ಮೆಗಾಸ್ಟಾರ್ ಕುಟುಂಬದಲ್ಲಿ ಮದುವೆ ಸಂಭ್ರಮ: ಚಿರಂಜೀವಿ ತಮ್ಮನ ಮಗಳ ಭಾವಿ ಪತಿ ಇವರೇ
ಕೊರೊನಾ ಲಾಕ್ ಡೌನ್ ನಲ್ಲಿ ತೆಲುಗು ನಟ, ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದಿಂದ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಇತ್ತೀಚಿಗೆ ಚಿರಂಜೀವಿ ತಮ್ಮ ನಾಗಬಾಬು ಪುತ್ರಿ, ನಟಿ ನಿಹಾರಿಕಾ ನಿಶ್ಚಿತಾರ್ಥ ಸಮಾರಂಭವನ್ನು ಕುಟುಂಬದವರು ರಹಸ್ಯವಾಗಿ ಮಾಡಿ ಮುಗಿಸಿದೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ವೈರಲ್ ಆಗಿತ್ತು. ಇದರೆ ಬೆನ್ನಲ್ಲೇ ಈಗ ನಟಿ ನಿಹಾರಿಕಾ ಭಾವಿ ಪತಿಯನ್ನು ಪರಿಚಯಿಸಿದ್ದಾರೆ.
Recommended Video
ನಿಹಾರಿಕಾ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಿತ್ತು. ಮೆಗಾ ಸ್ಟಾರ್ ಕುಟುಂಬದ ಕುಡಿ ನಿಹಾರಿಕಾ ನಟ ನಾಗ ಶೌರ್ಯ ಅವರನ್ನು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ನಾಗ ಶೌರ್ಯ ಮತ್ತು ನಿಹಾರಿಕಾ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿದ ನಂತರ ಇಬ್ಬರು ಡೇಟಿಂಗ್ ನಲ್ಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಕೇಳಿ ಬಂದಿತ್ತು. ಆದರೆ ಇತ್ತೀಚಿಗೆ ನಿಹಾರಿಕಾ ನಟ ಪ್ರಭಾಸ್ ಅವರ ಜೊತೆ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತು. ಆದರೀಗ ನಿಹಾರಿಕಾ ಭಾವಿ ಪತಿಯನ್ನು ಪರಿಚಿಯಿಸುವ ಮೂಲಕ ಈ ಎಲ್ಲಾ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

ನಿಶ್ಚಿತಾರ್ಥ ಸುದ್ದಿ ವೈರಲ್
ರಹಸ್ಯವಾಗಿ ನಿಹಾರಿಕಾ ನಿಶ್ಚಿತಾರ್ಥ ಸಮಾರಂಭ ಮಾಡಿಮುಗಿಸಿದ್ದಾರೆ ಎನ್ನುವ ಸುದ್ದಿ ಮೊನ್ನೆ ಮೊನ್ನೆಯಷ್ಟೆ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಮೆಗಾ ಸ್ಟಾರ್ ಕುಟುಂಬ ಯಾವುದೆ ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಸದ್ಯ ನಟಿ ನಿಹಾರಿಕಾ ಅವರೆ ಭಾವಿ ಪತಿಯನ್ನು ಪರಿಚಯಿಸುವ ಮೂಲಕ ಮದುವೆ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ನಿಹಾರಿಕಾ ಮದುವೆ ಆಗುತ್ತಿರುವ ಹುಡುಗ ಯಾರು?
ನಿಹಾರಿಕಾ ಮದುವೆ ಆಗುತ್ತಿರುವ ಹುಡುಗ ಖ್ಯಾತ ಉದ್ಯಮಿ ಚೈತನ್ಯ ಜೊನ್ನಲಗೆಡ್ಡ. ಹೈದರಾಬಾದ್ ನ ಖ್ಯಾತ ಎಂ ಎನ್ ಸಿ ಕಂಪನಿಯನ್ನು ನಡೆಸುತ್ತಿದ್ದಾರೆ. ಚೈತನ್ಯಾ ಗುಂಟೂರ್ ನ ಇನ್ಸ್ ಪೆಕ್ಟರ್ ಜನರೆಲ್ ಆಫ್ ಪೊಲೀಸ್ ಪ್ರಭಾಕರ್ ರಾವ್ ಅವರ ಪುತ್ರ. ಹೈದರಾಬಾದ್ ನಲ್ಲಿಯೆ ಹುಟ್ಟಿ ಬೆಳೆದ ಚೈತನ್ಯ ವಿದ್ಯಾಭ್ಯಾಸ ಸಹ ಹೈದರಾಬಾದ್ ನಲ್ಲಿಯೆ ಮಾಡಿ ಮುಗಿಸಿದ್ದಾರೆ.

ನಿಹಾರಿಕಾ ಅವರದ್ದು ಅರೇಂಜ್ ಮ್ಯಾರೇಜ್
ನಿಹಾರಿಕಾ ಅವರದ್ದು ಅರೇಂಜ್ ಮ್ಯಾರೇಜ್. ಕುಟುಂಬದವರು ಹುಡುಕಿದ ಹುಡುಗನನ್ನೆ ಮದುವೆ ಆಗುತ್ತಿದ್ದಾರೆ. ಈಗಾಗಲೆ ಇಬ್ಬರು ಕುಟುಂಬದ ನಡುವೆ ಮದುವೆ ಮಾತುಕತೆ ಸಹ ಮುಗಿದಿದೆಯಂತೆ. ಮೂಲಗಳ ಪ್ರಕಾರ ಇಬ್ಬರ ನಿಶ್ಚಿತಾರ್ಥ ಆಗಸ್ಟ್ ನಲ್ಲಿ ನಡೆಯಲಿದ್ದು, ಮದುವೆ ಈ ವರ್ಷದ ಕೊನೆಯಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಫೋಟೋಶೂಟ್ ವೈರಲ್
ನಿಹಾರಿಕಾ ಭಾವಿ ಪತಿ ಚೈತನ್ಯ ಜೊತೆ ಇರುವ ಫೋಟೋಗಳನ್ನು ಸಾಮಾಜಿಕ ಜಲಾತಣದಲ್ಲಿ ಶೇರ್ ಮಾಡಿದ್ದಾರೆ. ಇಬ್ಬರ ಫೋಟೋ ಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚಿಗೆ ನಿಹಾರಿಕಾ ಒಬ್ಬರನ್ನು ತಬ್ಬಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದರು. ಆದರೆ ಆ ವ್ಯಕ್ತಿ ಯಾರು ಎನ್ನುವುದನ್ನ ರಿವೀಲ್ ಮಾಡಿರಲ್ಲಿ. ಆದರೀಗ ಎಲ್ಲಾ ಗೊಂದಲ, ಕುತೂಹಲಕ್ಕೆ ತೆರೆ ಎಳೆದಿದ್ದಾರೆ.


Click it and Unblock the Notifications











