"ಆಂಧ್ರದ ಜನ ರೌಡಿಗಳನ್ನೇ ಆಯ್ಕೆ ಮಾಡಿದ್ದಾರೆ" ಬಾಲಕೃಷ್ಣ ವಿರುದ್ಧ ನಟಿ ಮಾಧವಿ ಕಾಮೆಂಟ್.. ಫ್ಯಾನ್ಸ್ ಆಕ್ರೋಶ
ಟಾಲಿವುಡ್ ದಿಗ್ಗಜ ನಂದಮೂರಿ ಬಾಲಕೃಷ್ಣ ಹೆಚ್ಚು ಕಡಿಮೆ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. 60 ಹರೆಯದಲ್ಲೂ ಸೂಪರ್ ಹಿಟ್ ಸಿನಿಮಾಗಳನ್ನು ಕೊಡುತ್ತಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಬಾಲಕೃಷ್ಣ ನಟನೆಯನ್ನಷ್ಟೇ ಅಲ್ಲ. ಶಾಸಕರಾಗಿಯೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಹಿಂದೂಪುರಂ ಶಾಸಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಬಂಧನವಾಗಿದೆ. ಈ ಸಂಬಂಧ ನಟ ಬಾಲಕೃಷ್ಣ ಅಖಾಡಕ್ಕೆ ಇಳಿದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿಯೇ ಬಾಲಕೃಷ್ಣ ವಿಧಾನ ಸಭೆಗೆ ಪ್ರವೇಶ ಕೊಟ್ಟಿದ್ದರು. ಈ ವೇಳೆ ಬಾಲಕೃಷ್ಣ ಆಕ್ರೋಶವನ್ನು ಕಂಡು ತೆಲುಗು ನಾಯಕಿ ಮಾಧವಿ ಲತಾ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಇದೇ ಹೇಳಿಕೆ ಈಗ ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ. ಅಷ್ಟಕ್ಕೂ ಆ ನಟಿ ಬಾಲಯ್ಯನ ಬಗ್ಗೆ ಹೇಳಿದ್ದೇನು? ತಿಳಿಯಲು ಮುಂದೆ ಓದಿ.

ವಿಧಾನ ಸಭೆಯಲ್ಲಿ ಬಾಲಕೃಷ್ಣ ಗದ್ದಲ
ಬಾಲಕೃಷ್ಣ ತೆಲುಗು ದೇಶಂ ಪಕ್ಷದಿಂದ ಹಿಂದೂಪುರಂದ ಶಾಸಕರಾಗಿ ಗೆದ್ದಿದ್ದರು. ಹೀಗಾಗಿ ಚಂದ್ರಬಾಬು ನಾಯ್ಡು ಬಂಧದ ಹಿನ್ನೆಲೆಯಲ್ಲಿ ವಿಧಾನಸಭೆಗೆ ಎಂಟ್ರಿ ಕೊಟ್ಟಿದ್ದರು. ಮೊದಲ ದಿನವೇ ಚಂದ್ರಬಾಬು ಬಂಧನಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಗದ್ದಲ ಮಾಡಿದ್ದರು. ಹಾಗೇ ವೈಎಸ್‌ಆರ್ ಕಾಂಗ್ರೆಸ್ ಶಾಸಕರೊಂದಿಗೆ ವಾಗ್ಯುದ್ಧಕ್ಕೆ ಇಳಿದಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಲಯ್ಯ ನಡೆಗೆ ಖಂಡನೆ
ಬಾಲಯ್ಯ ಆಕ್ರೋಶ ಹೊರಹಾಕಿ ಹೊರಬರುತ್ತಿದ್ದಂತೆ ವೈಎಸ್‌ಆರ್ ಕಾಂಗ್ರೆಸ್ ಮುಖಂಡರು ಆಕ್ರೋಶ ಹೊರಹಾಕಿದ್ದರು. ಬಾಲಕೃಷ್ಣ ನಡೆಯನ್ನು ಖಂಡಿಸಿ ಟೀಕೆ ಮಾಡಿದ್ದರು. ಇದೇ ವೇಳೆ ನೆಟ್ಟಿಗರು ಕೂಡ ಬಾಲಕೃಷ್ಣ ನಡೆಯನ್ನು ಖಂಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಬಾಲಕೃಷ್ಣ ವಿಡಿಯೋ ವೈರಲ್ ಆಗುತ್ತಿದ್ದಂತೆ ತೆಲುಗು ನಟಿ ಮಾಧವಿ ಲತಾ ಪ್ರತಿಕ್ರಿಯೆ ನೀಡಿದ್ದಾರೆ. ಇದು ವಿವಾದವನ್ನು ಸೃಷ್ಟಿಸಿದೆ.
ಬಾಲಯ್ಯ ರೌಡಿ ಎಂದು ಪರೋಕ್ಷ ಕಮೆಂಟ್
ಆಂಧ್ರಪ್ರದೇಶ ವಿಧಾನ ಸಭೆಯಲ್ಲಿ ಬಾಲಕೃಷ್ಣ ಹಾವ ಭಾವಗಳು ವಿಡಿಯೋವನ್ನು ನಟಿ ಮಾಧವಿ ಲತಾ ಶೇರ್ ಮಾಡಿದ್ದರು. ಬಳಿಕ " ಆಂಧ್ರದ ಜನತೆ ರೌಡಿಗಳನ್ನು ಆಯ್ಕೆ ಮಾಡಿದ್ದಾರೆ. ಕ್ಷಮಿಸಿ ಬಿಡಿ ನಾನು ಹೇಳಿದ್ದು ತಪ್ಪಾಗಿದೆ. ಅವರನ್ನು ಎಂಎಲ್‌ಎ ಎಂದೂ ಕರೆಯುತ್ತಾರೆ" ಎಂದು ವಿವೇದಾತ್ಮಕ ಕಮೆಂಟ್ ಮಾಡಿದ್ದರು. ಅದೇ ಹೇಳಿಕೆ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಬಾಲಕೃಷ್ಣ ಅಭಿಮಾನಿಗಳ ಕೆಂಗಣ್ಣಿಗೆ ಮಾಧವಿ ಲತಾ ಗುರಿಯಾಗಿದ್ದಾರೆ.

ಬಾಲಯ್ಯ ಅಭಿಮಾನಿಗಳ ಆಕ್ರೋಶ
ನಟಿ ಮಾಧವಿ ಲತಾ ಮಾಡಿರೋ ಕಮೆಂಟ್‌ಗೆ ಬಾಲಕೃಷ್ಣ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಹಾಗೇ ಟಿಡಿಪಿ ಕಾರ್ಯಕರ್ತರು ಮಾಧವಿ ಲತಾ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದಕ್ಕೆ ಹೆದರದ ನಟಿ ಮಾಧವಿ ಲತಾ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಮೆಂಟ್ ಮಾಡುತ್ತಿರುವವರ ವಿರುದ್ಧ ತಿರುಗಿ ಕಮೆಂಟ್ ಮಾಡಿತ್ತಾರೆ.


Click it and Unblock the Notifications











