ಸಮಂತಾ ಅರಿಶಿನ ಶಾಸ್ತ್ರದಲ್ಲಿ ಶೋಭಿತಾ; "ನಾಗಚೈತನ್ಯ ನೀನು ಎಲ್ಲಿ ಹೋದ್ರೂ ಆ ಹೆಸರು ನಿನ್ನ ಬಿಡಲ್ಲ" ಎಂದ ನೆಟ್ಟಿಗರು

By ಫಿಲ್ಮಿಬೀಟ್ ಡೆಸ್ಕ್

ನಾಗ ಚೈತನ್ಯ, ಶೋಭಿತಾ ಧೂಳಿಪಾಲ ಹಾಗೂ ಸಮಂತಾ ಮ್ಯಾಟರ್ ಪ್ರತಿದಿನ ಏನಾದರೂ ಒಂದು ಇದೇ ಇರುತ್ತೆ. ಕಳೆದ ನಾಲ್ಕೈದು ವರ್ಷಗಳಿಂದ ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನದ ಬಗ್ಗೆನೇ ಸುದ್ದಿಯಾಗುತ್ತಿತ್ತು. ಆದ್ರೀಗ ನಾಗ ಚೈತನ್ಯ ಹಾಗೂ ಭಾವಿ ಪತ್ನಿ ಶೋಭಿತಾ ಧೂಳಿಪಾಲ ಮದುವೆ ಬಗ್ಗೆನೇ ಬಿಸಿ ಬಿಸಿ ಚರ್ಚೆ ಮಾಡಲಾಗುತ್ತಿದೆ. ಈ ಮಧ್ಯೆ ಸಮಂತಾ ಅರಿಶಿಣ ಶಾಸ್ತ್ರದ ಫೋಟೊವನ್ನು ನಾಗ ಚೈತನ್ಯ ಭಾವಿ ಪತ್ನಿ ಶೋಭಿತಾ ಹಂಚಿಕೊಂಡಿದ್ದಾರೆ.

ಕೆಲವು ತಿಂಗಳ ಹಿಂದಷ್ಟೇ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಇಬ್ಬರೂ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಲ್ಲಿಂದ ಇಬ್ಬರ ಮದುವೆ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈ ಮಧ್ಯೆ ತನ್ನ ಸಹೋದರಿಯ ಮದುವೆ ಸಮಾರಂಭದ ಫೋಟೊವನ್ನು ಶೋಭಿತಾ ಭಾಗಿಯಾಗಿದ್ದ ಫೋಟೊವನ್ನು ಶೇರ್ ಮಾಡಿದ್ದಾರೆ. ಈಗ ಅದ್ಯಾಕೆ? ಅಂತ ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.

Telugu actress Sobhita Dhulipala traditional look in Samantha mehendi function here is netizens reaction

ಅಂದ್ಹಾಗೆ ಸಮಂತಾ ಅರಿಶಿಣ ಶಾಸ್ತ್ರನಾ? ಮತ್ತೆ ಮದುವೆ ಆಗುತ್ತಿದ್ದಾರಾ ಅಂತ ಗೊಂದಲಕ್ಕೆ ಒಳಗಾಗಬೇಡಿ. ಶೋಭಿತಾ ಧೂಳಿಪಾಲ ಸಹೋದರಿಯ ಹೆಸರು ಕೂಡ ಸಮಂತಾ ಅನ್ನೋದು ವಿಶೇಷ. ಸಮಂತಾ ವೃತ್ತಿಯಲ್ಇ ವೈದ್ಯೆಯಾಗಿದ್ದು ಕಳೆದ ವರ್ಷ ದೆಹಲಿ ಮೂಲದ ವೈದ್ಯ ಸಾಹಿಲ್ ಗುಪ್ತಾ ಎಂಬುವವರನ್ನು ಮದುವೆ ಆಗಿದ್ದಾರೆ. ಸಹೋದರಿಯ ಅರಿಶಿಣ ಶಾಸ್ತ್ರದ ಫೋಟೊವನ್ನು ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಶೋಭಿತಾಳ ಮದುವೆ ಬಗ್ಗೆ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ.

ನಟಿ ಸಮಂತಾಗೆ ವಿಚ್ಚೇದನ ನೀಡಿದ ಬಳಿಕ ನಾಗ ಚೈತನ್ಯ ಮತ್ತೊಬ್ಬ ನಟಿಯನ್ನು ಡೇಟಿಂಗ್ ಮಾಡುತ್ತಿರುವ ವಿಷಯ ಗುಲ್ಲೆದ್ದಿತ್ತು. ಇದೇ ವೇಳೆ ಲಂಡನ್‌ಗೆ ಶೋಭಿತಾ ಹಾಗೂ ನಾಗಚೈತನ್ಯ ಇಬ್ಬರೂ ಒಟ್ಟಿಗೆ ಇರುವ ಫೋಟೊಗಳು ವೈರಲ್ ಆಗಿತ್ತು. ಅಲ್ಲಿಂದ ಇವರಿಬ್ಬರ ಲವ್ ಸ್ಟೋರಿ ಬಗ್ಗೆ ಸುದ್ದಿಯಾಗುತ್ತಲೇ ಇತ್ತು. ನಿರೀಕ್ಷೆ ಮಾಡಿದಂತೆ ನಾಗ ಚೈತನ್ಯ ಹಾಗೂ ಶೋಭಿತಾ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಮದುವೆ ಬಗ್ಗೆ ಇನ್ನೂ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ.

ಟಾಲಿವುಡ್ ಮೂಲಗಳ ಪ್ರಕಾರ, ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಇಬ್ಬರೂ ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ವಿವಾಹಕ್ಕೆ ಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಈ ಜೋಡಿ ಇದೇ ಡಿಸೆಂಬರ್ ತಿಂಗಳಲ್ಲಿ ವಿವಾಹವಾಗುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಈ ಜೋಡಿ ಇನ್ನೂ ತಮ್ಮ ಮದುವೆ ಬಗ್ಗೆ ಚಿಕ್ಕದೊಂದು ಮಾಹಿತಿಯನ್ನೂ ಹೊರ ಹಾಕಿಲ್ಲ. ಈ ಮಧ್ಯೆ ಸಹೋದರಿಯ ಫೋಟೊವನ್ನು ಹಂಚಿಕೊಂಡು ಮದುವೆ ಮೂಡ್‌ನಲ್ಲಿ ಇರುವ ಸುಳಿವು ನೀಡಿದಂತೆ.

ಶೋಭಿತಾ ಧೂಳಿಪಾಲ ಸಹೋದರಿಯ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ನಾಗಚೈತನ್ಯರನ್ನು ಮುಂದಿಟ್ಟುಕೊಂಡು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. " ಓಹೋ ಸಹೋದರಿಯ ಹೆಸರು ಕೂಡ ಸಮಂತನಾ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರು. ಮತ್ತೊಬ್ಬರು " ನಾಗ ಚೈತನ್ಯ ಒಂದಂತೂ ಅರ್ಥ ಮಾಡಿಕೊ. ನೀನು ಸಮಂತಾಳಿಂದ ದೂರ ಓಡಿ ಹೋಗಲು ಪ್ರಯತ್ನ ಮಾಡಿತ್ತಿರುವೆ. ಆದರೆ, ಆಕೆ ಎಲ್ಲಾ ಕಡೆನೂ ಇದ್ದಾರೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ನೆಟ್ಟಿಗರ ಕಾಮೆಂಟ್ ಕೂಡ ಅಷ್ಟೇ ನಿಜ. ಸಮಂತಾಳಿಂದ ನಾಗಚೈತನ್ಯ ದೂರವೇ ಹೋಗಿದ್ದರೂ ಭಾವಿ ಪತಿಯ ಸಹೋದರಿಯ ರೂಪದಲ್ಲಿ ಸಮಂತಾ ಅನ್ನೋ ಹೆಸರು ಅವರನ್ನು ಸೇರಿಕೊಂಡಿದೆ. ಏನೇ ಇದ್ದರೂ, ನಾಗ ಚೈತನ್ಯ ತಮ್ಮ ಎರಡನೇ ಮದುವೆಗೆ ಹೇಗೆಲ್ಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ ಅನ್ನೋದು ಸದ್ಯಕ್ಕಂತೂ ಸೀಕ್ರೆಟ್. ಆದರೆ, ಮದುವೆ ತಯಾರಿಯಂತೂ ಭರ್ಜರಿಯಾಗಿ ನಡೆಯುತ್ತಿದೆ.

More from Filmibeat

English summary
Telugu actress Sobhita Dhulipala traditional look in Samantha mehndi function here is netizens reaction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X