ಗುರುತೇ ಸಿಗದಷ್ಟು ಬದಲಾದ ಖ್ಯಾತ ನಟಿ, ಅಭಿಮಾನಿಗಳು ಶಾಕ್..!

ಬಣ್ಣದ ಪ್ರಪಂಚದಲ್ಲಿ ಅನೇಕ ನಾಯಕಿಯರು ಸಹಜ ಸೌಂದರ್ಯಕ್ಕೆ ಸರಳ ಸಾಧನೆಗಳ ಮೊರೆ ಹೋಗುತ್ತಾರೆ. ಆದರೂ ಕೂಡ ಕೆಲವೊಮ್ಮೆ ಜೀವನ ಶೈಲಿ, ಆಹಾರ ಕ್ರಮದಲ್ಲಾಗುವ ವ್ಯತ್ಯಾಸ, ಕಾಲ ಕಾಲಕ್ಕೆ ದೇಹದಲ್ಲಿ ಆಗುವ ಹಾರ್ಮೋನ್‌ಗಳ ಏರುಪೇರಿಂದ ದೇಹದ ಸೌಂದರ್ಯದಲ್ಲಿ ವ್ಯತ್ಯಾಸ ಕಾಣಿಸುತ್ತೆ. ಇನ್ನು ಕೆಲ ಒಮ್ಮೆ ತಾವು ಒಪ್ಪಿಕೊಂಡ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸ್ಟಾರ್‌ಗಳು ತಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳುತ್ತಾರೆ.

ಆದರೆ ಆ ನಂತರ ಮತ್ತೆ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಾರೆ. ಕೊನೆಗೆ ಪ್ರಯತ್ನವನ್ನೇ ಕೈ ಚೆಲ್ಲುತ್ತಾರೆ. ಇದನ್ನರಿಯದ ಅನೇಕರು ಸುಖಾ ಸುಮ್ಮನೆ ಸೆಲೆಬ್ರೀಟಿಗಳಿಗೆ ಪ್ರಶ್ನೆಗಳನ್ನು ಮಾಡುತ್ತಾರೆ. ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯವನ್ನು ಟೀಕಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ.

Telugu Actress Nivetha Thomas Trolled Again Over Her Weight

ಇನ್ನು ಕೆಲವರು ಇದೆಲ್ಲ ಪ್ಲಾಸ್ಟಿಕ್ ಸರ್ಜರಿಯ ಸೈಡ್ ಎಫೆಕ್ಟ್ ಎಂದು ಮಾತನಾಡಲು ಶುರು ಮಾಡುತ್ತಾರೆ. ಸದ್ಯಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಾಯಕಿ ನಿವೇತಾ ಥಾಮಸ್ ಅವರ ವಿಚಾರದಲ್ಲಿಯೂ ಇದೇ ಆಗುತ್ತಿದೆ.

ಹೌದು, ನಿವೇತಾ ಥಾಮಸ್.. 'ಜಿಲ್ಲಾ'.. 'ಜೆಂಟಲ್‌ಮನ್'.. 'ಜೈ ಲವಕುಶ'.. 'ಪಾಪನಾಶನಂ'.. 'ದರ್ಬಾರ್'.. 'ವಕೀಲ್ ಸಾಬ್'.. 'ಶಾಕಿನಿ ಡಾಕಿನಿ'.. ಹೀಗೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಚೆಲುವೆ. ಕೇವಲ ತೆಲುಗು ಮಾತ್ರ ಅಲ್ಲ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೂಡ ನಿವೇಥಾ ಅಭಿನಯಿಸಿದ್ದಾರೆ.

ಇಂಥಾ ನಿವೇತಾ ಮೊನ್ನೆ ತೆಲಂಗಾಣ ಸರ್ಕಾರದ ಪ್ರಶಸ್ತಿಯನ್ನು ಗೆದ್ದಿದ್ದಾರೆ. '35 ಇತಿ ಚಿನ್ನ ಕಥಾ ಕಾದು' ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಸ್ವೀಕರಿಸಲು ನಿವೇತಾ ಬಂದಾಗ ಎಲ್ಲರೂ ಅರೆ ಕ್ಷಣ ಶಾಕ್ ಆಗಿದ್ದಾರೆ. ಇವರು ನಾವು ನೋಡಿದ ನಿವೇತಾ ಥಾಮಸ್ ಅವರೇನಾ ಎಂದು ತಮಗೆ ತಾವೇ ಪ್ರಶ್ನೆಯನ್ನು ಕೇಳಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಗುರುತು ಹಿಡಿಯಲಾಗದಷ್ಟು ನಿವೇತಾ ಬದಲಾಗಿದ್ದಾರೆ. ದಪ್ಪ ಆಗಿದ್ದಾರೆ.

ನಿವೇತಾ ಥಾಮಸ್ ಅವರ ಈ ಲುಕ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗಿದೆ. ಅನೇಕರು ನಿವೇತಾ ಅವರ ಬದಲಾಗಿರುವ ದೇಹದ ಕುರಿತು ಕೀಳಾಗಿ ಮಾತನಾಡುತ್ತಿದ್ದಾರೆ. ನಿವೇತಾ ಅವರನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ. ದೇಹದ ಆಕಾರ ಮತ್ತು ತೂಕವನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಇನ್ನು ಕೆಲವರು ಬೆರಳಣಿಕೆಯಷ್ಟು ಜನ ನಿವೇತಾ ಅವರಿಗೆ ಆರೋಗ್ಯ ಸಮಸ್ಯೆ ಇರಬಹುದು ಎಂದು ಕಾಳಜಿಯನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.

telugu-actress-nivetha-thomas-trolled-again-over-her-weight

ಇನ್ನು 2024ರ ನಂತರ ನಿವೇತಾ ಯಾವ ಚಿತ್ರವನ್ನು ಒಪ್ಪಿಕೊಂಡಿಲ್ಲ. ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ನಿವೇತಾ ಅವರ ದೇಹದಲ್ಲಿ ಆದ ಈ ಬದಲಾವಣೆಯಿಂದ ಅವರಿಗೆ ಚಿತ್ರರಂಗದಲ್ಲಿ ಅವಕಾಶ ಸಿಗುತ್ತಿಲ್ಲ ಎನ್ನುವ ಮಾತು ಕೂಡ ಸದ್ಯ ಕೇಳಿ ಬರುತ್ತಿವೆ.

ಅಂದ್ಹಾಗೇ ನಿವೇತಾಗೆ ಸದ್ಯ ಅತ್ಯುತ್ತಮ ನಟಿ ಎಂಬ ಪ್ರಶಸ್ತಿಯನ್ನು ತಂದು ಕೊಟ್ಟ '35 ಚಿನ್ನ ಕಥ ಕಾದು' ಚಿತ್ರದಲ್ಲಿ ಮಕ್ಕಳ ತಾಯಿಯಾಗಿ ಸೀರೆ ಉಟ್ಟು ಡೀ-ಗ್ಲಾಮರಸ್ ರೋಲ್‌ನಲ್ಲಿ ನಿವೇತಾ ಮಿಂಚಿದ್ದರು.ಈ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಎಂದೇ ನಿವೇತಾ ತೂಕ ಹೆಚ್ಚಿಸಿಕೊಂಡಿದ್ದರು ಎನ್ನುವ ಮಾತಿದೆ. ಈ ಹಿಂದೆ 'ಸೈಜ್ ಜೀರೊ' ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ ಕೂಡ ತೂಕ ಹೆಚ್ಚಿಸಿಕೊಳ್ಳುವ ಸಾಹಸ ಮಾಡಿದ್ದರು. ಆದರೆ ಬಳಿಕ ಸಣ್ಣ ಆಗಿ ಮೊದಲಿನಂತೆ ಆಗಲು ಅನುಷ್ಕಾ ಅವರಿಗೆ ಸಾಧ್ಯವಾಗಲಿಲ್ಲ. ನಿವೇತಾ ವಿಚಾರದಲ್ಲಿ ಕೂಡ ಇದೇ ರೀತಿ ಆಗಿರಬೇಕು ಎನ್ನುವ ಅನುಮಾನ ಸದ್ಯ ಹಲವರಲ್ಲಿದೆ.

More from Filmibeat

English summary
Trolls target Telugu actress Nivetha Thomas over her weight, again. Get the full story behind the recent online criticism and what's being said.
Read more about: actress weight
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X