ಆ 'ಕ್ಯಾಮರಾಮ್ಯಾನ್' ಪ್ರೀತ್ಸೆ ಅಂತ ಹಿಂದೆ ಬಿದ್ದು ಕೊಡಬಾರದ 'ಹಿಂಸೆ' ಕೊಟ್ಟ ಎಂದ ಖ್ಯಾತ ನಿರೂಪಕಿ..!

ಸಿನಿಮಾ ಜಗತ್ತಿನಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಟಿಯರು ಬಾಯಿ ಬಿಟ್ಟಿದ್ದಾರೆ. ಸಾಕಷ್ಟು ಸಹ ನಟರು, ನಿರ್ಮಾಪಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಬಾಳದಂತೆ ಹರಾಜು ಹಾಕಿದ್ದಾರೆ. ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಈ ಸಾಲಿಗೆ ಈಗ ತೆಲುಗು ಚಿತ್ರರಂಗದ ನಟಿ ಹಾಗೂ ಸ್ಟಾರ್ ನಿರೂಪಕಿ ಶ್ಯಾಮಲಾ ಕೂಡ ಸೇರಿಕೊಂಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಶ್ಯಾಮಲಾ, ತಮ್ಮ ಧಾರಾವಾಹಿಯ ದಿನಗಳನ್ನ ನೆನೆದಿದ್ದಾರೆ. ಧಾರಾವಾಹಿಯ ಚಿತ್ರೀಕರಣದ ನೆಪದಲ್ಲಿಅನೇಕರು ನನ್ನ ಜೊತೆ ಮಾತನಾಡುವ ಪ್ರಯತ್ನ ಪಟ್ಟಿದ್ದರು, ನನ್ನ ಹಿಂದೆ ದುಂಬಾಲು ಬಿದ್ದಿದ್ದರು ಎಂದಿದ್ದಾರೆ ಶ್ಯಾಮಲಾ. ಇನ್ನೂ ಇದೇ ಸಮಯದಲ್ಲಿ ಪ್ರೀತಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬ ನನಗೆ ಕೊಡಬಾರದ ಮಾನಸಿಕ ಹಿಂಸೆಯನ್ನೆಲ್ಲ ಕೊಟ್ಟಿದ್ದ ಎಂದು ಕಣ್ಣೀರಿಟ್ಟಿದ್ದಾರೆ ಶ್ಯಾಮಲಾ.

Telugu Anchor Shyamala Talks About Her Casting Couch Experience

ಪ್ರೀತಿಸುವಂತೆ ಕ್ಯಾಮರಾ ಮ್ಯಾನ್ ಒಬ್ಬ ಪೀಡಿಸುತ್ತಿದ್ದ ಎಂದಿರುವ ಶ್ಯಾಮಲಾ, ಆತ ಹಗಲು ರಾತ್ರಿ ಅನ್ನದೇ ನಿರಂತರವಾಗಿ ಫೋನ್ ಮಾಡುತ್ತಿದ್ದ ಎಂದಿದ್ದಾರೆ. ಹುಚ್ಚು ಹುಚ್ಚಾಗಿ ಮಾತನಾಡಿ ನನಗೆ ಬೆದರಿಕೆ ಕರೆಯನ್ನೂ ಹಾಕುತ್ತಿದ್ದ ಅಂದಿದ್ದಾರೆ.

ಇನ್ನೂ.. ಆ ಕ್ಯಾಮರಾ ಮ್ಯಾನ್ ಕಾಟಕ್ಕೆ ಬೇಸತ್ತು ಧಾರಾವಾಹಿಯಲ್ಲಿ ನಟಿಸುವುದನ್ನೇ ಬಿಡಬೇಕು ಎಂದುಕೊಂಡಿದ್ದೆ ಎಂದು ಹೇಳಿರುವ ಶ್ಯಾಮಲಾ ನಿನ್ನ ಮಗಳಿಗೆ ಹೇಳು.. ಅವಳಿಗೆ ಅರ್ಥವಾಗುತ್ತಿಲ್ಲ. ನಿನ್ನ ಮಗಳಿಗಾಗಿ ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ನನ್ನ ಅಮ್ಮನಿಗೂ ಆ ವ್ಯಕ್ತಿ ಹಿಂಸೆ ಕೊಡಲು ಆರಂಭ ಮಾಡಿದ್ದ ಅಂದಿದ್ದಾರೆ. ಇನ್ನೂ ಅವನಿಂದ ನನಗೆ ಏನಾದರೂ ತೊಂದರೆಯಾಗಬಹುದೆಂದು ನನ್ನ ತಾಯಿ ಆ ಸಮಯದಲ್ಲಿ ತುಂಬಾನೇ ಹೆದರುತ್ತಿದ್ದರು ಎಂದು ತಮ್ಮ ಮನದ ನೋವನ್ನ ಹಂಚಿಕೊಂಡಿದ್ದಾರೆ ಶ್ಯಾಮಲಾ

Telugu Anchor Shyamala Talks About Her Casting Couch Experience

ಬಹುಶ ಇದೆಲ್ಲದರಿಂದ ಬೇಸತ್ತ ಶ್ಯಾಮಲಾ, ಸದ್ಯಕ್ಕೆ ಧಾರಾವಾಹಿಗಳಿಂದ ಅಂತರವನ್ನ ಕಾಪಾಡಿಕೊಂಡಿದ್ದಾರೆ. ನಿರೂಪಕಿಯಾಗಿ ಆಂಧ್ರದ ಮನಸನ್ನ ಗೆದ್ದು, ಮನೆ ಮನೆಗಳಿಗೆ ತಲುಪುತ್ತಿದ್ದಾರೆ. ಅನೇಕ ಸಿನಿಮಾ ಕಾರ್ಯಕ್ರಮಗಳನ್ನ ನಿರೂಪಣೆ ಮಾಡಿರುವ ಹೆಗ್ಗಳಿಕೆ ಹೊಂದಿರುವ ಶ್ಯಾಮಲಾ ದೊಡ್ಡ ದೊಡ್ಡ ಸ್ಟಾರ್ ಗಳ ಸಂದರ್ಶನವನ್ನೂ ಕೂಡ ಮಾಡಿದ್ದಾರೆ. ನಿರೂಪಣೆ ಜೊತೆ ಸಿನಿಮಾಗಳಲ್ಲಿಯೂ ಗುರುತಿಸಿಕೊಳ್ಳುವ ಆಸೆಯನ್ನ ಹೊಂದಿರುವ ಶ್ಯಾಮಲಾ, ಸಾಯಿ ಧರಮ್ ತೇಜ್ ಅಭಿನಯದ 'ವಿರೂಪಾಕ್ಷ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನ ನಿರ್ವಹಿಸಿ ಸೈ ಅನಿಸಿಕೊಂಡಿದ್ದರು.

Telugu Anchor Shyamala Talks About Her Casting Couch Experience

ಒಟ್ಟಿನಲ್ಲಿ ಚಿತ್ರರಂಗದಲ್ಲಿ ಅನೇಕ ನಟಿಯರು ಕೆಟ್ಟ ಅನುಭವಗಳಿಂದ, ವಕ್ರ ದೃಷ್ಟಿಗಳಿಂದ ಒಂದಿಲ್ಲೊಂದು ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಕೆಲವರು ಅನಿವಾರ್ಯ ಪರಿಸ್ಥಿತಿಗೆ ಶರಣಾದರೆ, ಇನ್ನೂ ಕೆಲವರು ಈ ಬಣ್ಣದ ಲೋಕದ ಸಹವಾಸವೇ ಬೇಡ ಎಂದು ಕೈ ಮುಗಿದು ಬಂದು ಬಿಡ್ತಾರೆ. ತಮ್ಮ ಬದುಕನ್ನ ಬೇರೆ ಕ್ಷೇತ್ರದಲ್ಲಿ ಕಟ್ಟಿಕೊಳ್ಳುವ ಪ್ರಯತ್ನ ಮಾಡ್ತಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಶ್ಯಾಮಲಾ

More from Filmibeat

English summary
Popular Telugu Anchor And Television Actress Shyamala Talks About Her Casting Couch Experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X