ರಾಮ್ ಗೋಪಾಲ್ ವರ್ಮಾ ಕ್ಯಾಂಪ್ ಗೆ ಬಂದ ಹೊಸ ಹುಡುಗಿ ; ಯಾರು ಈಕೆ.. ಹಿನ್ನೆಲೆ ಏನು ಗೊತ್ತಾ..?

ರಾಮ್ ಗೋಪಾಲ್ ವರ್ಮಾ ಅವರಲ್ಲಿರುವ ಸಮ್ಮೋಹಕ ಶಕ್ತಿ ಬಗ್ಗೆ ಸಂಶೋಧನೆಯನ್ನ ಮಾಡಬೇಕು ಎಂಬ ಒತ್ತಾಯವನ್ನ ಅನೇಕ ಪಡ್ಡೆ ಹುಡುಗರು ಅನೇಕ ದಿನಗಳಿಂದ ಮಾಡುತ್ತಿದ್ದಾರೆ. ಯಾಕೆಂದರೆ ರಾಮ್ ಗೋಪಾಲ್ ವರ್ಮಾ ಎಲ್ಲಿಯೇ ಇರಲಿ ಅಲ್ಲಿ ಹುಡುಗಿಯರ ದಂಡು ಇದ್ದೇ ಇರುತ್ತೆ. ನಿರೂಪಕಿಯರಿಂದ ಹಿಡಿದು ನಾಯಕಿಯರವರೆಗೆ, ರಾಮ್ ಗೋಪಾಲ್ ವರ್ಮಾ ಅವರ ಮಬ್ಬುಗತ್ತಲಿನ ಪಾರ್ಟಿಯಲ್ಲಿ ಎಲ್ಲರೂ ಹಾಜರಿಯನ್ನ ಹಾಕುತ್ತಾರೆ. ಈಗ ಈ ಮೋಜಿನ ಕೂಟಕ್ಕೆ ಸುಪ್ರಿತಾ ಸೇರಿಕೊಂಡಿದ್ದಾರೆ.

ಹೌದು, ಸುಪ್ರಿತಾ.. ರಾಮ್ ಗೋಪಾಲ್ ವರ್ಮಾ ಕ್ಯಾಂಪ್ ಗೆ ಹೊಸದಾಗಿ ಸೇರ್ಪಡೆಯಾದ ಚೆಲುವೆ. ತೆಲುಗು ಚಿತ್ರರಂಗದ ಪೋಷಕ ನಟಿ ಸುರೇಖಾ ವಾಣಿಯ ಏಕಮೇವ ಸುಪುತ್ರಿ ಈಕೆ. ಮೊನ್ನೆಯಷ್ಟೇ ನಮ್ಮ ತಾಯಿಯನ್ನ ಮದುವೆಯಾಗಲು ಹುಡುಗರು ಒಪ್ಪಲ್ಲ. ಈ ಕಾರಣಕ್ಕೆ ಅಂಕಲ್ ಆಗಿದ್ದರೂ ಸರಿ. ಅಮ್ಮನನ್ನ ಚೆನ್ನಾಗಿ ನೋಡಿಕೊಳ್ಳುವವರು ಸಿಕ್ಕರೆ ಮದುವೆ ಮಾಡಿಸಲು ನನಗೆ ಯಾವ ಅಭ್ಯಂತರವಿಲ್ಲ ಎಂದವರು ಬೇರೆ ಯಾರು ಅಲ್ಲ ಬದಲಿಗೆ ಇದೇ ಸುಪ್ರಿತಾ.

Telugu Actress Surekha Vani Daughter Supritha Spotted With RGV At Party

ಇಂಥ ವಿಶಾಲ ಮನೋಭಾವದ ಸುಪ್ರಿತಾ, ಇದೀಗ ರಾಮ್ ಗೋಪಾಲ್ ವರ್ಮಾ ಪಕ್ಕ ನಿಂತುಕೊಂಡಿದ್ದಾರೆ. ನಗೆ ಬೀರಿದ್ದಾರೆ. ಸಹಜವಾಗಿ ಫೋಟೋ ಎಲ್ಲೆಡೆ ವೈರಲ್ ಆಗಿದೆ. ವರ್ಮಾ ಜೊತೆ ಸುಪ್ರಿತಾ ಕಾಣಿಸಿಕೊಳ್ಳುವುದರ ಹಿಂದೆ ಇರುವ ಮರ್ಮ ಏನು ಅನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಮುಂದಿನ ಚಿತ್ರಕ್ಕೆ ಸುಪ್ರಿತಾ ನಾಯಕಿಯಾಗ್ತಾರಾ ಅನ್ನುವ ಅನುಮಾನ ಕೂಡ ಅನೇಕರನ್ನ ಈಗ ಕಾಡುತ್ತಿದೆ. ಯಾಕೆಂದರೆ ಚಿತ್ರರಂಗಕ್ಕೆ ಬರಲು ಸುಪ್ರಿತಾ ತುದಿಗಾಲಿನಲ್ಲಿ ನಿಂತಿದ್ದಾರೆ. ತನ್ನ ಮುದ್ದಿನ ಮಗಳಿಗೆ ನಾಯಕಿಯ ಪಟ್ಟವನ್ನ ಕಟ್ಟಲು ಸುರೇಖಾ ವಾಣಿ ಕೂಡ ಕಾತುರರಾಗಿದ್ದಾರೆ

ಆಂಧ್ರ ಮನಸನ್ನ ಆಗಲೇ ಗೆದ್ದಿರುವ ಸುಪ್ರಿತಾ..!

ಕಲೆ ಸುಪ್ರಿತಾ ರಕ್ತದಲ್ಲಿಯೇ ಇದೆ. 2019ರಲ್ಲಿ 'ಮನಿ ಮೈಂಡೆಡ್ ಗರ್ಲ್ ಫ್ರೆಂಡ್' ಎಂಬ ಕಿರುಚಿತ್ರವನ್ನ ನಿರ್ದೇಶಿಸಿದವರು ಇವರು. ಆ ನಂತರ 'ವೆಲ್ಲಿಪೋ' ಮತ್ತು 'ಗಾಯತ್ರಿ ಪೋತೆ ಪೋವೆ' ಎಂಬ ಆಲ್ಬಂಗಳಲ್ಲಿಯೂ ಕೂಡ ಕಾಣಿಸಿಕೊಂಡಿರುವ ಸುಪ್ರಿತಾ, ಯುಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ವ್ಯಕ್ತಿಯೂ ಹೌದು. 1.72 ಲಕ್ಷ ಜನ ಇವರನ್ನ ಇಲ್ಲಿ ಹಿಂಬಾಲಿಸುತ್ತಿದ್ದಾರೆ.

ಹೀಗೆ ಬಣ್ಣದ ಸೆಳೆತಕ್ಕೆ ಮೊದಲಿಂದ ಒಳಗಾಗಿರುವ ಸುಪ್ರಿತಾ ಅವರನ್ನ ಚಿತ್ರರಂಗಕ್ಕೆ ಕರೆತರುವ ಆಲೋಚನೆ ಅವರ ತಾಯಿ ಸುರೇಖಾ ಅವರಿಗೆ ಇದೆ. ಅಮರ್‌ದೀಪ್ ಚೌಧರಿ ನಾಯಕನಾಗಿ ನಟಿಸುತ್ತಿರುವ ಚಿತ್ರದ ಮೂಲಕ ಸುಪ್ರಿತಾ ನಾಯಕಿಯಾಗಿ ಪರಿಚಯವಾಗಲಿದ್ದಾರೆ ಅನ್ನುವ ಮಾತು ಕೂಡ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದೆಲ್ಲದರ ನಡುವೆ ಸುಪ್ರಿತಾ ಈಗ ರಾಮ್ ಗೋಪಾಲ್ ವರ್ಮಾ ಜೊತೆ ಕಾಣಿಸಿಕೊಂಡಿದ್ದಾರೆ.

ಇನ್ನೂ ನಿಮಗೆ ಗೊತ್ತು.. ಆರ್.ಜಿ.ವಿ ಸಹವಾಸ ಮಾಡಿದ ಅನೇಕ ಬೆಡಗಿಯರು, ನಾಯಕಿಯ ಪಟ್ಟವನ್ನ ಅಲಂಕರಿಸಿದ್ದಾರೆ. ಆ ಪೈಕಿ ಕೆಲವರು ಗೆದ್ದಿದ್ದಾರೆ. ಹೀಗಾಗಿಯೇ ಸುಪ್ರಿತಾ ಅಭಿನಯದ ಚೊಚ್ಚಲ ಚಿತ್ರವನ್ನ ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ಗುಲ್ಲಾಗಿದೆ. ನಿಜಕ್ಕೂ ರಾಮ್ ಗೋಪಾಲ್ ವರ್ಮಾ ಸುಪ್ರಿತಾ ಅವರನ್ನ ಲಾಂಚ್ ಮಾಡ್ತಾರಾ ..? ಇನ್ನೂ ಸ್ವಲ್ಪ ದಿನ ಸ್ಪಷ್ಟ ಉತ್ತರ ಸಿಗಲಿದೆ

More from Filmibeat

English summary
Supritha, Daughter Of Telugu Actress Surekha Vani Recently Spotted With Ram Gopal Varma At Party
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X