ಸಿನಿಮಾ ಬಿಟ್ಟು ವೇಯ್ಟ್‌ಲಿಫ್ಟಿಂಗ್ ಅಭ್ಯಾಸ ಆರಂಭಿಸಿದ ಖ್ಯಾತ ನಟಿ
ದಶಕಗಳ ಹಿಂದೆ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದ ನಟಿ ಪ್ರಗತಿ ಈಗ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಆಕೆ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಈಕೆ ಯೂಟ್ಯೂಬ್ ಚಾನಲ್ ಕೂಡ ಶುರು ಮಾಡಿದ್ದಾರೆ. ಪದೆ ಪದೇ ಫೋಟೊ, ವಿಡಿಯೋಗಳನ್ನು ಶೇರ್ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಸದ್ಯ ಪ್ರಗತಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರಗತಿ ಹೆಚ್ಚು ಹೆಚ್ಚು ವರ್ಕೌಟ್ ವಿಡಿಯೋ ಶೇರ್ ಮಾಡುತ್ತಿದ್ದರು. ಫಿಟ್‌ನೆಸ್‌ಗಾಗಿ ಆಕೆ ಜಿಮ್‌ನಲ್ಲಿ ಕಸರತ್ತು ಮಾಡ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 90ರ ದಶಕದಲ್ಲಿ ಪ್ರಗತಿ ನಾಯಕಿಯಾಗಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ಮದುವೆ ಮಾಡಿಕೊಂಡು ಇಂಡಸ್ಟ್ರಿ ತೊರೆದಿದ್ದರು.

ಬಹಳ ವರ್ಷಗಳ ನಂತರ ಪ್ರಗತಿ ಪೋಷಕ ನಟಿಯಾಗಿ ಚಿತ್ರರಂಗಕ್ಕೆ ವಾಪಸ್ ಬಂದರು. ಸ್ಟಾರ್‌ಗಳ ಸಿನಿಮಾಗಳಲ್ಲಿ ನಾಯಕಿಯ ತಾಯಿ, ಅಕ್ಕ ಹೀಗೆ ಬಣ್ಣ ಹಚ್ಚುತ್ತಿರುತ್ತಾರೆ. ತೆಲುಗು ಮಾತ್ರವಲ್ಲದೇ ತಮಿಳು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲೂ ತೆಲುಗು ಪಿಲ್ಲ ನಟಿಸಿದ್ದಾರೆ. ಮಾತೃಭಾಷೆಯಲ್ಲಿ ನಟಿಸಿದ ಸಿನಿಮಾಗಳ ಸಂಖ್ಯೆ 100 ದಾಟಿದೆ.
ಬೋಲ್ಡ್ ಸ್ಟೇಟ್‌ಮೆಂಟ್‌ಗಳ ಮೂಲಕ ಗಮನ ಸೆಳೆಯುತ್ತಿದ್ದ ನಟಿ ಪ್ರಗತಿ ಈಗ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಗಳಿಗೆ ಸಿದ್ಧತೆ ನಡೆಸಿದ್ದಾರೆ. ಪ್ರಗತಿ ವೇಟ್ ಲಿಫ್ಟಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿರುವ ಬೆಡಗಿ ಪವರ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಇದರಲ್ಲಿ ಪ್ರಗತಿ ಶಾಕಿಂಗ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ವೇಟ್ ಲಿಫ್ಟರ್ ರೀತಿ ಭಾರ ಎತ್ತುತ್ತ ಕಾಣಿಸಿಕೊಂಡಿದ್ದಾರೆ. ಹೊಸ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ್ದಾರೆ.
ಬ್ಲ್ಯಾಕ್ ಟೀ ಶರ್ಟ್ ಮತ್ತು ಶಾರ್ಟ್ಸ್ ಧರಿಸಿ ಪ್ರಗತಿ ಗಂಭೀರವಾಗಿ ತನ್ನ ಗುರಿಯತ್ತ ಗಮನ ಕೇಂದ್ರಿಕರಿಸಿ ಪವರ್‌ಲಿಫ್ಟಿಂಗ್ ಅಭ್ಯಾಸ ಮಾಡುವುದನ್ನು ನೋಡಬಹುದು. ವಾರ್ಮ್‌ಅಪ್ ಮಾಡಿ ಬೆವರಿಳಿಸಿರುವ ಚೆಲುವೆ ಹಾಟ್ ಮತ್ತು ಖಡಕ್ ವರ್ಕೌಟ್ ಬಳಿಕ ಭಾರ ಎತ್ತುವುದನ್ನು ಅಭ್ಯಾಸ ಮಾಡಿದ್ದಾರೆ. ಸಾಮಾನ್ಯವಾಗಿ ನಟಿಯರು ಗ್ಲಾಮರಸ್ ಲೋಕದಲ್ಲೇ ಇರುವುದಕ್ಕೆ ಇಷ್ಟಪಡುತ್ತಾರೆ. ಆದರೆ ಪ್ರಗತಿ ಬೇರೆ ಕ್ಷೇತ್ರದಲ್ಲಿ ತಮ್ಮ ನಿರೂಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

"ಹೊಸ ಆರಂಭ. ಎರಡು ತಿಂಗಳ ಜೀವನ ವಿಭಿನ್ನ ಹಾದಿಗೆ ಹೊರಳುತ್ತದೆ ಎಂದು ಗೊತ್ತಿರಲಿಲ್ಲ. ಪವರ್‌ಲಿಫ್ಟಿಂಗ್‌ನಲ್ಲಿ ನನ್ನ ಹೊಸ ಪ್ರಯಾಣ ಪ್ರಾರಂಭವಾಗಿದೆ. ಈ ಪ್ರಯಾಣ ಈಗಷ್ಟೇ ಶುರುವಾಗಿದೆ. 250 ಕೆಜಿ ಭಾರ ಎತ್ತುವುದರಿಂದ ಆರಂಭವಾಗಿದೆ. ಮುಂದೆ ಇನ್ನು ಸಾಕಷ್ಟು ಇದೆ, ಎಷ್ಟೇ ಕಷ್ಟವಾದರೂ ಗುರಿ ತಲುಪುವವೆಗೂ ವಿಶ್ರಮಿಸುವುದಿಲ್ಲ ಎಂದು ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.
'ವಿಷನ್ ಡಿಸಿಪ್ಲಿನ್ ಪವರ್ ನ್ಯಾಷನಲ್ 2023' ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಪ್ರಗತಿ ಹೇಳಿದ್ದಾರೆ. ಸದ್ಯ ಈಕೆ ಸಿಂಗಲ್ ಮದರ್ ಆಗಿದ್ದು ಬಹಳ ವರ್ಷಗಳಿಂದ ಪತಿಯಿಂದ ದೂರಾಗಿದ್ದರು. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಚಿರಂಜೀವಿ ನಟನೆಯ 'ಭೋಳಾ ಶಂಕರ್' ಚಿತ್ರದಲ್ಲಿ ಪ್ರಗತಿ ನಟಿಸಿದ್ದಾರೆ.


Click it and Unblock the Notifications











