ನಿಮ್ಮ ಸುಂದರ ತೊಡೆಗಳ ಸೀಕ್ರೆಟ್ ಏನು ಎಂದ ತುಂಟ ಅಭಿಮಾನಿಗೆ ನಟಿ ಹೇಳಿದ್ದೇನು?

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ನಟಿಯರಿಗೆ ಅಸಭ್ಯ ಪ್ರಶ್ನೆಗಳು ಎದುರಾಗುತ್ತಿರುತ್ತದೆ. ಕೆಲವರು ಅದಕ್ಕೆ ಉತ್ತರ ಕೊಡದೇ ಸುಮ್ಮನಾದರೆ ಮತ್ತೆ ಕೆಲವರು ಖಾರವಾಗಿಯೇ ಪ್ರತಿಕ್ರಿಯಿಸುತ್ತಾರೆ. ಮತ್ತೆ ಕೆಲವರು ಫನ್ನಿಯಾಗಿ ರಿಪ್ಲೇ ಮಾಡಿ ಸುಮ್ಮನಾಗುತ್ತಾರೆ. ಮುಂಬೈ ಬೆಡಗಿ ದಕ್ಷಾ ನಗರ್‌ಕರ್‌ಗೂ ಇತ್ತೀಚೆಗೆ ಇಂಥದ್ದೇ ಪ್ರಶ್ನೆ ಎದುರಾಗಿತ್ತು.

ದಕ್ಷಾ ಒಂದಷ್ಟು ತೆಲುಗು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಆಕೆಗೆ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ. ಕಳೆದ ವರ್ಷ ಬಂದ 'ರಾವಣಾಸುರ' ಕೊನೆಯದಾಗಿ ಈ ಮುಂಬೈ ಬೆಡಗಿ ನಟಿಸಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಹಾಟ್ ಫೋಟೊಶೂಟ್‌ಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ತೊಡೆಗಳು ಚೆನ್ನಾಗಿ ಕಾಣುವಂತೆ ಹಾಟ್ ಹಾಟ್ ಪೋಸ್ ಕೊಟ್ಟು ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಕೆಯ ಫೋಟೊಗಳಿಗೆ ಸಖತ್ ಲೈಕ್ಸ್, ಕಾಮೆಂಟ್ ಸಿಗುತ್ತದೆ.

Telugu Actress funny reply for netizen question about her thighs

ಇತ್ತೀಚೆಗೆ ದಕ್ಷಾ ಇನ್‌ಸ್ಟಾಗ್ರಾಂ ಲೈವ್ ಬಂದಿದ್ದರು. ಈ ವೇಳೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ತುಂಟ ಅಭಿಮಾನಿಯೊಬ್ಬ "ನನಗೆ ನಿಮ್ಮ ತೊಡೆಗಳಿಗೆ ದೊಡ್ಡ ಅಭಿಮಾನಿ. ಅದರ ಸೀಕ್ರೆಟ್ ಏನು?" ಎಂದು ಕೇಳಿದ್ದಾನೆ. ದಕ್ಷ ಈ ಪ್ರಶ್ನೆಗೆ ಉತ್ತರಿಸದೇ ಇರಬಹುದಿತ್ತು. ಆದರೆ ಆಕೆ ತನ್ನ ಸ್ಪಾಂಟೆನಿಟಿ, ಸ್ಪೋರ್ಟಿವ್‌ನೆಸ್ ತೋರಿಸಿದ್ದಾರೆ. ಆತನ ಪ್ರಶ್ನೆಗೆ ದಿಢೀರನೆ ಬಹಳ ಚುರಕಾಗಿ, ಫನ್ನಿಯಾಗಿ ಉತ್ತರಿಸಿದ್ದಾರೆ. ಆಕೆಯ ರಿಪ್ಲೈ ಈಗ ಸಖತ್ ಟ್ರೆಂಡಿಂಗ್‌ನಲ್ಲಿದೆ.

ನಿಮ್ಮ ಸುಂದರ ತೊಡೆಗಳ ಸೀಕ್ರೆಟ್ ಏನು? ಎಂದಿದ್ದಕ್ಕೆ ದಕ್ಷಾ "ನಾನು ಮಸಾಲಾ ವಡೆಗಳನ್ನು ತಿನ್ನುತ್ತೀನಿ" ಎಂದುಬಿಟ್ಟಿದ್ದಾರೆ. ಇದನ್ನು ಕೇಳಿದ ನೆಟ್ಟಿಗರು ತೊಡೆಗಳು- ವಡೆಗಳು, ಅಬ್ಬಬ್ಬಾ ಪ್ರಾಸ ಚೆನ್ನಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ವಿಡಿಯೋ ಟ್ರೆಂಡಿಂಗ್‌ನಲ್ಲಿದೆ.

Telugu Actress funny reply for netizen question about her thighs

ಮುಂಬೈನಲ್ಲಿ ಹುಟ್ಟಿದ ದಕ್ಷಾ ನಗರ್‌ಕರ್ ಹೈದರಾಬಾದ್, ಬೆಂಗಳೂರು, ಪಂಚಗಣಿಯಲ್ಲಿ ಓದಿ ಬೆಳೆದರು. ತಾಯಿ ಕಾಸ್ಮೆಟಿಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಪದೇ ಪದೆ ಊರು ಬದಲಿಸುವಂತಾಗಿತ್ತು. ಅದೇ ಕಾರಣಕ್ಕೆ ದಕ್ಷಾ ಕೂಡ ಬೇರೆ ಬೇರೆ ಊರಿನಲ್ಲಿ ಓದುವಂತಾಯಿತು. ಡಾಕ್ಟರ್ ಆಗಬೇಕೆಂದುಕೊಂಡಿದ್ದ ಚೆಲುವೆ ಮಾಡೆಲಿಂಗ್ ಆರಂಭಿಸಿದ ಬಳಿಕ ಚಿತ್ರರಂಗಕ್ಕೆ ಬಂದರು.

ತೆಲುಗಿನ 'ಹೊರಾ ಹೊರಿ' ದಕ್ಷಾ ನಗರ್‌ಕರ್ ನಟಿಸಿದ ಮೊದಲ ಸಿನಿಮಾ. ಬಳಿಕ 'ಹುಷಾರು', 'ಜೋಂಬಿ ರೆಡ್ಡಿ', 'ರಾವಣಾಸುರ' ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬಿಬಿಎ ಪದವಿ ಪಡೆದುಕೊಂಡಿರುವ ದಕ್ಷಾ ನಗರ್‌ಕರ್ ಸದ್ಯ ಸಿನಿಮಾಗಳಲ್ಲಿ ಮುಂದುವರೆದಿದ್ದಾರೆ. ಮೊದಲ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಪರೀಕ್ಷೆ ಬರೆಯದೇ ಫೇಲ್ ಆಗಿದ್ದರು. ಬಳಿಕ ಸಿನಿಮಾಗಳಿಮದ ಬ್ರೇಕ್ ಪಡೆದು ಬಿಬಿಎಂ ಓದಿ ಮುಗಿಸಿದರು. 'ಹುಷಾರು' ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದರು.

'ಬಂಗಾರ್ರಾಜು' ಚಿತ್ರದಲ್ಲಿ ನಾಗಚೈತನ್ಯಾ ಜೊತೆ ದಕ್ಷಾ ನಾಯಕಿಯಾಗಿ ನಟಿಸಿದ್ದರು. ಈ ಸಮಯದಲ್ಲಿ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿತ್ತು. ಬಳಿಕ ಅದೆಲ್ಲಾ ಗಾಳಿಸುದ್ದಿ ಎನ್ನುವುದು ಗೊತ್ತಾಗಿತ್ತು.

More from Filmibeat

English summary
actress Bold Reply To A Netizen goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X