ಮದುವೆ, ಡಿವೋರ್ಸ್‌ಗಿಂತ ಲಿವ್ ಇನ್ ರಿಲೇಷನ್‌ಶಿಪ್ ಉತ್ತಮ ಎಂದ ಮಾಜಿ ಬಿಗ್‌ಬಾಸ್ ಸ್ಪರ್ಧಿ

ಮದುವೆ ಬಂಧಕ್ಕೆ ಆಯಸ್ಸು ಕಮ್ಮಿ ಎನ್ನುತ್ತಿರುವ ಸಮಾಜದಲ್ಲಿ ನಾವು ಬದುಕುತ್ತಿದ್ದೀವಿ. ಮದುವೆ ಆಗುವಷ್ಟೆ ಸುಲಭವಾಗಿ ದಂಪತಿಗಳು ಡಿವೋರ್ಸ್ ಪಡೆದು ದೂರಾಗುತ್ತಿದ್ದಾರೆ. ಸೆಲೆಬ್ರೆಟಿಗಳ ವಿಚಾರದಲ್ಲಿ ಡಿವೋರ್ಸ್ ಮಾತ್ರವಲ್ಲ 2ನೇ ಮದುವೆ ಕೂಡ ಬಹಳ ಸಲೀಸು ಎನ್ನುವಂತಾಗಿಬಿಟ್ಟಿದೆ. ತೆಲುಗು ನಟಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ದಿವಿ ವದ್ಯ ಮದುವೆನೇ ಬೇಡ ಎನ್ನುತ್ತಿದ್ದಾರೆ.

ಮಾಡೆಲ್ ಆಗಿ ನಟಿಯಾಗಿ ಗುರ್ತಿಸಿಕೊಂಡಿರುವ ದಿವಿ ವದ್ಯ ಮದುವೆ ಕಲ್ಪನೆ ಬಗ್ಗೆ ಭಯ ಶುರುವಾಗಿದೆ ಎಂದಿದ್ದಾರೆ. ತೆಲುಗಿನಲ್ಲಿ ಮಹೇಶ್ ಬಾಬು ನಟನೆಯ 'ಮಹರ್ಷಿ' ಸೇರಿ ಕೆಲ ಚಿತ್ರಗಳಲ್ಲಿ ಆಕೆ ನಟಿಸಿದ್ದರು. ಬಿಗ್‌ಬಾಸ್ ತೆಲುಗು ಸೀಸನ್ 4ರಲ್ಲಿ ದಿವಿ ಸ್ಪರ್ಧಿಯಾಗಿ ಹೋಗಿದ್ದರು. 7 ವಾರಗಳ ಕಾಲ ಮನೆಯಲ್ಲಿ ಇದ್ದು ಬಳಿಕ ಎಲಿಮಿನೇಟ್ ಆಗಿದ್ದರು.

Telugu Actress Divi Vadthya Says No to Marriage Backs Live-In Relationships

ಸಂದರ್ಶನವೊಂದರಲ್ಲಿ ನಟಿ ದಿವಿ ವದ್ಯ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಮದುವೆ ಬಳಿಕ ಸಾಕಷ್ಟು ಜನರಿಗೆ ಸ್ವಾತಂತ್ರ್ಯ, ಸಂತೋಷ ಸಿಗುತ್ತಿಲ್ಲ ಎಂದಿದ್ದಾರೆ. ಮದುವೆಗಿಂತಲೂ ಲಿವ್ ಇನ್ ರಿಲೇಷನ್‌ಶಿಪ್ ಉತ್ತಮ ಎಂದು ಬಹಿರಂಗವಾಗಿ ಆಕೆ ಹೇಳಿದ್ದಾರೆ. "ಒಬ್ಬ ವ್ಯಕ್ತಿ ಜೊತೆ ನ್ಯಾಯವಾಗಿ, ಕಮೀಟ್‌ಮೆಂಟ್ ಇಂದ ಇದ್ದರೆ ಅದೇ ಮದುವೆಗೆ ಸಮ. ಕೇವಲ ಸಾಮಾಜಿಕ ವ್ಯವಸ್ಥೆ ಕಾರಣಕ್ಕೆ ಮದುವೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಒಂದು ವೇಳೆ ಭಿನ್ನಾಭಿಪ್ರಾಯ ಬಂದರೆ ಒಬ್ಬರ ಜೀವನ ಮತ್ತೊಬ್ಬರು ಹಾಳು ಮಾಡುವುದಕ್ಕಿಂತ ದೂರಾಗುವುದು ಉತ್ತಮ ಎಂದು ನಟಿ ದಿವಿ ಹೇಳಿದ್ದಾರೆ. "ಒಂದು ಹಂತದವರಗೆ ನಾನು ಸಹಿಸಿಕೊಳ್ತೀನಿ, ಆದರೆ ನನ್ನ ಇಷ್ಟಗಳ್ನು ಸಂಪೂರ್ಣವಾಗಿ ಬಲಿಕೊಟ್ಟು ಯಾವುದೇ ಬಂಧದಲ್ಲಿ ಇರುವುದಿಲ್ಲ" ಎಂದಿದ್ದಾರೆ.

ನನ್ನ ಸ್ನೇಹಿತರ ಸರ್ಕಲ್‌ನಲ್ಲಿ 90ರಷ್ಟು ಜನ ಮದುವೆಯಾದ ಎರಡ್ಮೂರು ವರ್ಷಕ್ಕೆ ದೂರಾಗಿದ್ದಾರೆ. ಹಾಗಾಗಿ ಅದನ್ನೆಲ್ಲಾ ನೋಡಿ ಮದುವೆ ಬಗ್ಗೆ ಆತಂಕ ಶುರುವಾಗಿದೆ ಎಂದು ದಿವಿ ವದ್ಯ ಹೇಳಿರುವುದು ವೈರಲ್ ಆಗ್ತಿದೆ. 'ಮಹರ್ಷಿ' ಮಾತ್ರವಲ್ಲ 'ಪುಷ್ಪ- 2', 'ಎ1 ಎಕ್ಸ್‌ಪ್ರೆಸ್', 'ರುದ್ರಾಂಗಿ', 'ಕ್ಯಾಬ್ ಸ್ಟೋರಿಸ್', 'ಡಾಕು ಮಹಾರಾಜ್' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ.

ಹೈದರಾಬಾದ್ ಬೆಡಗಿ ದಿವಿ ವದ್ಯ 7 ವರ್ಷಗಳ ಹಿಂದೆ 'ಲೆಟ್ಸ್ ಗೋ' ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಹೈದರಬಾದ್ ಟೈಮ್ಸ್ 2020 ಕಿರುತೆರೆ ಮೋಸ್ಟ್ ಡಿಸೆರಬಲ್ ವುಮನ್ ಪ್ರಶಸ್ತಿ ಕೂಡ ಸಿಕ್ಕಿತ್ತು. ಬಿಗ್ ಟಿವಿ ಪ್ಲಸ್ ಯೂಟ್ಯೂ್ ಸಂದರ್ಶನದಲ್ಲಿ ಆಕೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಗಂಡ ಹೆಂಡತಿ ದೂರಾಗಲು ಕಾರಣ ಏನು ಎನ್ನುವುದನ್ನು ಹೇಳಿದ್ದಾರೆ.

"ಲವ್ ಮಾಡುವಾಗ ಅಥವಾ ಮದುವೆ ಆದ ಹೊಸದರಲ್ಲಿ ಇರುವ ಉತ್ಸಾಹ ಬಳಿಕ ಇರಲ್ಲ. ಎರಡ್ಮೂರು ವರ್ಷಗಳ ಬಳಿಕ ಎಲ್ಲಾ ಬದಲಾಗುತ್ತದೆ. ಆರಂಭದಲ್ಲಿ ಒಟ್ಟೊಟ್ಟಿಗೆ ಇದ್ದವರು ಬಳಿಕ ನಾನಾ ಕಾರಣಕ್ಕೆ ಅಂತರ ಕಾಯ್ದುಕೊಳ್ಳಲು ಬಯಸುತ್ತಾರೆ. ತಮ್ಮ ತಮ್ಮ ಸ್ನೇಹಿತರ ಜೊತೆ ಪಾರ್ಟಿ, ಮೀಟಿಂಗ್ ಅಂತ ಸುತ್ತಾಡಲು ಹೋಗುತ್ತಾರೆ. ಅದೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಆದ್ಯತೆಗಳು ಬದಲಾಗುತ್ತದೆ. ಜೀವನದಲ್ಲಿ ಫನ್ ಇದ್ದರೆ ಮಾತ್ರ ಚೆಂದ" ಎಂದಿದ್ದಾರೆ ದಿವಿ ವದ್ಯ.

ತಮಗೆ ಯಾವ ರೀತಿಯ ಹುಡುಗ ಬೇಕು ಎನ್ನುವ ಬಗ್ಗೆ ಇನ್ನು ಕ್ಲಾರಿಟಿ ಇಲ್ಲ. ಹಾಗಾಗಿ ಮದುವೆ ಆಗಿಲ್ಲ ಎಂದು ದಿವಿ ವದ್ಯ ತಿಳಿಸಿದ್ದಾರೆ. ನಾನು 3 ತಿಂಗಳು, 6 ತಿಂಗಳು ಒಬ್ಬ ವ್ಯಕ್ತಿಯ ಜೊತೆ ಓಡಾಡಿ ಎಲ್ಲಾ ತಿಳಿದುಕೊಂಡು ಒಪ್ಪಿ ಮದುವೆ ಆದರೂ 3 ವರ್ಷಗಳ ಬಳಿಕ ಕೂಡ ಆತ ಬದಲಾಗಲ್ಲ ಎಂದು ಹೇಗೆ ಹೇಳುವುದು. ಹಿಂದಿನ ಕಾಲದವರು ಮದುವೆಯಾಗಿ ಅನ್ಯೋನ್ಯವಾಗಿ ಇದ್ದರು ಅಂತ ನಾವು ಅಂದಿಕೊಂಡಿದ್ದೇವೆ. ಆದರೆ ಅವರು ಸಂಪೂರ್ಣವಾಗಿ ಸಂತೋಷದಿಂದ ಇದ್ದರು ಎನ್ನಲು ಸಾಧ್ಯವಿಲ್ಲ" ಎಂದು ದಿವಿ ವದ್ಯ ವಿವರಿಸಿದ್ದಾರೆ.

More from Filmibeat

Read more about: bigg boss tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X