ಹುಡುಗ್ರು ಸಿದ್ಧರಿಲ್ಲ, ಅಂಕಲ್ಸ್ ಆದ್ರು ಓಕೆ, ನಮ್ಮ ತಾಯಿಗೆ 2ನೇ ಮದುವೆ ಮಾಡ್ಬೇಕು

ತೆಲುಗು ಪೋಷಕ ನಟಿ ಸುರೇಖಾ ವಾಣಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ಮಗಳು ಸುಪ್ರೀತಾ ಜೊತೆ ಇನ್‌ಸ್ಟಾ, ಯೂಟ್ಯೂಬ್‌ನಲ್ಲಿ ವಾಲ್ಗ್ ವೀಡಿಯೋಗಳನ್ನು ಮಾಡುತ್ತಿರುತ್ತಾರೆ. ಆಗಾಗ್ಗೆ ಟ್ರಿಪ್, ಪಾರ್ಟಿ ಅಂತ ಎಂಜಾಯ್ ಮಾಡುತ್ತಿರುತ್ತಾರೆ. ಆ ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

ತಾಯಿಯಾಗಿ, ಅಕ್ಕ ಆಗಿ, ಅತ್ತಿಗೆಯಾಗಿ ಹೀಗೆ ಹಲವು ಪಾತ್ರಗಳಲ್ಲಿ ಸುರೇಖಾ ವಾಣಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇತ್ತೀಚೆನ ವರ್ಷಗಳಲ್ಲಿ ಆಕೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಇನ್ನು ವಯಸ್ಸಾದಂತೆ ಮತ್ತಷ್ಟು ಯಂಗ್ ಆಗಿ ತಮ್ಮ ಸೌಂದರ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ತಾಯಿ ಮಗಳನ್ನು ನೋಡಿದರೆ ಕೆಲವರು ಅಕ್ಕ- ತಂಗಿನಾ ಎಂದು ಕೇಳುವಂತಿದ್ದಾರೆ.

Telugu Actress Surekha vani s daughter Supritha s comments on her mother second marriage goes viral

ಕಿರುತೆರೆಯಲ್ಲಿ ಗುರ್ತಿಸಿಕೊಂಡಿದ್ದ ನಿರ್ದೇಶಕ ಸುರೇಶ್ ತೇಜಾ ಜೊತೆ ಸುರೇಖಾ ವಾಣಿ ಮದುವೆ ಆಗಿತ್ತು. ದಂಪತಿಗೆ ಮಗಳು ಇದ್ದಾಳೆ. ಆದರೆ 2019ರಲ್ಲಿ ದೀರ್ಘಕಾಲಿಕ ಅನಾರೋಗ್ಯ ಸಮಸ್ಯೆಯಿಂದ ಸುರೇಶ್ ತೇಜಾ ಕೊನೆಯುಸಿರೆಳೆದರು. ಬಳಿಕ ತಾಯಿ- ಮಗಳು ಜೀವನ ಸಾಗಿಸುತ್ತಿದ್ದಾರೆ. ಸಾಕಷ್ಟು ಬಾರಿ ನಮ್ಮ ತಾಯಿಗೆ ಮತ್ತೊಂದು ಮದುವೆ ಮಾಡಬೇಕು ಎಂದು ಸುಪ್ರೀತಾ ಹೇಳುತ್ತಿರುತ್ತಾರೆ.

ಸದ್ಯ ಸುಪ್ರೀತಾ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ತಾಯಿಗೆ ಮತ್ತೊಂದು ಮದುವೆ ಮಾಡುವ ಬಗ್ಗೆ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ಈಗ ಹುಡುಗರು ನಮ್ಮ ತಾಯಿಯನ್ನು ಮದುವೆ ಆಗಲು ಒಪ್ಪಲ್ಲ, ಅಂಕಲ್ ಆಗಿದ್ದರೂ ಸರಿ. ಅವರನ್ನು ಚೆನ್ನಾಗಿ ನೋಡಿಕೊಳ್ಳುವವರು ಸಿಕ್ಕರೆ ಮದುವೆ ಮಾಡಿಸಲು ಅಭ್ಯಂತರವಿಲ್ಲ ಎಂದಿದ್ದಾರೆ.

Telugu Actress Surekha vani s daughter Supritha s comments on her mother second marriage goes viral

ನಿಮ್ಮ ತಾಯಿಯ 2ನೇ ಮದುವೆಯನ್ನು ಯಾವಾಗ ನಿರೀಕ್ಷಿಸಬಹುದು ಎನ್ನುವ ಪ್ರಶ್ನೆಗೆ ಸುಪ್ರೀತಾ, "ಆಕೆ ಯಾವಾಗ ಓಕೆ ಅಂದ್ರೆ ಆಗ ಮದುವೆ. ಹುಡುಗರು ಸಿದ್ಧರಿಲ್ಲದಿದ್ದರೆ ಅಂಕಲ್ಸ್, ಆಗಿದ್ದರೂ ಪರವಾಗಿಲ್ಲ. ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆರ್ಥಿಕವಾಗಿ ಸಬಲರಾಗಿರಬೇಕು, ಟಾಕ್ಸಿಕ್ ಇರಬಾರದು. ನಮ್ಮ ತಾಯಿಯನ್ನು ಚೆನ್ನಾಗಿ ನೋಡುಕೊಳ್ಳುವವರಾದರೆ ನನಗೆ ಸಂತೋಷ" ಎಂದು ಸುಪ್ರೀತಾ ಹೇಳಿದ್ದಾರೆ.

ಇನ್ನು ತಮ್ಮ ಮದುವೆ ಬಗ್ಗೆಯೂ ಸುಪ್ರೀತಾ ಮಾತನಾಡಿದ್ದಾರೆ. ಲವ್ ಮ್ಯಾರೇಜ್ ಆಗಿದ್ದರೂ ಆರೇಂಜ್ ಮ್ಯಾರೇಜ್ ಆದರೂ ಅಮ್ಮ ಹೇಳಿದವರನ್ನು ಮದುವೆ ಆಗುತ್ತೇನೆ, ಆದರೆ ಅದಕ್ಕೆ ಇನ್ನು ಬಹಳ ಸಮಯ ಇದೆ ನೋಡೋಣ ಎಂದಿದ್ದಾರೆ. ಇನ್ನು ವಿಜಯ್ ದೇವರಕೊಂಡ ಅಂದ್ರೆ ಬಹಳ ಇಷ್ಟ. ಆತನೊಟ್ಟಿಗೆ ನಟಿಸುವ ಆಸೆ ಇದೆ ಎಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಸುಪ್ರೀತಾ ಅದರಿಂದ ಬರುವ ಸಾಕಷ್ಟು ಹಣವನ್ನು ಪ್ರವಾಸಕ್ಕಾಗಿ ಬಳಸುತ್ತಾರಂತೆ. ಇನ್ನು ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಅದನ್ನು ನೋಡಿದಾಗ ಬೇಸರವಾಗುತ್ತದೆ. ತಂದೆ ತೀರಿಕೊಂಡ ಸಮಯದಲ್ಲಿ ನಾನು ಹೊರಗೆ ಮಾತ್ರೆ ತರಲು ಹೋದರೆ ಅದರ ಬಗ್ಗೆಯೂ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ತಂದೆ ತೀರಿಕೊಂಡ ನೋವಿಲ್ಲ, ಹೇಗೆ ಸುತ್ತಾಡುತ್ತಿದ್ದಾರೆ ಎಂದಿದ್ದರು. ನಮ್ಮ ನೋವು ನಮಗೆ ಗೊತ್ತು.

ನಾವು ಆಗಾಗ್ಗೆ ಟ್ರಿಪ್ ಹೋಗುವುದರ ಬಗ್ಗೆಯೂ ಏನೇನೊ ಕಾಮೆಂಟ್ ಮಾಡುತ್ತಾರೆ. ತಾಯಿ ಮಗಳಿಗೆ ಹಣ ಎಲ್ಲಿಂದ ಬರುತ್ತದೆ. ಹೇಗೆ ಸಂಪಾದಿಸುತ್ತಾರೆ. ಯಾವಾಗಲೂ ಟ್ರಿಪ್ ಅಂತ ಊರೂರು ಸುತ್ತುತ್ತಾರೆ ಹೀಗೆ ಏನೇನೊ ಕಾಮೆಂಟ್ ಮಾಡುತ್ತಾರೆ. ನಮ್ಮ ಬಳಿ ಹಣ ಇಲ್ಲ ಅಂತ ಯಾರು ಹೇಗಿದ್ದು? ಇರುವ ಹಣದಲ್ಲಿ, ಗಳಿಸಿದ ಹಣದಲ್ಲಿ ಪ್ರವಾಸಕ್ಕೆ ಹೋಗುತ್ತೇವೆ. ಅದರಲ್ಲಿ ತಪ್ಪೇನು? ಸುಪ್ರೀತಾ ಕೇಳಿದ್ದಾರೆ.

More from Filmibeat

English summary
Supritha interesting comments on her mother Actress Surekha vani's second marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X