For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಂತೆ ಖ್ಯಾತ ಹಾಸ್ಯನಟ

  |

  ತೆಲುಗು ಚಿತ್ರರಂಗದ ಖ್ಯಾತ ಪೊಷಕರ ನಟಿಯರಲ್ಲೊಬ್ಬರಾದ ಪ್ರಗತಿ ಶಾಕಿಂಗ್ ವಿಷಯವನ್ನು ಹೊರಹಾಕಿದ್ದಾರೆ.

  ಅಜ್ಜಿ ಜೊತೆ ಬೆಣ್ಣೆ ಕಡೆಯೋದನ್ನ ಕಲಿತ ಮಗಧೀರ | Ram Charan in Kitchen

  ಹಲವು ಪೋಷಕ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ, ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ. ಕಿರುತೆರೆಯಲ್ಲಿಯೂ ಹೆಸರು ಮಾಡಿರುವ ಪ್ರಗತಿ ದೊಡ್ಡ ಹಾಸ್ಯ ನಟರೊಬ್ಬರ ಮೇಲೆ ಅಪಾದನೆ ಹೊರಿಸಿದ್ದಾರೆ.

  ಪ್ರಗತಿ ಹೇಳಿರುವ ವಿಷಯ ಪ್ರಸ್ತುತ ಸಂಚಲನ ಸೃಷ್ಟಿಸಿದ್ದು, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆ ಹಿರಿಯ ನಟ ಯಾರು ಎಂಬ ಚರ್ಚೆ ಆರಂಭವಾಗಿದೆ.

  ಪ್ರಗತಿ ಹೇಳಿದ್ದೇನು? ಆ ಹಿರಿಯ ನಟ ಪ್ರಗತಿಯೊಂದಿಗೆ ಹೇಗೆ ನಡೆದುಕೊಂಡ? ಆ ಘಟನೆ ಏನು? ಹೆಚ್ಚಿನ ವಿವರಕ್ಕಾಗಿ ಸುದ್ದಿ ಓದಿ...

  ಸ್ಟಾರ್ ಹಾಸ್ಯನಟನಿಂದ ಅಸಭ್ಯ ವರ್ತನೆ

  ಸ್ಟಾರ್ ಹಾಸ್ಯನಟನಿಂದ ಅಸಭ್ಯ ವರ್ತನೆ

  ನಟಿ ಪ್ರಗತಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತೆಲುಗು ಸಿನಿ ರಂಗದಲ್ಲಿ ಹೆಸರು ಮಾಡಿರುವ ಖ್ಯಾತ ಹಾಸ್ಯ ನಟ ನನ್ನೊಂದಿಗೆ ಅತ್ಯಂತ ಅಸಭ್ಯವಾಗಿ ವರ್ತಿಸಿದ್ದರು ಎಂದು ಹೇಳಿದ್ದಾರೆ.

  'ಅಂದು ಆತನ ಮಾತು-ನಡತೆ ಕೆಟ್ಟದಾಗಿತ್ತು'

  'ಅಂದು ಆತನ ಮಾತು-ನಡತೆ ಕೆಟ್ಟದಾಗಿತ್ತು'

  ಚಿತ್ರೀಕರಣ ನಡೆಯಬೇಕಾದರೆ ಒಮ್ಮೆ ಆತ ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ, ಆತನ ಮಾತುಗಳೂ ಸಹ ಅಸಭ್ಯವಾಗಿತ್ತು. ಆತನ ನಡತೆ ಮೊದಲಿನಂತೆ ಇರಲಿಲ್ಲ. ಆತನಿಗೆ ಆ ಕೂಡಲೇ ಈ ವಿಷಯವನ್ನು ನೇರವಾಗಿ ಹೇಳೋಣವೆಂದು ನಾನು ಅವಕಾಶಕ್ಕಾಗಿ ಕಾದಿದ್ದೆ ಎಂದು ಆ ದಿನದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

  ಕ್ಯಾರಾವ್ಯಾನ್‌ಗೆ ತೆರಳಿ ಎಚ್ಚರಿಕೆ ನೀಡಿದೆ: ಪ್ರಗತಿ

  ಕ್ಯಾರಾವ್ಯಾನ್‌ಗೆ ತೆರಳಿ ಎಚ್ಚರಿಕೆ ನೀಡಿದೆ: ಪ್ರಗತಿ

  ಚಿತ್ರೀಕರಣ ಮುಗಿದ ಕೂಡಲೇ ಕ್ಯಾರಾವ್ಯಾನ್‌ ಗೆ ತೆರಳಿ, ನಿಮ್ಮ ಮಾತು, ನಿಮ್ಮ ವರ್ತನೆ ಸ್ವಲ್ಪವೂ ಸರಿಯಿಲ್ಲ, ಹೀಗೆ ಮಾಡಿದರೆ ಅದು ನಿಮ್ಮ ಘನತೆಗೆ ತಕ್ಕುದಾದುದಲ್ಲ, ಇನ್ನೊಮ್ಮೆ ನನ್ನ ಬಳಿ ಹೀಗೆ ವರ್ತಿಸಬೇಡಿ ಎಂದು ಎಚ್ಚರಿಕೆ ನೀಡಿದೆ. ಆ ಕ್ಷಣದಲ್ಲಿ ಅವರು ಮೌನವಾಗಿಬಿಟ್ಟರು ಎಂದು ಪ್ರಗತಿ ಹೇಳಿದ್ದಾರೆ.

  ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ: ಪ್ರಗತಿ

  ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ: ಪ್ರಗತಿ

  ಆ ಘಟನೆ ನಡೆದ ನಂತರ ಅದೇ ನಟ ನನ್ನ ಬಗ್ಗೆ ಇಲ್ಲ ಸಲ್ಲದ ಊಹಾಪೋಹಗಳನ್ನು ಹರಡಲು ಪ್ರಾರಂಭಿಸಿದ. ಪ್ರಗತಿಗೆ ದುರಹಂಕಾರ, ಆಕೆಗೆ ನಟನೆ ಬರುವುದಿಲ್ಲ ಎಂದು ಏನೇನೋ ಸುದ್ದಿಗಳನ್ನು ಹರಡಿಸಿದ ಎಂದು ಪ್ರಗತಿ ಹೇಳಿದ್ದಾರೆ.

  ಯಾರು ಆ ಸ್ಟಾರ್ ಹಾಸ್ಯ ನಟ

  ಯಾರು ಆ ಸ್ಟಾರ್ ಹಾಸ್ಯ ನಟ

  ಪ್ರಗತಿ ಹೇಳುತ್ತಿರುವ ಆ ಸ್ಟಾರ್ ಕಾಮಿಡಿಯನ್ ಯಾರು ಎಂಬ ಚರ್ಚೆ ಈಗ ಪ್ರಾರಂಭವಾಗಿದೆ. ತೆಲುಗು ಚಿತ್ರರಂಗದಲ್ಲಿ ಹಲವರು ಸ್ಟಾರ್ ಕಾಮಿಡಿಯನ್‌ಗಳಿದ್ದಾರೆ. ಬ್ರಹ್ಮಾನಂದ್, ಆಲಿ, ದಿವಂಗತ ವೇಣುಗೋಪಾಲ್, ಸಪ್ತಗಿರಿ, ವೆನ್ನಿಲ ಕಿಶೋರ್ ಹೀಗೆ ಪಟ್ಟಿ ಬೆಳೆಯುತ್ತದೆ. ಇವರಲ್ಲಿ ಯಾರೆಂಬ ಕುತೂಹಲ ಮೂಡಿದೆ.

  English summary
  A star comedy actor of Telugu industry harassed actress Pragathi. She talked about the incident in a interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X