ಚಿತ್ರಮಂದಿರದಲ್ಲಿ 'ಕೂಲಿ' ಹಾಗೂ 'ವಾರ್-2' ಚಿತ್ರಗಳನ್ನು ನೋಡಿದ ಈ ಮಾಸ್ಕ್ ಮ್ಯಾನ್ ಯಾರು ?

ಸ್ಟಾರ್ ನಟರು ಚಿತ್ರಮಂದಿರಗಳಿಗೆ ಬಂದು ಅಭಿಮಾನಿಗಳ ಜೊತೆ ಕೂತು ಸಿನಿಮಾ ವೀಕ್ಷಿಸುವುದು ಕಷ್ಟದ ಕೆಲಸ. ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಕಂಡರೆ ಜನ ಮುತ್ತಿಕೊಳ್ಳುತ್ತಾರೆ. ಕೈ ಕುಲುಕಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳ್ತಾರೆ. ಅದರಲ್ಲೂ ಚಿತ್ರಮಂದಿರಕ್ಕೆ ಬಂದರೆ ಮುಗಿದೇ ಹೋಯ್ತು. ಆದರೂ ಅಭಿಮಾನಿಗಳ ನಡುವೆ ಕೂತು ಸಿನಿಮಾ ವೀಕ್ಷಿಸುವ ಮಜಾನೇ ಬೇರೆ.

ಪ್ರೇಕ್ಷಕರ ಕಣ್ತಪ್ಪಿಸಿ ಸಿನಿಮಾ ನೋಡಬೇಕು ಅಂದರೆ ಸಾಮಾನ್ಯವಾಗಿ ಕಲಾವಿದರು ಸಿನಿಮಾ ಶುರುವಾಗಿ 5 ನಿಮಿಷ ಬಳಿಕ ಬಂದು ಹಿಂದೆ ಕೂತು ಸಿನಿಮಾ ನೋಡುತ್ತಾರೆ. ಸಿನಿಮಾ ಮುಗಿಯುವ 5 ನಿಮಿಷ ಮೊದಲು ಎದ್ದು ಹೊರಟು ಹೋಗುತ್ತಾರೆ. ಪ್ರೊಜೆಕ್ಷನ್ ರೂಮ್‌ನಲ್ಲಿ ಕೂತು ಸಿನಿಮಾ ನೋಡುವುದು ಇದೆ. ಕೆಲವೊಮ್ಮೆ ವೇಷ ಮರೆಸಿಕೊಂಡು ಬಂದು ಯಾವುದೇ ಗೊಂದಲ ಇಲ್ಲದೇ ತಾರೆಯರು ಸಿನಿಮಾ ನೋಡುವುದು ಇದೆ.

Telugu Actor Watched Coolie And War-2 Wearing Face Mask in hyderabad

ಸೂಪರ್ ಸ್ಟಾರ್ ರಜನಿಕಾಂತ್ ಸಾರ್ವಜನಿಕವಾಗಿ ಓಡಾಡಲು ಇಂತಹ ಐಡಿಯಾ ಮಾಡುತ್ತಾರೆ. ವೇಷ ಮರೆಸಿಕೊಂಡು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸುತ್ತಾಡುತ್ತಾರೆ. ಕೆಜಿ ರಸ್ತೆಯ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುತ್ತಾರೆ. ಅದೇ ರೀತಿ ಇದೀಗ ತೆಲುಗು ನಟ ನಾನಿ ತಲೆಗೆ ಮಾಸ್ಕ್ ಕಟ್ಟಿಕೊಂಡು ಬಂದು 'ಕೂಲಿ' ಹಾಗೂ 'ವಾರ್-2' ಸಿನಿಮಾಗಳನ್ನು ವೀಕ್ಷಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಿದೆ.

ಮೊದಲಿಗೆ ಯಾರಪ್ಪಾ ಇದು ಮಾಸ್ಕ್‌ಮ್ಯಾನ್ ಬಂದು ಸಿನಿಮಾ ನೋಡುತ್ತಿದ್ದಾರೆ ಎಂದು ಕೆಲವರು ಹುಬ್ಬೇರಿಸಿದ್ದರು. ಬಳಿಕ ಅದು ನಟ ನಾನಿ ಎನ್ನುವುದು ಗೊತ್ತಾಗಿದೆ. ಆದರೆ ಹೆಚ್ಚು ಜನ ಮುತ್ತಿಕೊಳ್ಳಲಿಲ್ಲ ಎನ್ನುವುದೇ ಸಮಾಧಾನಕರ ಸಂಗತಿ. ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಡ್ರೆಸ್‌ನಲ್ಲಿ ಬಂದಿದ್ದ ನಟ ನಾನಿ ತಲೆಗೆ ಬ್ಲ್ಯಾಕ್ ಕಲರ್ ಕ್ಯಾಪ್ ಹಾಗೂ ಮುಖಕ್ಕೆ ಬ್ಲ್ಯಾಕ್ ಕಲಸ್ ಮಾಸ್ಕ್ ಹಾಕಿಕೊಂಡಿದ್ದರು. ಹೈದರಾಬಾದ್ ಎಎಂಬಿ ಮಾಲ್‌ನಲ್ಲಿ 'ಕೂಲಿ' ಹಾಗೂ 'ವಾರ್-2' ಚಿತ್ರಗಳನನ್ನು ಬ್ಯಾಕ್ ಟು ಬ್ಯಾಕ್ ನೋಡಿ ತೆರಳಿದ್ದಾರೆ.

ರಜನಿಕಾಂತ್ ದೊಡ್ಡ ಅಭಿಮಾನಿ ನಾನಿ. ತಲೈವಾ ಬಯೋಪಿಕ್‌ನಲ್ಲಿ ನಟಿಸುವುದು ನನ್ನ ಕನಸು ಎಂದು ಕೆಲ ಸಂದರ್ಶನಗಳಲ್ಲಿ ಕೂಡ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ನಾನಿ ನಟಿಸಿದ ಹಿಟ್-3 ಸಿನಿಮಾ ಬಂದಿತ್ತು. ತಕ್ಕ ಮಟ್ಟಿಗೆ ಸಕ್ಸಸ್ ಕಂಡಿತ್ತು. ಸದ್ಯ 'ದಿ ಪ್ಯಾರಡೈಸ್' ಎಂಬ ಚಿತ್ರದಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.

ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ರಜನಿಕಾಂತ್ ಜೊತೆಗೆ ಉಪೇಂದ್ರ, ಆಮೀರ್ ಖಾನ್, ನಾಗಾರ್ಜುನ, ರಚಿತಾ ರಾಮ್ ಸೇರಿ ಖ್ಯಾತ ಕಲಾವಿದರು ನಟಿಸಿದ್ದಾರೆ. 3 ದಿನಕ್ಕೆ ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಅಂದಾಜಿಸಲಾಗುತ್ತಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಆದರೂ ಲಾಂಗ್ ವೀಕೆಂಡ್ ಚಿತ್ರದ ಗಳಿಕೆಗೆ ಪ್ಲಸ್ ಆಗಿದೆ.

ಇನ್ನು 'ವಾರ್-2' ಚಿತ್ರದಲ್ಲಿ ತೆಲುಗು ನಟ ಜ್ಯೂ. ಎನ್‌ಟಿಆರ್ ನಟಿಸಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಭರ್ಜರಿ ಸದ್ದು ಮಾಡ್ತಿದೆ. ಅಯಾನ್ ಮುಖರ್ಜಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದೆ. ಮಿಶ್ರ ಪ್ರತಿಕ್ರಿಯೆ ನಡುವೆ 3 ದಿನಕ್ಕೆ ಸಿನಿಮಾ 140 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.

'ವಾರ್‌-2' ಹಾಗೂ 'ಕೂಲಿ' ಸಿನಿಮಾಗಳ ನಡುವಿನ ಬಾಕ್ಸಾಫೀಸ್‌ ಕ್ಲ್ಯಾಶ್‌ನಲ್ಲಿ ರಜನಿಕಾಂತ್ ಸಿನಿಮಾ ಗೆದ್ದಿದೆ. ಫಸ್ಟ್ ವೀಕೆಂಡ್ ಬಳಿಕ ಯಾವ ಸಿನಿಮಾ ಬಾಕ್ಸಾಫೀಸ್ ಭವಿಷ್ಯ ಏನಾಗುತ್ತೋ ಕಾದು ನೋಡಬೇಕಿದೆ.

More from Filmibeat

English summary
Telugu Actor Watched Coolie And War-2 movie Wearing mask
Read more about: nani rajinikanth tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X