"ಆ ಖ್ಯಾತ ಹಾಸ್ಯನಟ ನನ್ನೊಟ್ಟಿಗೆ ಕೆಟ್ಟದಾಗಿ ವರ್ತಿಸಿದ.. ಕ್ಯಾರವ್ಯಾನ್‌ಗೆ ಕರ್ಕೊಂಡ್ ಹೋಗಿ ಕೇಳ್ದೆ"
ತೆಲುಗು ಪೋಷಕ ನಟಿ ಪ್ರಗತಿ ಖ್ಯಾತ ಹಾಸ್ಯನಟ ತಮ್ಮೊಟ್ಟಿಗೆ ಕೆಟ್ಟದಾಗಿ ನಡೆದುಕೊಂಡ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ದಶಕಗಳ ಹಿಂದೆ ನಾಯಕಿ ಮೆರೆದ ಪ್ರಗತಿ ನಂತರ ಕಾರಣಾಂತರಗಳಿಂದ ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ಮದುವೆ ಆಗಿದ್ದರು. ಗಂಡನಿಗೆ ಡಿವೋರ್ಸ್ ನೀಡಿದ ಬಳಿಕ ಮತ್ತೆ ಕಿರುತೆರೆ ಮೂಲಕ ಬಣ್ಣದಲೋಕಕ್ಕೆ ವಾಪಸ್ ಆಗಿದ್ದರು. ಈಗ ತೆಲುಗಿನ ಸ್ಟಾರ್‌ಗಳ ಚಿತ್ರಗಳಲ್ಲಿ ನಟಿಸ್ತಿದ್ದಾರೆ.
ನಾಯಕ, ನಾಯಕಿಯರ ತಾಯಿ, ಅಕ್ಕ, ಅತ್ತಿಗೆ, ಅತ್ತೆಯ ಪಾತ್ರಗಳಲ್ಲಿ ಪ್ರಗತಿ ನಟಿಸುತ್ತಿದ್ದಾರೆ. ಬಹುಬೇಡಿಕೆಯ ಪೋಷಕ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನಲ್ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ವರ್ಕೌಟ್ ವಿಡಿಯೋಗಳನ್ನು ಶೇರ್ ಮಾಡುತ್ತಾ ರಂಜಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಪ್ರಗತಿ ಎರಡನೇ ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ವೈರಲ್ ಆಗಿತ್ತು.

ಸದ್ಯ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಭಾಗವಾಗಿ ಮಾತನಾಡುತ್ತಾ ನಟಿ ಪ್ರಗತಿ ಚಿತ್ರರಂಗದಲ್ಲಿ ಎದುರಿಸಿದ ಒಂದು ಕಹಿ ಘಟನೆ ಬಗ್ಗೆ ವಿವರಿಸಿದ್ದಾರೆ. ಖ್ಯಾತ ಹಾಸ್ಯನಟರೊಬ್ಬರು ತನ್ನೊಟ್ಟಿಗೆ ಕೆಟ್ಟದಾಗಿ ಬಿಹೇವ್ ಮಾಡಿದರು. ಇದರಿಂದ ನನಗೆ ಬಹಳ ಬೇಸರವಾಯಿತು. ಆ ದಿನ ಊಟ ಕೂಡ ತಿನ್ನಲು ಸಾಧ್ಯವಾಗದಂತಾಯಿತು ಎಂದು ವಿವರಿಸಿದ್ದಾರೆ.
ಹಾಸ್ಯ ನಟ ಮಿಸ್ ಬಿಹೇವ್ ಮಾಡಿದ್ರು
ಒಬ್ಬರು ಖ್ಯಾತ ಹಾಸ್ಯ ನಟ ನನ್ನೊಟ್ಟಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಪ್ರಗತಿ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. "ಚಿತ್ರರಂಗದಲ್ಲಿ ಅವರು ಬಹಳ ಹೆಸರು ಮಾಡಿರು ಹಾಸ್ಯ ನಟ. ಸೆಟ್‌ನಲ್ಲಿ ನನ್ನೊಟ್ಟಿಗೆ ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಬಹಳ ಸಭ್ಯವಾಗಿಯೂ ಸಹ ಇರುತ್ತಾರೆ. ಆದರೆ ಒಂದು ದಿನ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದರು. ಒಮ್ಮೆಲೆ ಅವರು ಆ ರೀತಿ ನಡೆದುಕೊಂಡಿದ್ದನ್ನು ನನ್ನಿಂದ ಜೀರ್ಣಿಸಿಕೊಳ್ಳಲಾಗಲಿಲ್ಲ."
ಕ್ಯಾರವಾನ್‌ಗೆ ಕರ್ಕೊಂಡ್ ಹೋಗಿ ಕೇಳ್ದೆ
"ಆ ದಿನ ನನಗೆ ಯಾವ ಕೆಲಸವನ್ನೂ ಮಾಡಲು ಮನಸ್ಸಾಗಲಿಲ್ಲ. ಅನ್ನ ತಿನ್ನಲು ಸಾಧ್ಯವಾಗಲಿಲ್ಲ. ಟೀ ಕೂಡ ಕುಡಿಯಲು ಆಗದಂತಾಯಿತು. ನನ್ನ ಶೂಟಿಂಗ್ ಮುಗಿದಿರಲಿಲ್ಲ. ಅವರ ಶೂಟಿಂಗ್ ಮುಗಿದು ಪ್ಯಾಕಪ್ ಮಾಡಿಕೊಂಡು ಹೊರಟಿದ್ದರು. ನಾನೇ ಅವರ ಬಳಿ ಹೋದೆ. ನಿಮ್ಮೊಟ್ಟಿಗೆ ಕೊಂಚ ಮಾತನಾಡಬೇಕು ಎಂದೆ. ನಾನು ಅವರನ್ನು ಕ್ಯಾರವ್ಯಾನ್‌ಗೆ ಕರ್ಕೊಂಡ್ ಹೋಗಿ ಕೇಳ್ದೆ."

ನಾನು ರಾಂಗ್ ಸಿಗ್ನಲ್ ಕೊಟ್ನಾ?
"ನಿಮ್ಮ ಜೊತೆ ಯಾವಾಗಾದರೂ ಮಿಸ್ ಬಿಹೇವ್ ಮಾಡಿದ್ದೀನಾ ಎಂದು ಪ್ರಶ್ನೆ ಮಾಡ್ದೆ. ಅಂದರೆ ನನ್ನ ಕಡೆಯಿಂದ ನಿಮಗೆ ಏನಾದರೂ ರಾಂಗ್ ಸಿಗ್ನಲ್ ಆಗಲಿ, ನನ್ನ ಬಾಡಿಲಾಂಗ್ವೇಜ್ ಆಗಲಿ, ನನ್ನ ಕಣ್ಣುಗಳಾಗಲಿ, ನನಗೆ ಗೊತ್ತಿಲ್ಲದೇ ನಾನು ಒಪ್ಪಿಕೊಂಡಂತೆ ಏನಾದರೂ ಆಹ್ವಾನಿಸಿದ್ನಾ? ಎಂದು ಕೇಳಿದ್ದಾಗಿ ಪ್ರಗತಿ ಹೇಳಿದ್ದಾರೆ.
ಏನಮ್ಮ ಇದೆಲ್ಲಾ ಅಂದ್ರು
"ನಾನು ಆ ರೀತಿ ಕೇಳುತ್ತಿದ್ದಂತೆ, ಅಯ್ಯಯ್ಯೋ ಏನಮ್ಮಾ ಆ ರೀತಿ ಹೇಳ್ತಿದ್ದೀಯಾ. ಏನಮ್ಮ ಇದೆಲ್ಲಾ ಅಂದ್ರು. ಮತ್ತೇನು ನೀವು ಆ ರೀತಿ ಅಂದ್ರಿ. ಅದು ಸರಿ ಅಲ್ಲ ಅಲ್ವಾ? ನೀವು ಆ ರೀತಿ ಮಾಡ್ತೀರಾ ಎಂದು ನಾನು ಅಂದುಕೊಂಡಿರಲಿಲ್ಲ. ನಾನು ಅಲ್ಲೇ ರಿಯಾಕ್ಟ್ ಆಗಿದ್ದರೆ ನಿಮ್ಮ ಪರಿಸ್ಥಿತಿ ಏನಾಗ್ತಿತ್ತು ಗೊತ್ತಾ ಅಂತ ಪ್ರಶ್ನಿಸಿದೆ. ನೀವಾಗಿದ್ದಕ್ಕೆ ನಾನು ಸೈಲೆಂಟ್ ಆಗಿ ಇದ್ದುಬಿಟ್ಟೆ. ನೀವು ಹಾಗೆಲ್ಲಾ ಮಾಡಲ್ಲ ಅನ್ನೋ ನಂಬಿಕೆಯಿಂದ. ನನ್ನ ಕಡೆಯಿಂದ ಗೊತ್ತಿಲ್ಲದೇ ಏನಾದರೂ ಮಿಸ್ಟೇಕ್ ಆಯ್ತಾ, ಎಂದಿದ್ದಕ್ಕೆ ಓಕೆ ಓಕೆ ಎಂದು ಹೊರಟುಬಿಟ್ಟರು" ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.


Click it and Unblock the Notifications











