Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನಾನು ಮಾಡುವುದರಲ್ಲಿ ಅರ್ಧ ಕೂಡ ಯುವತಿಯರು ಮಾಡೋಕ್ಕಾಗಲ್ಲ": ನಟಿ ಪ್ರಗತಿ ಸವಾಲ್
ಇತ್ತೀಚೆಗೆ ಎರಡನೇ ಮದುವೆ ಬಗ್ಗೆ ಮಾತಾಡಿ ತೆಲುಗು ನಟಿ ಪ್ರಗತಿ ಸುದ್ದಿ ಆಗಿದ್ದರು. ನನಗೆ ಒಬ್ಬ ಸಂಗಾತಿ ಬೇಕು, ಆದ್ರೆ ನನ್ನ ಮೆಚ್ಯುರಿಟಿಗೆ ಮ್ಯಾಚ್ ಆಗುವಂತಹ ವ್ಯಕ್ತಿ ಸಿಗೋದು ಕಷ್ಟ ಎಂದು ಪ್ರಗತಿ ಹೇಳಿದ್ದರು. ಇದೀಗ ವರ್ಕೌಟ್ ವಿಡಿಯೋ ಶೇಕ್ ಮಾಡಿ ನಟಿ ಸವಾಲ್ ಹಾಕಿದ್ದಾರೆ.
ದಶಕಗಳ ಹಿಂದೆ ನಾಯಕಿಯಾಗಿ ಚಿತ್ರರಂಗಕ್ಕೆ ಬಂದ ಪ್ರಗತಿ ನಂತರ ಮದುವೆ ಆಗಿ ಚಿತ್ರರಂಗದಿಂದ ದೂರಾಗಿದ್ದರು. ಆ ನಂತರ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದ ನಟಿ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ತೆಲುಗಿನ ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಗತಿ ನಟಿಸ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಚೆಲುವೆ ಆಗ್ಗಿಂದಾಗ್ಗೆ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಇನ್ನು ಜಿಮ್‌ನಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುವ ಚೆಲುವೆ ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ನಟಿ ಪ್ರಗತಿ ಯೂಟ್ಯೂಬ್‌ನಲ್ಲಿ ಹೊಸ ವರ್ಕೌಟ್ ವಿಡಿಯೋ ಪೋಸ್ಟ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
"ನನಗೂ
ಸಂಗಾತಿ
ಬೇಕು,
ಆದ್ರೆ
ಈ
ವಯಸ್ಸಲ್ಲಿ
ಸೆಕೆಂಡ್
ಮ್ಯಾರೇಜ್
ಕಷ್ಟ
ಯಾಕಂದ್ರೆ":
ಪ್ರಗತಿ
ಲಾಕ್‌ಡೌನ್ ಸಮಯದಲ್ಲಿ ಹೆಚ್ಚು ಮನೆಯಲ್ಲೇ ಇರುತ್ತಿದ್ದ ನಟಿ ಪ್ರಗತಿ ವರ್ಕೌಟ್ ಮಾಡಲು ಆರಂಭಿಸಿದ್ದರು. 47 ವರ್ಷ ವಯಸ್ಸಿನಲ್ಲಿ ಆಕೆ ಹೆವಿ ವರ್ಕೌಟ್ ಮಾಡುತ್ತಿರುತ್ತಾರೆ. ಅದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿರುತ್ತಾರೆ.

ಜಿಮ್ ರೊಟೀನ್ ಹೇಗಿರುತ್ತೆ?
ಪ್ರಗ್‌ಸ್ಟ್ರಾಂಗ್ ಎನ್ನುವ ಯೂಟ್ಯೂಬ್ ಚಾನಲ್ ಆರಂಭಿಸಿರುವ ನಟಿ ಪ್ರಗತಿ, ತಮ್ಮ ದೈನಂದಿನ ಬದುಕಿಗೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸಾಕಷ್ಟು ದಿನಗಳಿಂದ ಅಭಿಮಾನಿಗಳು ಪ್ರಗತಿ ವರ್ಕೌಟ್ ವ್ಲ್ಯಾಗ್ ಮಾಡುವಂತೆ ಕೇಳಿಕೊಳ್ಳುತ್ತಿದ್ದರಂತೆ. ಜಿಮ್‌ನಲ್ಲಿ ವರ್ಕೌಟ್ ಮಾಡ್ತಾ ಮಾಡ್ತಾ ಡೈಲಿ ಜಿಮ್ ರೊಟೀನ್ ಹೇಗಿರುತ್ತದೆ ಎನ್ನುವುದನ್ನು ವಿವರಿಸಿದ್ದಾರೆ. ಪ್ರಗತಿ ಮಾಡುವ ಕೆಲ ಇಂಟೆನ್ಸ್ ವರ್ಕೌಟ್‌ಗಳನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

ಸಣ್ಣ ಆಗಲೂ ವರ್ಕೌಟ್ ಮಾಡಲ್ಲ
ಪ್ರಗತಿ ಇಷ್ಟೆಲ್ಲಾ ವರ್ಕೌಟ್ ಮಾಡುತ್ತಾರೆ. ಅದರೆ ದೇಹದ ತೂಕ ಕಮ್ಮಿಆಗಲೇಯಿಲ್ಲ. ಗುಂಡು ಗುಂಡಗೆ ಇದ್ದಾರೆ ಎಂದು ಕೆಲವರು ಟ್ರೋಲ್ ಮಾಡುತ್ತಿರುತ್ತಾರೆ. ಅಂತಹವರಿಗೆ ಇದೀಗ ಆಕೆನೇ ಉತ್ತರ ಕೊಟ್ಟಿದ್ದಾರೆ. ನಾನು ಸಣ್ಣ ಆಗಲು ವರ್ಕೌಟ್ ಮಾಡಲ್ಲ. ಕೋರ್ ಸ್ಟ್ರೆಂಗ್ತ್‌ಗಾಗಿ ಇಷ್ಟೆಲ್ಲಾ ಬೆವರಿಳಿಸುತ್ತೇನೆ. ನನಗೆ ಸಣ್ಣ ಆಗುವ ಆಸೆ ಇಲ್ಲ. ಇದೇ ರೀತಿ ಗುಂಡಗೆ ಇರುವ ಇಷ್ಟ ಎಂದಿದ್ದಾರೆ. ಅಜಯ್ ಬೆನರ್ಜಿ ಎಂಬ ಕೋಚ್ ನೆರವಿನಿಂದ ಪ್ರತಿದಿನ ವರ್ಕೌಟ್ ಮಾಡ್ತೀನಿ. ನಾನು ಇವತ್ತು ಸ್ಟ್ರಾಂಗ್ ಆಗಿ ಇರೋದಕ್ಕೆ ಈತನೇ ಕಾರಣ ಎಂದು ಹೇಳಿದ್ದಾರೆ.

ಯುವತಿಯರಿಗೆ ಪ್ರಗತಿ ಸವಾಲ್
ಸಪೋರ್ಟ್ ಇಲ್ಲದೇ ಪುಲ್‌ಅಪ್ಸ್ ಮಾಡಲು ಸಪೋರ್ಟ್ ತೆಗೆದುಕೊಳ್ಳುತ್ತೇನೆ. ಒಂದಲ್ಲ ಒಂದು ದಿನ ಸಪೋರ್ಟ್ ಇಲ್ಲದೇ ಮಾಡಿ ತೋರಿಸುತ್ತೇನೆ ಎಂದು ಪ್ರಗತಿ ಹೇಳಿದ್ದಾರೆ. ಇನ್ನು "ನಾನು ಮಾಡುವ ಕೆಲ ವರ್ಕೌಟ್‌ಗಳನ್ನು ನನಗಿಂತ ಚಿಕ್ಕ ವಯಸ್ಸಿನವರು ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ. ಜಿಮ್ ಮಾಡುವ ವೇಳೆ ಎನರ್ಜಿ ಡ್ರಿಂಕ್ ಕುಡಿಯಲ್ಲ. ಬದಲಿಗೆ ಬ್ಲ್ಯಾಕ್ ಕಾಫಿ ಸೇವಿಸ್ತೀನಿ ಎಂದು ಹೇಳಿದ್ದಾರೆ. ಪ್ರತಿ ದಿನ 2 ಗಂಟೆಗಳ ಕಾಲ ಜಿಮ್‌ನಲ್ಲಿ ವರ್ಕೌಟ್ ಮಾಡ್ತೀನಿ. ಮತ್ತಷ್ಟು ವರ್ಕೌಟ್ ವಿಡಿಯೋಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

2ನೇ ಮದುವೆ ಬಗ್ಗೆ ಮಾತು
2ನೇ ಮದುವೆ ಆಗುವ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ಪ್ರಗತಿ, "ಮದುವೆ ಎನ್ನುವುದಕ್ಕಿಂತ ಒಬ್ಬ ಸಂಗಾತಿ ಬೇಕು. ಜೊತೆಗಾರ ಬೇಕು ಎನಿಸುತ್ತದೆ. ಆದರೆ ನನ್ನ ಮೆಚ್ಯುರಿಟಿಗೆ ಮ್ಯಾಚ್ ಆಗುವಂತಹ ವ್ಯಕ್ತಿ ಸಿಗಬೇಕು. ಕೆಲ ವಿಷಯಗಳಲ್ಲಿ ನಾನು ಬಹಳ ಕಾನ್ಫಿಡೆಂಟ್ ಆಗಿರ್ತೀನಿ. ಅದು ದೊಡ್ಡ ಸಮಸ್ಯೆ. 20ರ ಹರೆಯದಲ್ಲಿ ಇದ್ದಿದ್ದರೆ ಅಡೆಸ್ಟ್ ಆಗುತ್ತಿದ್ದೆ. ಆದರೆ ಈಗ ಅದೆಲ್ಲಾ ಕಷ್ಟ" ಎಂದು ಪ್ರಗತಿ ಹೇಳಿದ್ದರು.