ತಾಯಿಗೆ 2ನೇ ಮದ್ವೆ ಮಾಡಿಸ್ತೀನಿ ಎಂದ ಮಗಳು: ಬಾಯ್‌ಫ್ರೆಂಡ್ ಬೇಕು ಎನ್ನುತ್ತಿರುವ ಸುರೇಖಾ ವಾಣಿ!
ತೆಲುಗಿನ ಪೋಷಕ ನಟಿ ಸುರೇಖಾ ವಾಣಿ ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಂದ ಸದಾ ಸುದ್ದಿಯಲ್ಲಿ ಇರ್ತಾರೆ. 3 ವರ್ಷಗಳ ಹಿಂದೆ ಪತಿ ನಿಧನರಾದ ಬಳಿಕ ಮಗಳು ಸುಪ್ರೀತಾ ಜೊತೆ ಸುರೇಖಾ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ತಾಯಿಗೆ ಎರಡನೇ ಮದುವೆ ಮಾಡುವ ಆಲೋಚನೆ ಇರುವುದಾಗಿ ಸುಪ್ರೀತಾ ಹೇಳಿದ್ದು ಹಾಟ್ ಟಾಪಿಕ್ ಆಗಿತ್ತು. ಇದೀಗ ಸ್ವತಃ ಸುರೇಖಾ ತಮ್ಮ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ಮಗಳು ಕೂಡ ತಾಯಿ ಹೇಳಿದಂತೆ ಆಗಲಿ ಎಂದಿದ್ದಾರೆ. ಸುರೇಖಾ ವಾಣಿ ನನಗೊಬ್ಬ ಬಾಯ್‌ಫ್ರೆಂಡ್ ಬೇಕು ಎಂದು ಹಾಡು ಹಾಡುತ್ತಿದ್ದಾರೆ.
ಮಗಳ ಜೊತೆ ಒಂಟಿಯಾಗಿ ಜೀವನ ನಡೆಸುತ್ತಿರುವ ತೆಲುಗು ಸುರೇಖಾಗೆ ಎರಡನೇ ಮದುವೆ ಬಗ್ಗೆ ಪದೇ ಪದೇ ಪ್ರಶ್ನೆ ಕೇಳಿ ಬರುತ್ತಿದೆ. ಆದರೆ ಮತ್ತೆ ಮದುವೆಯಾಗುವ ಯೋಚನೆ ಇಲ್ಲ ಎಂದು ಸುರೇಖಾ ಹೇಳುತ್ತಾ ಬರುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮದುವೆ ಬಗ್ಗೆ ನಟಿ ಇಂಟ್ರೆಸ್ಟಿಂಗ್ ಕಮೆಂಟ್ಸ್ ಮಾಡಿದ್ದಾರೆ. ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುರೇಖಾ "ನನಗೆ ಎರಡನೇ ಮದುವೆಯಲ್ಲಿ ಹೆಚ್ಚು ಆಸಕ್ತಿ ಇಲ್ಲ. ಆದರೆ ನನ್ನ ಮಗಳು ಸುಪ್ರೀತಾ ಮತ್ತೆ ಮಾಡಿಕೊಳ್ಳುವಂತೆ ಹೇಳುತ್ತಿದ್ದಾಳೆ. ಈಗ ಮದುವೆ ಆಗುವ ಯೋಚನೆ ಇಲ್ಲ, ಭವಿಷ್ಯದಲ್ಲಿ ಮದುವೆ ಮಾಡಿಕೊಳ್ಳುತ್ತೀನೋ ಗೊತ್ತಿಲ್ಲ" ಎಂದಿದ್ದಾರೆ.
ನೀವು ಇಷ್ಟಪಡುವ ವ್ಯಕ್ತಿ ಸಿಕ್ಕಿದ್ರಾ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ನಟಿ ಸುರೇಖಾ ವಾಣಿ, "ಸದ್ಯಕ್ಕೆ ಯಾರೂ ಇಲ್ಲ" ಎಂದು ಉತ್ತರಿಸಿದ್ದಾರೆ. ಆದರೆ "ತನಗೆ ಒಬ್ಬ ಬಾಯ್ ಫ್ರೆಂಡ್ ಬೇಕು ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. "ತನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವವನು ಬೇಕು. ಒಳ್ಳೆಯ ಎತ್ತರ ಹಾಗೂ ಒಳ್ಳೆ ಪರ್ಸನಾಲಿಟಿ ವ್ಯಕ್ತಿ ನನಗೆ ಬಾಯ್ ಫ್ರೆಂಡ್ ಆಗಿಬೇಕು. ಕೊಂಚ ಗಡ್ಡವ ಇರಬೇಕು. ಆತನ ಬಳಿ ತುಂಬಾ ಹಣ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಅಂತಹ ವ್ಯಕ್ತಿ ಸಿಕ್ಕರೆ ನನಗೆ ಇಷ್ಟವಾದರೆ ಮದುವೆಯಾಗುತ್ತೇನೆ" ಎಂದು ಹೇಳಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ತಾಯಿ ಬಗ್ಗೆ ಸುಪ್ರೀತಾ ಭಾವುಕವಾಗಿ ಮಾತನಾಡಿದ್ದರು. "ನನ್ನ ತಾಯಿ ನಮ್ಮ ಕುಟುಂಬದ ಬೆನ್ನೆಲುಬು. ಚಿಕ್ಕಂದಿನಿಂದಲೂ ಕೂಡ ಅಪ್ಪ ಇದ್ದರೂ ಅಮ್ ಎಲ್ಲಾ ಜವಾಬ್ದಾರಿ ತೆಗೆದುಕೊಂಡಿದ್ದರು. ಕೆಲವೊಮ್ಮೆ ಅಪ್ಪನಿಗೆ ಕೆಲಸ ಇಲ್ಲದೇ ಇದ್ದಾಗ ಅಮ್ಮ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ ಸಂಸಾರವನ್ನು ನೋಡಿಕೊಳ್ಳುತ್ತಿದ್ದರು. ಅಮ್ಮನಿಂದಲೇ ನಾವು ಈ ರೀತಿ ಇದ್ದೀವಿ. ಅಮ್ಮ ನಮ್ಮ ಬಗ್ಗೆಯೇ ಯೋಚಿಸುತ್ತಿರುತ್ತಾಳೆ. ಅಪ್ಪನ ಸಾವಿನ ನಂತರ ಅನೇಕರು ಅಮ್ಮನ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡಿದರು. ಅಮ್ಮ ಎಷ್ಟು ದುಃಖಪಟ್ಟಿದ್ದಾರೆ ಎನ್ನುವುದು ನನಗೆ ಗೊತ್ತು. ಅದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಂತಹ ಕಾಮೆಂಟ್ಸ್ ನೋಡೋದೇ ಇಲ್ಲ. ಅಮ್ಮನಿಗೂ ನೋಡಬೇಡ ಎಂದು ಹೇಳ್ತೀನಿ. ಅಪ್ಪದ ಅಗಲಿಕೆಯ ನೋವಿನಿಂದ ಹೊರಬರಲು ಅಮ್ಮನನ್ನು ಪಾರ್ಟಿಗೆ ಕರೆದುಕೊಂಡು ಹೋದರೆ ಅದಕ್ಕೂ ಏನೇನೋ ಕಾಮೆಂಟ್ ಮಾಡಿದರು. ಅಮ್ಮ ಅವರನ್ನು ಮದುವೆ ಆಗುತ್ತಾರೆ. ಇವರನ್ನು ಮದುವೆ ಆಗುತ್ತಾರೆ ಎಂದರು. ಇದರಿಂದ ನಮಗೆ ತುಂಬಾ ನೋವಾಗಿದೆ'' ಎಂದು ಸುಪ್ರೀತಾ ಹೇಳಿಕೊಂಡಿದ್ದರು.

ಸದ್ಯ ಸುರೇಖಾ ವಾಣಿ ಬಾಯ್‌ಫ್ರೆಂಡ್ ಬೇಕು ಎಂದು ಹೇಳಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಇದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ. 'ಮದುವೆ ವಯಸ್ಸಿನ ಮಗಳನ್ನು ಇಟ್ಟುಕೊಂಡು ಇದೆಲ್ಲಾ ಬೇಕಾ?' ಅಂದರೆ ಮತ್ತೆ ಕೆಲವರು 'ಈ ವಯಸ್ಸಿನಲ್ಲಿ ನಿಮ್ಮ ಮಾತುಗಳಿಗೂ, ನೀವು ನಡೆದುಕೊಳ್ಳುತ್ತಿರುವ ರೀತಿಗೂ ಏನಾದರೂ ಸಂಬಂಧ ಇದ್ಯಾ ?' ಎಂದು ಕೇಳುತ್ತಿದ್ದಾರೆ. ಸುರೇಖಾ ವಾಣಿ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಮಗಳ ಜೊತೆ ಮಾಡ್ರನ್ ಡ್ರೆಸ್‌ಗಳಲ್ಲಿ ಫೋಟೊ, ವಿಡಿಯೋ ಪೋಸ್ಟ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಸುರೇಖಾ ವಾಣಿ ತೆಲುಗಿನ 'ಶ್ರೀಮಂತುಡು', 'ಪವರ್', 'ನಾಯಕ್', 'ಬಾದ್‌ಷಾ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications