53ನೇ ವಯಸ್ಸಿನಲ್ಲಿ ಡಿಗ್ರಿ ಪರೀಕ್ಷೆ ಬರೆದ ಖ್ಯಾತ ನಟಿ, ಫೋಟೋ ವೈರಲ್

'ಓದಲು ವಯಸ್ಸು ಮುಖ್ಯವಲ್ಲ' ಎನ್ನುವ ಜನರೇ 'ಓದುವ ವಯಸ್ಸಿನಲ್ಲಿ ಓದುಬೇಕು' ಎಂದು ಟೀಕಿಸುವುದು ನೋಡಬಹುದು. ಇಂತಹ ಟೀಕೆ, ಮುಜುಗರದ ಬಗ್ಗೆ ಯೋಚಿಸದ ಹಿರಿಯ ನಟಿಯೊಬ್ಬರು ತಮ್ಮ 53ನೇ ವಯಸ್ಸಿನಲ್ಲಿ ಡಿಗ್ರಿ ಪ್ರವೇಶ ಪರೀಕ್ಷೆ ಬರೆದಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ತೆಲುಗಿನ ಖ್ಯಾತ ಪೋಷಕ ನಟಿ ಹೇಮಾ ಅವರು 53ನೇ ವಯಸ್ಸಿನಲ್ಲಿ ಪದವಿ ಶಿಕ್ಷಣಕ್ಕೆ ಪರೀಕ್ಷೆ ಬರೆದಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಹಳ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ, ಹೇಮಾ ಅವರು ಬರೆದ ಪರೀಕ್ಷೆ ಯಾವುದು, ಎಲ್ಲಿ ಪರೀಕ್ಷೆ ಬರೆದರು? ಮುಂದೆ ಓದಿ.....

ಭಾನುವಾರ ಪರೀಕ್ಷೆ ಬರೆದ ನಟಿ ಹೇಮಾ

ಭಾನುವಾರ ಪರೀಕ್ಷೆ ಬರೆದ ನಟಿ ಹೇಮಾ

ಡಾ ಬಿ ಆರ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪಡೆಯಲು ಮುಂದಾಗಿರುವ ನಟಿ ಹೇಮಾ, ಕಳೆದ ಭಾನುವಾರ ನೆಲ್ಲಗೊಂಡು ಜಿಲ್ಲೆಯ ಎನ್‌ಜಿ ಕಲಾಶಾಲೆಯಲ್ಲಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಡಿಗ್ರಿ ಮಾಡುವ ಕನಸು ಹೊಂದಿದ್ದೆ

ಡಿಗ್ರಿ ಮಾಡುವ ಕನಸು ಹೊಂದಿದ್ದೆ

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟಿ ಹೇಮಾ, ''ಬಹಳ ವರ್ಷಗಳಿಂದಲೂ ಡಿಗ್ರಿ ಮಾಡಬೇಕೆಂಬ ಕನಸು ಇತ್ತು. ಹೈದರಾಬಾದ್‌ನಲ್ಲಿ ಬರೆದರೆ ಮುಜುಗರ ಆಗುತ್ತೆ ಎಂದು ನೆಲ್ಲಗೊಂಡದಲ್ಲಿ ಪರೀಕ್ಷೆ ಬರೆಯಲು ನಿರ್ಧರಿಸಿದೆ. ಆದ್ರೆ, ಜನರು ಗುರುತಿಸಿಬಿಟ್ಟರು'' ಎಂದು ಹೇಳಿಕೊಂಡಿದ್ದಾರೆ.

ನಟಿಯನ್ನು ನೋಡಿ ಖುಷಿಯಾದ ಇತರರು

ನಟಿಯನ್ನು ನೋಡಿ ಖುಷಿಯಾದ ಇತರರು

ನಟಿ ಹೇಮಾ ಅವರನ್ನೊಳಗೊಂಡಂತೆ ಸುಮಾರು 580 ಮಂದಿ ಮಹಿಳೆಯರು ಭಾನುವಾರ ಇಲ್ಲಿ ಪರೀಕ್ಷೆ ಬರೆದಿದ್ದಾರೆ. ಹೇಮಾ ಅವರನ್ನು ಕಂಡ ಕೂಡಲೇ ಅವರ ಜೊತೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಮುಕ್ತ ವಿಶ್ವವಿದ್ಯಾಲಯ ಆಗಿರುವುದರಿಂದ ರೆಗ್ಯುಲರ್ ಕಾಲೇಜಿಗೆ ಹೋಗುವಂತಿರಲ್ಲ. ಪರೀಕ್ಷೆ ಬರೆದು ಉತ್ತೀರ್ಣರಾಗಬಹುದು. ದಾಖಲಾತಿಗೂ ಮುಂಚೆ ಅರ್ಹತಾ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಅಡ್ಮಿಶನ್ ನೀಡಲಾಗುತ್ತದೆ. ಕಂಪ್ಯೂಟರ್ ಶಿಕ್ಷಣದಲ್ಲಿ ಹೆಚ್ಚು ಕಲಿಯಬೇಕು'' ಎಂಬ ಆಸೆಯನ್ನು ಸಹ ವ್ಯಕ್ತಪಡಿಸಿದ್ದಾರೆ.

ರಾಮೋಜಿ ಫಿಲಂ ಸಿಟಿಯಲ್ಲಿ ಶೂಟಿಂಗ್

ರಾಮೋಜಿ ಫಿಲಂ ಸಿಟಿಯಲ್ಲಿ ಶೂಟಿಂಗ್

ಸದ್ಯ ರಾಮೋಜಿ ಫಿಲಂ ಸಿಟಿಯಲ್ಲಿ 'ಕೊಂಡಾಪುರಂ' ಎಂಬ ಚಿತ್ರದ ಶೂಟಿಂಗ್ ಮಾಡುತ್ತಿದ್ದಾರೆ. ಚಿತ್ರೀಕರಣದ ನಡುವೆಯೇ ಪರೀಕ್ಷೆಯ ಬರೆಯಲು ಅನುಕೂಲವಾಗಲಿದೆ ಎಂಬ ಕಾರಣಕ್ಕೆ ನೆಲ್ಲಗೊಂಡು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡೆ ಎಂದು ಹೇಳಿಕೊಂಡಿದ್ದಾರೆ ''ಈ ಪ್ರದೇಶದಲ್ಲಿ ಸಂಬಂಧಿಕರು ಸಹ ಇದ್ದಾರೆ, ಹಾಗೂ ಹೈದರಾಬಾದ್‌ನಲ್ಲಿ ಪರೀಕ್ಷೆ ಬರೆದರೆ ಜನರು ಗುರುತಿಸಿಬಿಡುತ್ತಾರೆ, ಇದರಿಂದ ಮುಕ್ತವಾಗಿ ಪರೀಕ್ಷೆ ಬರೆಯಲು ಕಷ್ಟ ಆಗಬಹುದು, ಹಾಗಾಗಿ ನೆಲ್ಲಗೊಂಡಂ ಸೂಕ್ತ ಎಂದು ಭಾವಿಸಿದೆ'' ಎಂದು ತಿಳಿಸಿದ್ದಾರೆ.

250ಕ್ಕು ಅಧಿಕ ಚಿತ್ರಗಳಲ್ಲಿ ನಟನೆ

250ಕ್ಕು ಅಧಿಕ ಚಿತ್ರಗಳಲ್ಲಿ ನಟನೆ

ಬಾಲ್ಯದಿಂದಲೇ ಸಿನಿಮಾ ಮೇಲೆ ಆಸಕ್ತಿ ಹೊಂದಿದ್ದ ನಟಿ ಹೇಮಾ ಇದುವರೆಗೂ ತೆಲುಗು ಇಂಡಸ್ಟ್ರಿಯಲ್ಲಿ ಸುಮಾರು 250ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ಹಾಗೂ ಪೋಷಕ ನಟಿಯಾಗಿ ಹೆಚ್ಚು ಯಶಸ್ಸು ಕಂಡಿದ್ದಾರೆ. ಸೈಯದ್ ಜಾನ್ ಅಹ್ಮದ್ ಅವರ ಜೊತೆ ವಿವಾಹವಾಗಿದ್ದು, ವಿವಾಹದ ಬಳಿಕವೂ ಚಿತ್ರರಂಗದಲ್ಲಿ ಮುಂದುವರಿದ್ದಾರೆ.

Recommended Video

ರಶ್ಮಿಕಾ ಮಂದಣ್ಣ ಬೀಚ್ ವರ್ಕೌಟ್ | Filmibeat Kannada
2014ರ ಚುನಾವಣೆಯಲ್ಲಿ ಸೋಲು

2014ರ ಚುನಾವಣೆಯಲ್ಲಿ ಸೋಲು

ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ ಆಂಧ್ರಪ್ರದೇಶ ಚುನಾವಣೆಯಲ್ಲಿ ಸಹ ಸ್ಪರ್ಧೆ ಮಾಡಿದ್ದರು. 2014ರ ಜನರಲ್ ಎಲೆಕ್ಷನ್‌ನಲ್ಲಿ ಮಂದಪೇಟೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಹೇಮಾ ಸೋಲು ಕಂಡಿದ್ದರು.

More from Filmibeat

English summary
Telugu Actress Hema Appears For Degree Entrance Exam At BR Ambedkar Open University on sunday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X