಸ ಮನೆ

  ದಿನದಿಂದದಿನಕ್ಕೆ ವಿಜಯ್ ಖ್ಯಾತಿ ಹೆಚ್ಚಾಗುತ್ತಲೆ ಇದೆ. ಇದೆ ಯಶಸ್ಸಿನಲ್ಲಿ ವಿಜಯ್ ಈಗ ದುಬಾರಿ ಮನೆ ಖರೀದಿಸಿದ್ದಾರೆ. ಹೌದು, ವಿಜಯ್ ದೇವರಕೊಂಡ 15 ಕೋಟಿ ಬೆಲೆಬಾಳುವ ಮನೆಯನ್ನು ಕೊಂಡುಕೊಂಡಿದ್ದಾರೆ. ಹೈದರಾಬಾದ್ ನ ಜುಬಿಲಿ ಹಿಲ್ಸ್ ನಲ್ಲಿ ವಿಜಯ್ ಹೊಸ ಮನೆ ಖರೀದಿಸಿದ್ದಾರೆ.

  ಈ ಸಿನಿಮಾ ನೋಡಿ ಮೂರು ದಿನ ನಿದ್ದೆ ಮಾಡಿರಲಿಲ್ಲ ವಿಜಯ್ ದೇವರಕೊಂಡಈ ಸಿನಿಮಾ ನೋಡಿ ಮೂರು ದಿನ ನಿದ್ದೆ ಮಾಡಿರಲಿಲ್ಲ ವಿಜಯ್ ದೇವರಕೊಂಡ

  ಫೋಟೋಗಳನ್ನು ಹಂಚಿಕೊಂಡ ವಿಜಯ್

  ಫೋಟೋಗಳನ್ನು ಹಂಚಿಕೊಂಡ ವಿಜಯ್

  ಹೊಸ ಮನೆಯ ಗೃಹಪ್ರವೇಶದ ಫೋಟೋಗಳನ್ನು ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗೃಹ ಪ್ರವೇಶದ ಸಂಭ್ರಮದಲ್ಲಿ ವಿಜಯ್ ಇಡೀ ಕುಟುಂಬ ಸೇರಿದಂತೆ ಸ್ನೇಹಿತರು ಕೂಡ ಭಾಗಿಯಾಗಿದ್ದರು. ಕುಟುಂಬದ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  'ನಮ್ಮ ಪಯಣದಲ್ಲಿ ನೀವು ಭಾಗಿಯಾಗಿದ್ದೀರಿ'

  'ನಮ್ಮ ಪಯಣದಲ್ಲಿ ನೀವು ಭಾಗಿಯಾಗಿದ್ದೀರಿ'

  ಹೋಸ ಮನೆಯನ್ನು ಖರೀದಿಸಿದ ಸಂತೋಸವನ್ನು ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಪ್ಪ-ಅಮ್ಮ ಮತ್ತು ಸಹೋದರನ ಜೊತೆಗಿರುವ ಪೋಟೋವನ್ನು ಶೇರ್ ಮಾಡಿ "ಅವಳ ಸಂತೋಷ, ಅವನ ಹೆಮ್ಮೆ, ನಮ್ಮ ಹೊಸ ಮನೆ, ನೀವೆಲ್ಲರು ನಮ್ಮ ಪಯಣದಲ್ಲಿ ಭಾಗಿಯಾಗಿದ್ದೀರಿ ಲವ್ ಯೂ ಆಲ್" ಎಂದು ಬರೆದುಕೊಂಡಿದ್ದಾರೆ.

  'ಕಬೀರ್ ಸಿಂಗ್' ಚಿತ್ರದ ಎಫೆಕ್ಟ್: ಹುಡುಗಿಯನ್ನು ಕೊಂದ ಟಿಕ್ ಟಾಕ್ ಸ್ಟಾರ್'ಕಬೀರ್ ಸಿಂಗ್' ಚಿತ್ರದ ಎಫೆಕ್ಟ್: ಹುಡುಗಿಯನ್ನು ಕೊಂದ ಟಿಕ್ ಟಾಕ್ ಸ್ಟಾರ್

  ವಿಜಯ್ ಬಳಿ ಇರುವ ಸಿನಿಮಾಗಳು

  ವಿಜಯ್ ಬಳಿ ಇರುವ ಸಿನಿಮಾಗಳು

  ವಿಜಯ್ ದೇವರಕೊಂಡ ಸಹೋದರ ಆನಂದ್ ಕೂಡ ಚಿತ್ರರಂಗ ಪ್ರವೇಶಿಸಿದ್ದಾರೆ. ಇನ್ನು ವಿಜಯ್ ಸದ್ಯ ವರ್ಲ್ಡ್ ಫೇಮಸ್ ಲವರ್ ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇನ್ನು 'ಮೀಕು ಮಾಥ್ರೇಮ್ ಚೆಪ್ತಾ' ಚಿತ್ರದ ಮೂಲಕ ನಿರ್ಮಾಪಕನಾಗಿಯೂ ಕಾಣಿಸಿಕೊಂಡಿದ್ದಾರೆ.

  English summary
  Telugu famous actor Vijay Devarakonda purchased a new house worth 15 crore in Hyderabad at Jubilee hills.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X