ನಿಖಿಲ್ ಕುಮಾರಸ್ವಾಮಿ ಶೂ ಮೇಲೆ ತೆಲುಗು ನಟಿ ಲಕ್ಷ್ಮೀ ಮಂಚು ಕಣ್ಣು.!

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಇಲ್ಲಿಯವರೆಗೂ ತೆರೆಮೇಲೆ ಮಿಂಚಿರುವುದು ಮೂರೇ ಚಿತ್ರಗಳಲ್ಲಿ. ಆದರೂ, ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಸಿಕ್ಕಾಪಟ್ಟೆ ಫೇಮಸ್.

ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುವ ನಿಖಿಲ್ ಕುಮಾರಸ್ವಾಮಿ ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಶೇರ್ ಮಾಡಿಕೊಂಡಿದ್ದರು.

ಆ ಫೋಟೋದಲ್ಲಿ ನಿಖಿಲ್ ಧರಿಸಿದ್ದ ಶೂ ಮೇಲೆ ಟಾಲಿವುಡ್ ನಟಿ ಲಕ್ಷ್ಮೀ ಮಂಚು ಕಣ್ಣು ಬಿದ್ದಿದೆ. ''ನನಗೆ ಆ ಶೂ ಬೇಕು'' ಎಂದು ನಟಿ ಲಕ್ಷ್ಮೀ ಮಂಚು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ನಿಖಿಲ್ ಪ್ರತಿಕ್ರಿಯೆ ಕೊಟ್ಟಿಲ್ಲ.

Telugu Actress Lakshmi Manchu wants Nikhil Kumars shoes

ಅಸಲಿಗೆ, ನಿಖಿಲ್ ಕುಮಾರಸ್ವಾಮಿ ಮತ್ತು ಲಕ್ಷ್ಮೀ ಮಂಚು ಆತ್ಮೀಯ ಸ್ನೇಹಿತರು. ಟಾಲಿವುಡ್ ನ ಹಿರಿಯ ನಟ ಮೋಹನ್ ಬಾಬು ಪುತ್ರಿ ಆಗಿರುವ ಲಕ್ಷ್ಮೀ ಮಂಚು ಆಯೋಜಿಸಿದ್ದ ಕೆಲವು ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ದಾರೆ. ಲಕ್ಷ್ಮೀ ಮಂಚು ಮತ್ತು ನಿಖಿಲ್ ಕುಟುಂಬದ ನಡುವೆ ಉತ್ತಮ ಒಡನಾಟವಿದೆ.

telugu-actress-lakshmi-manchu-wants-nikhil-kumars-shoes

ನಿಖಿಲ್ ಕುಮಾರಸ್ವಾಮಿ ಅಭಿನಯದ ಚೊಚ್ಚಲ ಚಿತ್ರ 'ಜಾಗ್ವಾರ್' ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಿತ್ತು. ಇನ್ನೂ 'ಸೀತಾರಾಮ ಕಲ್ಯಾಣ' ಮತ್ತು 'ಕುರುಕ್ಷೇತ್ರ' ಟಾಲಿವುಡ್ ನಲ್ಲೂ ಸದ್ದು ಮಾಡ್ತು. ಹೀಗಾಗಿ, ನಿಖಿಲ್ ಗೆ ತೆಲುಗು ಸಿನಿ ಅಂಗಳದ ನಟ-ನಟಿಯರ ಪರಿಚಯವಿದೆ.

ಸದ್ಯ ನಾಲ್ಕನೇ ಚಿತ್ರದ ತಯಾರಿಯಲ್ಲಿ ನಿಖಿಲ್ ಕುಮಾರಸ್ವಾಮಿ ತೊಡಗಿದ್ದಾರೆ.

More from Filmibeat

English summary
Telugu Actress Lakshmi Manchu wants Nikhil Kumar's shoes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X