For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಮುಂಬೈನಲ್ಲಿ ತೆಲುಗು ಸಿನಿಮಾ ನಟಿ ಬಂಧನ

  |

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ (ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ) ತೆಲುಗು ಸಿನಿಮಾ ನಟಿ ಒಬ್ಬರನ್ನು ಮುಂಬೈನ ಹೋಟೆಲ್ ಒಂದರಲ್ಲಿ ಬಂಧಿಸಿದೆ.

  ಎನ್‌ಸಿಬಿ ನೀಡಿರುವ ಮಾಹಿತಿಯಂತೆ, ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿದ್ದ, ಎನ್‌ಸಿಬಿ ಯಿಂದ ತಲೆಮರೆಸಿಕೊಂಡಿದ್ದ ಸೈಯದ್ ಜೊತೆಗೆ ಮುಂಬೈನ ಹೋಟೆಲ್ ಒಂದರಲ್ಲಿ ನಟಿ ಇದ್ದರು. ಪ್ರಸ್ತುತ ನಟಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

  ಮುಂಬೈ ಬಳಿಯ ಥಾಣೆಯ ಗೋಲ್ಡನ್ ನೆಸ್ಟ್ ವೃತ್ತದ ಬಳಿಯ ಹೋಟೆಲ್‌ನಲ್ಲಿ ನಟಿಯನ್ನು ಬಂಧಿಸಿದ್ದು, ನಟಿಯ ಹೆಸರನ್ನು ಎನ್‌ಸಿಬಿ ಬಹಿರಂಗ ಪಡಿಸಿಲ್ಲ. ನಟಿಯ ಬಂಧನದ ವೇಳೆ ಹತ್ತು ಲಕ್ಷ ನಗದು, 10 ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

  ಜನವರಿ 1 ರಿಂದಲೂ ಹೋಟೆಲ್ ವಾಸ್ತವ್ಯ

  ಜನವರಿ 1 ರಿಂದಲೂ ಹೋಟೆಲ್ ವಾಸ್ತವ್ಯ

  ಜನವರಿ 1 ರಿಂದಲೂ ಈ ನಟಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರಂತೆ. ಈ ಹೋಟೆಲ್‌ಗೆ ಡ್ರಗ್ ಪೆಡ್ಲರ್ ಸೈಯದ್ ಸಹ ಬರುತ್ತಿದ್ದನಂತೆ. ಎನ್‌ಸಿಬಿ ದಾಳಿಯಲ್ಲಿ ನಟಿಯಷ್ಟೆ ದೊರೆತಿದ್ದು, ಸೈಯದ್ ಮತ್ತೆ ಪರಾರಿಯಾಗಿದ್ದಾರೆ. ಆತನಿಗಾಗಿ ಹುಡುಕಾಟ ಜಾರಿಯಲ್ಲಿದೆ.

  ಸೈಯದ್ ಕೊಟ್ಟಿರುವ ಡ್ರಗ್ಸ್ ಹೊಂದಿದ್ದ ನಟಿ

  ಸೈಯದ್ ಕೊಟ್ಟಿರುವ ಡ್ರಗ್ಸ್ ಹೊಂದಿದ್ದ ನಟಿ

  ನಟಿಯ ಬಂಧನದ ವೇಳೆ ವಶಪಡಿಸಿಕೊಳ್ಳಲಾಗಿರುವ ಡ್ರಗ್ಸ್, ಸೈಯದ್ ಕೊಟ್ಟಿರುವುದು ಎಂದು ನಟಿಯು ಎನ್‌ಸಿಬಿಗೆ ಹೇಳಿದ್ದಾರೆ. ನಟಿಯಿಂದ ಇನ್ನಷ್ಟು ಮಾಹಿತಿ ಹೊರಗೆಡಹುವ ಪ್ರಯತ್ನದಲ್ಲಿ ಇದ್ದೇವೆಂದು ಎನ್‌ಸಿಬಿ ಹೇಳಿದೆ.

  ಸಾಕಷ್ಟು ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸರಬರಾಜು

  ಸಾಕಷ್ಟು ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸರಬರಾಜು

  ಈ ಮೊದಲು ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ನಂತರ ಡ್ರಗ್ಸ್ ವ್ಯವಹಾರಕ್ಕೆ ಕೈಹಾಕಿದ್ದಾನೆ. ಎಂಡಿ ಹೆಸರಿನ ಡ್ರಗ್ಸ್ ಸರಬರಾಜಿನಲ್ಲಿ ಈತನದ್ದೇ ಪ್ರಮುಖ ಪಾತ್ರ. ಸಾಕಷ್ಟು ಮಂದಿ ಸೆಲೆಬ್ರಿಟಿಗಳಿಗೆ ಈತ ಎಂಡಿ ಡ್ರಗ್ಸ್ ಸರಬರಾಜು ಮಾಡಿದ್ದಾನೆ ಎನ್ನಲಾಗುತ್ತಿದೆ.

  ಸ್ಟಾರ್ ನಟ-ನಟಿಯರು ವಿಚಾರಣೆ ಎದುರಿಸಿದ್ದಾರೆ

  ಸ್ಟಾರ್ ನಟ-ನಟಿಯರು ವಿಚಾರಣೆ ಎದುರಿಸಿದ್ದಾರೆ

  ಸುಶಾಂತ್ ಸಿಂಗ್ ನಿಧನದ ನಂತರ ಬಾಲಿವುಡ್ ನ ಡ್ರಗ್ಸ್ ನಂಟು ಹೊರಗೆ ಬಂದಿದ್ದು, ರಿಯಾ ಚಕ್ರವರ್ತಿ ಸೇರಿ ಸಿನಿಮಾಕ್ಕೆ ಸಂಬಂಧಿಸಿದ ಕೆಲವು ಮಂದಿಯನ್ನು ಎನ್‌ಸಿಬಿ ಬಂಧಿಸಿತ್ತು. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಾಕುಲ್ ಪ್ರೀತ್ ಸಿಂಗ್, ಮಹೇಶ್ ಭಟ್, ಅರ್ಜುನ್ ರಾಮ್‌ಪಾಲ್ ಇನ್ನೂ ಅನೇಕ ಸ್ಟಾರ್ ಗಳನ್ನು ವಿಚಾರಣೆ ಸಹ ನಡೆಸಿದ ಎನ್‌ಸಿಬಿ.

  English summary
  Telugu actress arrested by NCB in Mumbai's hotel related to drug case. NCB did not revel actress name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X