For Quick Alerts
  ALLOW NOTIFICATIONS  
  For Daily Alerts

  ರಾಜಕಾರಣಿ ಜೊತೆ ಸಪ್ತಪದಿ ತುಳಿಯಲಿದ್ದಾರೆ ಯುವ ನಟಿ ಮೆಹ್ರೀನ್

  |

  ದಕ್ಷಿಣ ಭಾರತದ ಖ್ಯಾತ ನಟಿ ಮೆಹ್ರೀನ್ ಪಿರ್ಝಾದಾ ಕಾಂಗ್ರೆಸ್ ಯುವ ರಾಜಕಾರಣಿ ಜೊತೆ ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದಾರೆ ಎಂಬ ವಿಷಯ ಹೊರಬಿದ್ದಿದೆ.

  ಮಾರ್ಚ್ ತಿಂಗಳಲ್ಲಿ ಮೆಹ್ರೀನ್ ಮತ್ತು ರಾಜಕಾರಣಿ ಭವ್ಯ ಬಿಷ್ಣೋಯಿ ಅವರ ನಿಶ್ಚಿತಾರ್ಥ ನಡೆಯಲಿದೆ ಎನ್ನಲಾಗಿದೆ. ರಾಜಸ್ಥಾನದ ಜೈಪುರದಲ್ಲಿ ಖಾಸಗಿಯಾಗಿ ಎಂಗೇಜ್‌ಮೆಂಟ್ ನೆರವೇರಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.

  ಶಾರುಖ್ ಖಾನ್ ಬಂಗಲೆಯಲ್ಲಿ ವರುಣ್ ಧವನ್ ಮದುವೆ ಸಂಭ್ರಮಶಾರುಖ್ ಖಾನ್ ಬಂಗಲೆಯಲ್ಲಿ ವರುಣ್ ಧವನ್ ಮದುವೆ ಸಂಭ್ರಮ

  ಇದು ಕುಟುಂಬದವರು ನಿಶ್ಚಯ ಮಾಡಿರುವ ಸಂಬಂಧ ಆಗಿದ್ದು, ಲಾಕ್‌ಡೌನ್ ಸಮಯದಲ್ಲಿ ಈ ಮದುವೆ ಮಾತುಕತೆ ನಡೆದಿದೆಯಂತೆ. ಸದ್ಯಕ್ಕೆ ವಿವಾಹದ ದಿನಾಂಕ ಅಂತಿಮವಾಗಿ ಎಂದು ತಿಳಿದು ಬಂದಿದೆ.

  ನಟಿ ಮೆಹ್ರೀನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಭವ್ಯ ಬಿಷ್ಣೋಯಿ ಅವರ ಫೋಟೋ ಶೇರ್ ಮಾಡಿದ್ದು, ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ''ಹ್ಯಾಪಿ ಬರ್ತಡೇ (Happy birthday, my forever one)'' ಎಂದು ಪೋಸ್ಟ್ ಹಾಕುವ ಮೂಲಕ ತಮ್ಮ ಮದುವೆ ಬಗ್ಗೆ ಮಾಹಿತಿ ನೀಡಿದ್ದಾರೆ.

  ಮೆಹ್ರೀನ್ ಪೋಸ್ಟ್‌ಗೆ ಅಭಿಮಾನಿಗಳು ಹಾಗೂ ಸಿನಿಮಾರಂಗದವರು ಶುಭಾಶಯ ತಿಳಿಸಿದ್ದಾರೆ. ಅಂದ್ಹಾಗೆ, ಭವ್ಯ ಭಿಷ್ಣೋಯಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗ.

  ಸೌತ್ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ನಟಿ ಮೆಹ್ರೀನ್ 2016ರಲ್ಲಿ ತೆಲುಗು ಇಂಡಸ್ಟ್ರಿ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ತಮಿಳು ಹಾಗೂ ತೆಲುಗಿನಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡ್ತಿದ್ದಾರೆ. ಮಹಾನುಭಾವಡು, ರಾಜ ದಿ ಗ್ರೇಟ್, ನೋಟಾ, ಕವಚಂ, ಎಫ್ 2, ಪಟಾಸ್, ಅಶ್ವತ್ಥಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  ಪ್ರಸ್ತುತ, ವೆಂಕಟೇಶ್ ಮತ್ತು ವರುಣ್ ತೇಜ ನಟಿಸುತ್ತಿರುವ ಎಫ್ 3 ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ವೈರಲ್ ಆಗೋಯ್ತು ರಾಬರ್ಟ್ ಚಿತ್ರದ ಡಿ ಬಾಸ್ ಡೈಲಾಗ್ | Filmibeat Kannada
  English summary
  South Actress Mehreen Pirzada to marry politician Bhavya Bishnoi?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X