ಕೆಜಿ ಚಿನ್ನ ಕದ್ದು ಸಿಕ್ಕಿಬಿದ್ದ ನಟಿ; ಮುಚ್ಚಿಟ್ಟ ಚಿನ್ನಾಭರಣ ಕೇಳಿದ್ರೆ ಸಾಯ್ತೀನಿ ಎಂದು ಬೆದರಿಕೆ!
ಚಿತ್ರರಂಗದಲ್ಲಿ ಕೆಲವರು ಅವಕಾಶಗಳು ಸಿಗದೇ ಗೊಂದಲಕ್ಕೀಡಾಗುತ್ತಿದ್ದಾರೆ. ತಪ್ಪು ದಾರಿ ಹಿಡಿಯುತ್ತಿದ್ದಾರೆ. ಹಣಕ್ಕಾಗಿ, ವಿಲಾಸಿ ಜೀವನಕ್ಕಾಗಿ ಕೊಲೆ, ದರೋಡೆಯಂತಹ ಅಪರಾಧ ಮಾಡುತ್ತಿದ್ದಾರೆ. ಇತ್ತೀಚೆಗೆ ಅಂತಹ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಸಿನಿಮಾ ಅವಕಾಶ ಕೊಡಿಸುವುದಾಗಿ ವಂಚಿಸುವವರ ಸಂಖ್ಯೆ ಕೂಡ ದೊಡ್ಡದಿದೆ.
ಆಕೆ ಸೋಶಿಯಲ್ ಮೀಡಿಯಾದಲ್ಲಿ ಇನ್ ಫ್ಲೂಯೆನ್ಸರ್. ಸಿನಿಮಾಗಳನ್ನು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿರುವಾಕೆ. ಇತ್ತೀಚೆಗಷ್ಟೆ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಲು ಯತ್ನಿಸುತ್ತಿದ್ದ ಆಕೆ ತನ್ನ ಪ್ರತಿಭೆಯಿಂದ ಅವಕಾಶಗಳನ್ನು ಬಾಚಿಕೊಳ್ಳುವುದು ಬಿಟ್ಟು ಸ್ನೇಹಿತೆಯ ಮನೆಯಲ್ಲಿ ಚಿನ್ನಾಭರಣ ಕದ್ದು ಸಿಕ್ಕಿ ಬಿದ್ದಿದ್ದಾಳೆ. ಸ್ನೇಹಿತೆ ಮನೆಯಲ್ಲಿ ಕೆಜಿ ಚಿಕ್ಕ ದರೋಡೆ ಮಾಡಿ ಗೋವಾಗೆ ಪರಾರಿ ಆಗಿದ್ದಳು.

ಸದ್ಯ ಪೊಲೀಸರ ಅತಿಥಿಯಾಗಿರುವ ನಟಿ ಕಂಬಿ ಎಣಿಸಲು ಮುಂದಾಗಿದ್ದಾಳೆ. ಅಂದಹಾಗೆ ಆಕೆಯ ಹೆಸರು ಸೌಮ್ಯ ಶೆಟ್ಟಿ. ಆಕೆಗೆ ಸಿನಿಮಾಗಳಲ್ಲಿ ನಟಿಸುವ ಹುಚ್ಚು. ಇದೇ ಕಾರಣಕ್ಕೆ ಒಂದಷ್ಟು ಶಾರ್ಟ್ ಫಿಲ್ಮ್‌ಗಳಲ್ಲಿ ನಟಿಸಿ ತನ್ನ ಪ್ರತಿಭೆ ಒರೆಗೆ ಹಚ್ಚಿದ್ದಳು. 'ಯುವರ್ಸ್ ಲವಿಂಗ್ಲಿ' ಹಾಗೂ 'ದಿ ಟ್ರಿಪ್' ಎನ್ನು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಳು. ಆದರೆ ಬಳಿಕ ಅವಕಾಶಗಳು ಸಿಗದೇ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುವ ಫೋಟೊಗಳನ್ನು ಕ್ಲಿಕ್ಕಿಸುತ್ತಾ ಪೋಸ್ಟ್ ಮಾಡುತ್ತಿದ್ದಳು. ಸೌಮ್ಯ ಸಿನಿಮಾಗಳಿಗೆ ಆಡಿಷನ್ ಕೊಡುತ್ತಿದ್ದ ವೇಳೆ ವೈಜಾಗ್‌ನಲ್ಲಿರುವ ದೊಂಡಪರ್ತಿ ಬಾಲಾಜಿ ಮೆಟ್ರೋ ಅಪಾರ್ಟ್‌ಮೆಂಟ್‌ನ ಪ್ಲಾಟ್ ನಂ.102ರಲ್ಲಿ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಜನಪಾಲ ಪ್ರಸಾದ್ ಬಾಬು ಅವರ ಪುತ್ರಿ ಮೌನಿಕಾ ಪರಿಚಯವಾಗಿತ್ತು.
2016ರಲ್ಲಿ ಶುರುವಾದ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿ ಸೌಮ್ಯಾ ಶೆಟ್ಟಿ ಆಗಾಗ್ಗೆ ಮೌನಿಕಾ ಮನೆಗೆ ಹೋಗಿ ಬರುವಷ್ಟು ಸಲುಗೆ ಬೆಳೆದಿತ್ತು. ಈ ರೀತಿ ಆಗಾಗ ಸ್ನೇಹಿತೆ ಮನೆಗೆ ಹೋಗುತ್ತಿದ್ದ ಸೌಮ್ಯಗೆ ಮನೆಯಲ್ಲಿದ್ದ ಚಿನ್ನಾಭರಣದ ಮೇಲೆ ಕಣ್ಣು ಬಿದ್ದಿದೆ. ಈ ಚಿನ್ನವನ್ನು ದೋಚುವ ಸಂಚಿನಿಂದ ಮೌನಿಕಾ ಮನೆಗೆ ಹೋದಾಗಲೆಲ್ಲಾ ಸೌಮ್ಯ ಸೀದಾ ಬೆಡ್ ರೂಮಿಗೆ ಹೋಗಿ ಬಾತ್ ರೂಮ್ ಬಳಸುತ್ತೇನೆ ಎಂದು ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದಳು.

ಎರಡ್ಮೂರು ಹೀಗೆ ಸ್ನೇಹಿತೆ ಮನೆಯ ಬೆಡ್‌ರೂಂಗೆ ಹೋದಾಗ ಸೌಮ್ಯ ತನ್ನ ಕೈಚಳಕ ತೋರಿಸಿ ಸ್ವಲ್ಪ ಸ್ವಲ್ಪ ಚಿನ್ನಭರಣ ಕದ್ದಿದ್ದಾಳೆ. ಆದರೆ ಯಾರಿಗೂ ಅನುಮಾನ ಬಂದಿಲ್ಲ. ಇತ್ತೀಚೆಗೆ ಲಮಂಚಿಯಲ್ಲಿ ನಡೆಯಲಿರುವ ಸಂಬಂಧಿಕರ ಮದುವೆಗೆ ತೆರಳಲು ಮೌನಿಕಾ ಕುಟುಂಬಸ್ಥರು ಸಜ್ಜಾಗಿದ್ದಾರೆ. ಈ ವೇಳೆ ಬೀರುವಿನ ಲಾಕರ್ ತೆರೆದು ನೋಡಿದಾಗ ಚಿನ್ನಾಭರಣ ಕಳುವಾಗಿರುವುದು ಗೊತ್ತಾಗಿದೆ. ಇದರಿಂದ ಆತಂಕಗೊಂಡ ಮೌನಿಕಾ ತಂದೆ ಪ್ರಸಾದ್ ಬಾಬು ವಿಶಾಖಪಟ್ನ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೊಲೀಸರು ಬೀರುವಿನಲ್ಲಿದ್ದ ಫಿಂಗರ್ ಪ್ರಿಂಟ್ ಕಲೆಹಾಕಿದ್ದಾರೆ. ಅಲ್ಲದೇ ಪ್ರಸಾದ್ ಬಾಬು ಹಾಗೂ ಮೌನಿಕಾ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಇತ್ತೀಚೆಗೆ ತಮ್ಮ ಮನೆಗೆ ಬಂದು ಹೋದ ಹಲವರ ಮೇಲೆ ಅನುಮಾನವಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಎರಡು ತಂಡಗಳಾಗಿ 11 ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅವರಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಟ ಸೌಮ್ಯಾ ಶೆಟ್ಟಿ ಸಿಕ್ಕಿಬಿದ್ದಿದ್ದಾಳೆ.
ಸೌಮ್ಯಾ ಶೆಟ್ಟಿ ಕದ್ದ ಚಿನ್ನಾಭರಣ ಮಾರಿ ಆಕೆ ಗೋವಾದಲ್ಲಿ ಎಂಜಾಯ್ ಮಾಡುತ್ತಿದ್ದಳು ಎನ್ನಲಾಗಿದೆ. ಆಕೆಯಿಂದ 74 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಉಳಿದ ಬಂಗಾರದ ಬಗ್ಗೆ ಕೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ವರದಿಯಾಗಿದೆ. ಸೌಮ್ಯಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನ ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪೊಲೀಸರು ವಿಚಾರನೆ ಮುಂದುವರೆಸಿದ್ದಾರೆ.


Click it and Unblock the Notifications











