Don't Miss!
- Technology
ಟೆಲಿಗ್ರಾಮ್ನಲ್ಲಿರುವ ಈ ಆಯ್ಕೆಯು ವಾಟ್ಸಾಪ್ಗಿಂತ ಭಿನ್ನವಾಗಿದೆ! ಇದರ ಲಾಭವೇನು?
- News
ಗಣರಾಜ್ಯೋತ್ಸವ, ವಾರಾಂತ್ಯದ ರಜೆ: ಬೆಂಗಳೂರಿನಿಂದ ತೆರಳುವವರಿಗೆ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಶಾಕ್
- Sports
Ind vs NZ 3rd ODI: ರೋಹಿತ್-ಗಿಲ್ ಶತಕದ ಆರ್ಭಟ: ನ್ಯೂಜಿಲೆಂಡ್ಗೆ ಗೆಲ್ಲಲು 386 ರನ್ ಗುರಿ
- Automobiles
ವಿಚಿತ್ರ ಆಫರ್ ಘೋಷಿಸಿದ ಫೋರ್ಡ್: ಈ ಕಾರಿನ ಬುಕಿಂಗ್ ರದ್ದು ಮಾಡಿಕೊಂಡರೆ 2 ಲಕ್ಷ ರೂ. ನಗದು
- Lifestyle
ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ವಿಟಮಿನ್ ಡಿ ಕೊರತೆ, ಕಾರಣವೇನು?
- Finance
10 ಗ್ರಾಂ ಚಿನ್ನದ ಬೆಲೆ 113 ರೂ, ಅಚ್ಚರಿ ಆಯ್ತ, ವೈರಲ್ ಸುದ್ದಿ ಓದಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನನಗೂ ಸಂಗಾತಿ ಬೇಕು, ಆದ್ರೆ ಈ ವಯಸ್ಸಲ್ಲಿ ಸೆಕೆಂಡ್ ಮ್ಯಾರೇಜ್ ಕಷ್ಟ ಯಾಕಂದ್ರೆ": ಪ್ರಗತಿ
ಟಾಲಿವುಡ್‌ನಲ್ಲಿ ಪೋಷಕ ನಟಿಯಾಗಿ ಗುರ್ತಿಸಿಕೊಂಡಿರುವ ನಟಿ ಪ್ರಗತಿ 2ನೇ ಮದುವೆ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ತೆಲುಗು ಸಿನಿಮಾಗಳಲ್ಲಿ ತಾಯಿ ಪಾತ್ರಗಳಲ್ಲಿ ಹೆಚ್ಚು ನಟಿಸುತ್ತಾ ಬಂದಿದ್ದಾರೆ. ಪ್ರಗತಿ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.
ಈ ವಯಸ್ಸಿನಲ್ಲೂ ಹೆವಿ ವರ್ಕೌಟ್, ಇನ್‌ಸ್ಟಾ ರೀಲ್ಸ್, ಡ್ಯಾನ್ಸ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುವವರು ಇದ್ದಾರೆ. ಆದರೆ ಅದಕ್ಕೆಲ್ಲಾ ಆಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸದ್ಯ ಈಕೆ ಸಿಂಗಲ್ ಮದರ್. ಬಹಳ ವರ್ಷಗಳಿಂದ ಪತಿಯಿಂದ ದೂರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಮದುವೆ ಆಗಿ ತಪ್ಪು ಮಾಡಿಬಿಟ್ಟೆ ಎಂದು ಈ ಹಿಂದೆ ಒಮ್ಮೆ ಹೇಳಿಕೊಂಡಿದ್ದರು.
ಟಾಲಿವುಡ್‌ನಲ್ಲಿ
ಮತ್ತೆ
ತಲೆಎತ್ತಿದ
ಡ್ರಗ್ಸ್
ಪ್ರಕರಣ,
ನಟಿಯ
ಪತಿ
ಬಂಧನ
ನಟಿ ಪ್ರಗತಿ ಶಾಲಾ ದಿನಗಳಲ್ಲಿ ಪೊಲೀಸ್ ಆಗಬೇಕು ಎನ್ನುವ ಕನಸು ಕಂಡಿದ್ದರಂತೆ. ಆದರೆ ಓದಿನಲ್ಲಿ ಹಿಂದೆ ಬಿದ್ದಿದ್ದರಿಂದ ಅದು ಸಾಧ್ಯವಿಲ್ಲ ಎಂದು ಮದುವೆ ಆಗಿ ಸೆಟ್ಲ್ ಆಗಬೇಕು ಎಂದುಕೊಂಡರು. ಆದರೆ ಬಹಳ ಚಿಕ್ಕ ವಯಸ್ಸಿನಲ್ಲಿ ಮದುವೆ ಆಗಿ ತಪ್ಪು ಮಾಡಿದೆ ಎಂದು ಸಾಕಷ್ಟು ಭಾರಿ ಹೇಳಿಕೊಂಡಿದ್ದಾರೆ.

ಒಂದು ತಪ್ಪಿನಿಂದ ಹೊರ ಬರುವುದು ಕಷ್ಟ
"ಆವೇಶ, ಈಗೋ, ನಾನು ಏನು ಬೇಕಾದರೂ ಮಾಡುತ್ತೀನಿ ಎನ್ನುವ ಮೊಂಡುತನದಿಂದ ಚಿಕ್ಕ ವಯಸ್ಸಿನಲ್ಲಿ ಮದುವೆ ಆಗಿದ್ದೆ. ಆದರೆ ಅದರಿಂದ ಸಾಕಷ್ಟು ಸಮಸ್ಯೆ ಎದುರಿಸುವಂತಾಯಿತು" ಎಂದು ಹಿಂದೆ ಸಂದರ್ಶನದಲ್ಲಿ ವಿವರಿಸಿದ್ದರು. ಒಂದು ತಪ್ಪಿನಿಂದ ಹೊರ ಬರುವುದು ಅಷ್ಟು ಸುಲಭ ಅಲ್ಲ. ನಾಯಕಿಯಾಗಿ ನಟಿಸುತ್ತಿದ್ದ ಸಮಯದಲ್ಲೇ ಮದುವೆ ಆಗಿದ್ದೆ. ಅದರಿಂದ ಸಾಕಷ್ಟು ಕಳೆದುಕೊಂಡೆ."

ಒಬ್ಬ ಸಂಗಾತಿ ಬೇಕು
"ಪೋಷಕ ನಟಿಯಾಗಿ ಶ್ರಮಿಸಿದ ರೀತಿಯಲ್ಲಿ ನಾಯಕಿಯಾಗಿದ್ದಾಗ ಕೆಲಸ ಮಾಡಿದ್ದರೆ ನನ್ನ ಲೈಫ್ ಬೇರೆ ತರ ಇರುತ್ತಿತ್ತು" ಎಂದಿದ್ದರು. ಇದೀಗ ಮತ್ತೆ ಸಂದರ್ಶನದಲ್ಲಿ 2ನೇ ಮದುವೆ ಆಗುವ ಆಲೋಚನೆ ಇದೆಯಾ? ಎನ್ನುವ ಪ್ರಶ್ನೆ ಎದುರಾಗಿದೆ. ಅದಕ್ಕೆ ನಟಿ ಪ್ರಗತಿ ಉತ್ತರಿಸಿದ್ದಾರೆ. "ಮದುವೆ ಎನ್ನುವುದಕ್ಕಿಂತ ಒಬ್ಬ ಸಂಗಾತಿ ಬೇಕು. ಜೊತೆಗಾರ ಬೇಕು ಎನಿಸುತ್ತದೆ. ಆದರೆ ನನ್ನ ಮೆಚ್ಯುರಿಟಿಗೆ ಮ್ಯಾಚ್ ಆಗುವಂತಹ ವ್ಯಕ್ತಿ ಸಿಗಬೇಕು. ಕೆಲವೊಂದು ವಿಷಯಗಳಲ್ಲಿ ನಾನು ಬಹಳ ಕಾನ್ಫಿಡೆಂಟ್ ಆಗಿ ಇರುತ್ತೀನಿ. ಅದೇ ದೊಡ್ಡ ಸಮಸ್ಯೆ"

ಈಗ ಅಡ್ಜೆಸ್ಟ್ ಆಗುವುದು ಕಷ್ಟ
"20ರ ಹರೆಯದಲ್ಲಿ ಇದ್ದಿದ್ದರೆ ಅಡೆಸ್ಟ್ ಆಗುತ್ತಿದ್ದೆ. ಆದರೆ ಈಗ ಅದೆಲ್ಲಾ ಕಷ್ಟ ಎಂದು ಪ್ರಗತಿ ಹೇಳಿದ್ದಾರೆ. ಈ ವಯಸ್ಸಿನಲ್ಲಿ ಮದುವೆ ಆಗಿ ಅಡ್ಜೆಸ್ಟ್ ಮಾಡಿಕೊಂಡು ಬದುಕುವುದು ಕಷ್ಟ ಎನ್ನುವ ಮೂಲಕ ಮತ್ತೆ ಮದುವೆ ಆಗುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಮಗಳ ಜೊತೆ ಪ್ರಗತಿ ಒಬ್ಬೊಂಟಿಯಾಗಿ ಇದ್ದಾರೆ. ತಾಯಿ- ಮಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ವೀವ್ ಆಗಿದ್ದಾರೆ. ನಾಯಕ- ನಾಯಕಿಗೆ ತಾಯಿ ಪಾತ್ರಗಳಲ್ಲಿ ಹೆಚ್ಚು ಹೆಚ್ಚು ನಟಿಸುತ್ತಿದ್ದಾರೆ. ಸದ್ಯ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದಾರೆ.

ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ
1994ರಲ್ಲಿ ಪ್ರಗತಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 3 ವರ್ಷಗಳ ಕಾಲ ತಮಿಳು, ಮಲಯಾಳಂನಲ್ಲಿ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದರು. 90ರ ದಶಕದಲ್ಲೇ ಕಿರುತೆರೆ ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. ಅದೇ ಸಮಯದಲ್ಲಿ ಮದುವೆ ಆಗಿ ಚಿತ್ರರಂಗದಿಂದ ದೂರಾಗಿದ್ದರು. 5 ವರ್ಷಗಳ ನಂತರ ಮಹೇಶ್ ಬಾಬು ನಟನೆಯ 'ಬಾಬಿ' ಸಿನಿಮಾ ಮೂಲಕ ಮತ್ತೆ ಬಣ್ಣದಲೋಕಕ್ಕೆ ವಾಪಸ್ ಬಂದ ಪ್ರಗತಿ 2ನೇ ಇನ್ನಿಂಗ್ಸ್‌ನಲ್ಲಿ ಪೋಷಕ ನಟಿಯಾಗಿ ಮಿಂಚುತ್ತಿದ್ದಾರೆ.