ಭಾರತ ತಂಡ ವಿಶ್ವಕಪ್ ಗೆದ್ದರೆ ಬೆತ್ತಲಾಗಿ ವೈಜಾಗ್ ಬೀಚ್‌ನಲ್ಲಿ ಓಡಾಡುತ್ತೇನೆ ಎಂದ ತೆಲುಗು ನಟಿ
ಐಸಿಸಿ ಏಕದಿನ ವಿಶ್ವಕಪ್ 2023 ಅಂತಿಮ ಹಂತ ತಲುಪಿದೆ. ಸೆಮಿಫೈನಲ್ ಪಂದ್ಯಗಳು ನಡೀತಿದ್ದು ಭಾನುವಾರ ಅಂತಿಕ ಕದನ ನಡೆಯಲಿದೆ. ಮೊದಲ ಸೆಮಿಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿವೆ. ಇನ್ನು ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮತ್ತೊಂದು ಪಂದ್ಯದಲ್ಲಿ ಫೈನಲ್‌ಗೇರುವ ಅದೃಷ್ಟ ಪರೀಕ್ಷಿಸಿಕೊಳ್ಳಲಿವೆ.
12 ವರ್ಷಗಳ ಹಿಂದೆ ಬಾಲಿವುಡ್ ನಟಿ ಪೂನಂ ಪಾಂಡೆ ಭಾರತ ತಂಡ ವಿಶ್ವಕಪ್ ಗೆದ್ದರೆ ಮುಂಬೈ ಬೀದಿಗಳಲ್ಲಿ ಬೆತ್ತಲೆಯಾಗಿ ತಿರುಗಾಡುತ್ತೇನೆ ಎಂದು ಘೋಷಿಸಿ ಭಾರೀ ಸುದ್ದಿಯಾಗಿತ್ತು. ಇದು ಭಾರೀ ವಿವಾದ ಸೃಷ್ಟಿಸಿ ಆಕೆಯ ವಿರುದ್ಧ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಭಾರತ ವಿಶ್ವಕಪ್ ಗೆದ್ದ ಮೇಲೆ ಸೈಲೆಂಟ್ ಆಗಿ ಪೂನಂ ಬಹಳ ಟ್ರೋಲ್ ಆಗಿದ್ದರು. ಸಿನಿಮಾಗಳಲ್ಲಿ ಅವಕಾಶ ಸಿಗದ ಕಾರಣ, ಜನಪ್ರಿಯತೆಗಾಗಿ ಈ ರೀತಿ ಸುಳ್ಳು ಹೇಳಬಾರದು ಎಂದು ಕೆಲವರು ಟೀಕೆ ಮಾಡಿದ್ದರು.

ಇದೀಗ ಮತ್ತೊಬ್ಬ ನಟಿ ಪೂನಂ ಪಾಂಡೆ ರೀತಿಯಲ್ಲೇ ಬಿಟ್ಟಿ ಪ್ರಚಾರಕ್ಕಾಗಿ ವಿಚಿತ್ರ ಹೇಳಿಕೆ ನೀಡಿದ್ದಾರೆ. ಭಾರತ ವಿಶ್ವಕಪ್ ಗೆದ್ದರೆ ವಿಶಾಖಪಟ್ಟಣಂ ಬೀಚ್‌ನಲ್ಲಿ ಬೆತ್ತಲೆಯಾಗಿ ನಡೆಯುತ್ತೇನೆ ಎಂದು ತೆಲುಗು ನಟಿ ರೇಖಾ ಬೊಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗುತ್ತಿದೆ. ಯಾವಾಗಲೂ ವಿವಾದಾತ್ಮಕ ಕಾಮೆಂಟ್‌ಗಳಿಂದ ಸುದ್ದಿಯಾಗುವ ರೇಖಾ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
ರೇಖಾ 'ಮಾಂಗಲ್ಯಂ', 'ಸ್ವಾತಿ ಚಿನುಕು', 'ರಂಗೀಲಾ', 'ಕಾಲಾಯ ತಸ್ಮಾಯ ನಾಮಃ' ಸೇರಿದಂತೆ ತೆಲುಗಿನ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವುದೇ ಸಿನಿಮಾ ಹಿಟ್ ಆಗಲಿಲ್ಲ. ಆಕೆಗೆ ಹೆಚ್ಚು ಅವಕಾಶಗಳು ಮಾತ್ರ ಸಿಗುತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಹೇಳಿಕೆಗಳಿಂದ ಬಿಟ್ಟಿ ಪ್ರಚಾರ ಗಿಟ್ಟಿಸುವ ಕೆಲಸ ಮುಂದುವರೆಸಿದ್ದಾರೆ.


Click it and Unblock the Notifications











