"ಈಗಾಗಲೇ ನನಗೆ ಐದಾರು ಬಾರಿ ಮದುವೆ ಮಾಡಿಸಿಬಿಟ್ಟಿದ್ದಾರೆ.. ಆದ್ರೆ"

ಸ್ಟಾರ್ ನಟ-ನಟಿಯರು ಯಾಕೋ ಮದುವೆ ವಿಚಾರವನ್ನು ಪದೇ ಪದೆ ಮುಂದೂಡುತ್ತಿದ್ದಾರೆ. ವಯಸ್ಸು 40 ದಾಟಿದವರು ಕೂಡ ಮದುವೆ ಬಗ್ಗೆ ಆಲೋಚಿಸುತ್ತಿಲ್ಲ. ಕೇಳಿದರೆ ಉಡಾಫಡ ಉತ್ತರ ಕೊಟ್ಟು ಸುಮ್ಮನಾಗುತ್ತಿದ್ದಾರೆ. ತೆಲುಗು ನಟಿ ಅಂಜಲಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಮದುವೆ ಬಗ್ಗೆ ಆಕೆ ಪ್ರತಿಕ್ರಿಯಿಸಿದ್ದಾರೆ.

ಅಂಜಲಿ ವಯಸ್ಸು 37 ದಾಟಿದೆ. ಮದುವೆ ಯಾವಾಗ? ಎಂದರೆ ಮುಂದೆ ನೋಡೋಣ ಎಂದಿದ್ದಾರೆ. ಇತ್ತೀಚೆಗೆ ನಟಿ ಅಂಜಲಿ ಮದುವೆ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಸದ್ದಿಲ್ಲದೇ ಆಕೆ ಮದುವೆ ನಡೆದುಬಿಟ್ಟಿದೆ ಎನ್ನುವ ಸುದ್ದಿಯೂ ಬಂದಿತ್ತು. ೀ ಬಗ್ಗೆ ಆಕೆ ಪ್ರತಿಕ್ರಿಯಿಸಿದ್ದಾರೆ. "ನನ್ನ ಮದುವೆಯ ಬಗ್ಗೆ ವದಂತಿಗಳು ಬರುತ್ತಲೇ ಇದ್ದು, ಈಗಾಗಲೇ ನಾಲ್ಕೈದು ಬಾರಿ ಮದುವೆ ಮಾಡಿಸಿಬಿಟ್ಟಿದ್ದಾರೆ ಎಂದು ಆಕೆ ಹೇಳಿದ್ದಾರೆ. ಆದರೆ ಇತ್ತೀಚಿನ ಮದುವೆ ವದಂತಿ ಬಗ್ಗೆ ಸಂಬಂಧಿಕರೂ ಕರೆ ಮಾಡಿ ವಿಚಾರಿಸಿದ್ದರು" ಎಂದಿದ್ದಾರೆ.

Telugu actress anjali Hilariously Dismisses Wedding Rumours

"ನನಗೆ ಮದುವೆ ಇಷ್ಟವಿಲ್ಲ ಅಂತ ಅಲ್ಲ. ಖಂಡಿತ ನಾನು ಮದುವೆಯಾಗುತ್ತೇನೆ, ಆದರೆ ಈಗಲ್ಲ ಎಂದಿದ್ದಾರೆ. ಸದ್ಯ ತನ್ನ ಗಮನ ಸಿನಿಮಾಗಳ ಮೇಲಿದ್ದು, ಮದುವೆಯಾದರೆ ಎರಡನ್ನೂ ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಸಿನಿಮಾ ಮತ್ತು ವೈಯಕ್ತಿಕ ಜೀವನ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಳ್ಳುಲು ಸಾಧ್ಯವಾದಾಗ ಮಾತ್ರ ಮದುವೆಯಾಗುತ್ತೇನೆ. ಈತನನ್ನು ಮದುವೆ ಆಗುತ್ತೇನೆ ಎಂದು ಮನೆಯಲ್ಲಿ ಹೇಳುವಷ್ಟು ಪುರುಸೊತ್ತು ಕೂಡ ನನಗಿಲ್ಲ. ಅಷ್ಟರಮಟ್ಟಿಗೆ ಬ್ಯುಸಿ" ಎಂದು ತಿಳಿಸಿದ್ದಾರೆ.

"ಇತ್ತೀಚೆಗೆ ಸಾಕಷ್ಟು ಜನ ನಟಿಯರು ಮದುವೆಯಾದ ಮೇಲೂ ನಾಯಕಿಯರಾಗಿಯೇ ಮುಂದುವರಿದಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮದುವೆಯಾದ ಮರುದಿನವೇ ಹುಡುಗಿಯರು ಕಚೇರಿಗೆ ಹೋಗುತ್ತಿದ್ದಾರೆ. ಅದೇ ರೀತಿ ನಾವೂ ಸಿನಿಮಾ ಶೂಟಿಂಗ್‌ಗೆ ಹೋಗುತ್ತಿದ್ದೇವೆ, ತುಂಬಾ ಒಳ್ಳೆಯ ವಾತಾವರಣವಿದೆ. ಆ ನಿಟ್ಟಿನಲ್ಲಿ ನಾಯಕಿಯರನ್ನು ಅಭಿನಂದಿಸಬೇಕು" ಎಂದು ಅಂಜಲಿ ವಿವರಿಸಿದ್ದಾರೆ.

ಆಂಧ್ರದ ರಜೊಲೆಯಲ್ಲಿ ಹುಟ್ಟಿ ಬೆಳೆದ ಅಂಜಲಿ 2006ರಲ್ಲಿ 'ಫೋಟೊ' ಎನ್ನುವ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಅದೇ ಸಮಯದಲ್ಲಿ 'ಹೊಂಗನಸು' ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಲವ್ಲಿ ಸ್ಟಾರ್ ಪ್ರೇಮ್ ಜೋಡಿಯಾಗಿ ಮಿಂಚಿದರು.

Telugu actress anjali Hilariously Dismisses Wedding Rumours

7 ವರ್ಷಗಳ ಬಳಿಕ 'ರಣವಿಕ್ರಮ' ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್ ಜೋಡಿ ಆಗಿದ್ದರು. ಪವನ್ ಒಡೆಯರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಬಳಿಕ ಶಿವಣ್ಣ- ಡಾಲಿ ಧನಂಜಯ್ ನಟನೆಯ 'ಬೈರಾಗಿ' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಆ ನಂತರ ಯಾವುದೇ ಕನ್ನಡ ಸಿನಿಮಾದಲ್ಲಿ ಅಂಜಲಿ ನಟಿಸಲಿಲ್ಲ.

ಸದ್ಯ ತೆಲುಗಿನಲ್ಲಿ ವಿಶ್ವಕ್ ಸೇನ್ ಜೊತೆ 'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದಲ್ಲಿ ಅಂಜಲಿ ನಟಿಸುತ್ತಿದ್ದಾರೆ. ಕನ್ನಡದ ನೇಹಾ ಶೆಟ್ಟಿ ಈ ಚಿತ್ರದ ಮತ್ತೊಬ್ಬ ನಾಯಕಿ. ಇದು ಬಹಳ ಪವರ್‌ಫುಲ್ ಪಾತ್ರ. ನಾನು ಬರೀ ನಾಯಕಿಯಾಗಿ ಮಾತ್ರ ನಟಿಸಬೇಕು ಎನ್ನುವುದು ಇಲ್ಲ. ಈ ರೀತಿ ನಟನೆಗೆ ಅವಕಾಶ ಇರುವ ಪಾತ್ರಗಳಲ್ಲಿ ನಟಿಸೋಕೆ ಇಷ್ಟಪಡುತ್ತೇನೆ ಎಂದು ಅಂಜಲಿ ಹೇಳಿದ್ದಾರೆ.

ರಾಮ್‌ಚರಣ್ ಹಾಗೂ ಶಂಕರ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ಗೇಮ್‌ ಚೇಂಜರ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಈ ಚಿತ್ರದಲ್ಲಿ ಕೂಡ ಅಂಜಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

More from Filmibeat

English summary
anjali reacts to rumours of her wedding, and talks about marriage plans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X