ತೆಲುಗು- ತಮಿಳು ಪ್ರೇಕ್ಷಕರು 'ಯುಐ' ಪ್ರಪಂಚ ನೋಡಿ ಏನಂದ್ರು?
ಕೊನೆಗೂ 'ಯುಐ' ಸಿನಿಮಾ ಬಿಡುಗಡೆಯಾಗಿದೆ. ಉಪೇಂದ್ರ ಅಭಿಮಾನಿಗಳಿಗೆ ಸಿನಿಮಾ ಬಹಳ ಇಷ್ಟವಾಗಿದೆ. ಒಂದಷ್ಟು ಸಿನಿಮಾ ಓಕೆ ಓಕೆ ಎಂದರೆ ಇನ್ನು ಕೆಲವರು ಚೆನ್ನಾಗಿಲ್ಲ ಎನ್ನುತ್ತಾರೆ. ಒಟ್ಟಾರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಗುತ್ತಿದೆ. ಉಪೇಂದ್ರ ಯಾವ ಅರ್ಥದಲ್ಲಿ ಚಿತ್ರದಲ್ಲಿ ಸಿನಿಮಾ ಅದೇ ಕೋನದಲ್ಲಿ ನೋಡಿದವರು ಅದ್ಭುತ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಕೂಡ 'ಯುಐ' ಸಿನಿಮಾ ತೆರೆಕಂಡಿದೆ. ಮುಖ್ಯವಾಗಿ ತೆಲುಗಿನಲ್ಲಿ ದೊಡ್ಡದಾಗಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ತಮಿಳು ಪ್ರೇಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತೆಲುಗಿನಲ್ಲಿ 'KGF' ಸರಣಿ ಹಾಗೂ 'ಕಾಂತಾರ' ಬಳಿಕ 'ಯುಐ' ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಅಡ್ವಾನ್ಸ್ ಬುಕ್ಕಿಂಗ್ ಕೂಡ ಚೆನ್ನಾಗಿ ಇತ್ತು.

ಸದ್ಯ 'ಯುಐ' ಸಿನಿಮಾ ತೆರೆಗೆ ಬಂದಿದ್ದು ಈಗಾಗಲೇ ತೆಲುಗು, ತಮಿಳಿನಲ್ಲಿ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅಲ್ಲಿನ ಚಿತ್ರ ವಿಮರ್ಶಕರು ಕೂಡ ಉಪೇಂದ್ರ 'ಯುಐ' ಪ್ರಪಂಚದ ಬಗ್ಗೆ ಒಳ್ಳೆ ಮಾತುಗಳನ್ನಾಡುತ್ತಿದ್ದಾರೆ. ಸಿನಿಮಾ ನೋಡಿದ ತೆಲುಗು, ತಮಿಳು ಪ್ರೇಕ್ಷಕರ ಟ್ವಿಟ್ಟರ್ ರಿವ್ಯೂ ಇಲ್ಲಿದೆ ಓದಿ.
ಉಪ್ಪಿ ಒನ್‌ಮ್ಯಾನ್ ಶೋ
ಟಿಪಿಕಲ್ ಉಪೇಂದ್ರ ಸ್ಟೈಲ್ ಸ್ಕ್ರೀನ್‌ಪ್ಲೇ. ಸಿನಿಮ್ಯಾಟಿಕ್ ಲಿಬರ್ಟಿ ತಗೊಂಡು ವಿಭಿನ್ನ ಅನುಭವ ನೀಡುವಂತೆ ಸಿನಿಮಾ ಮಾಡಿದ್ದಾರೆ. ಉಪೇಂದ್ರ ಅವರ ಒನ್‌ಮ್ಯಾನ್ ಶೋ. ವಿಡಂಬನಾತ್ಮಕ ಸಂಭಾಷಣೆ, ಉಪ್ಪಿ ಸಿಗ್ನೇಚರ್ ಸ್ಟೈಲ್, ವಿಭಿನ್ ಪ್ರಪಂಚ ಸೃಷ್ಟಿಸಿರುವ ಪರಿ ಸೂಪರ್. ಆದರೆ ಕೊನೆವರೆಗೂ ಸಿನಿಮಾ ಎಂಗೇಜಿಂಗ್ ಆಗಿದೆ ಎಂದು ತೆಲುಗು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಕನ್‌ಫ್ಯೂಷನ್ + ಮನರಂಜನೆ
ಪಕ್ಕಾ ಉಪೇಂದ್ರ ಸ್ಟೈಲ್ ವಿಭಿನ್ನ ಸಿನಿಮಾ. ಉಪೇಂದ್ರ ಮಾರ್ಕ್ ಡೈಲಾಗ್ಸ್ ಜೊತೆಗೆ ಕನ್‌ಫ್ಯೂಷನ್ ಹಾಗೂ ಮನರಂಜನೆ ಇದೆ. ಅದು ನನಗೆ ಇಷ್ಟವಾಯಿತು. ತೆಲುಗಿನಲ್ಲಿ ಸಿನಿಮಾ ಒಳ್ಳೆಯ ಬ್ಯುಸಿನೆಸ್ ಮಾಡಬಹುದು" ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೀಲ್ ಹೇಳಿದ್ದು ಇದಕ್ಕೆ
ಒಂದೇ ಮಾತಲ್ಲಿ ಹೇಳಬೇಕು ಅಂದರೆ ಬಹಳ ಒಳ್ಳೆಯ ಸಿನಿಮಾ. ಕೆಜಿಎಫ್ ಬಳಿಕ ತೆಲುಗು ರಾಜ್ಯಗಳಲ್ಲಿ 'ಯುಐ' ಸಿನಿಮಾ ಪ್ರಭಾವ ಜೋರಾಗಿದೆ. ಮತ್ತೊಮ್ಮೆ ವಿಭಿನ್ನವಾಗಿ ಯೋಚಿಸಿ ಉಪೇಂದ್ರ ಸಿನಿಮಾ ಮಾಡಿದ್ದಾರೆ. ಉಪೇಂದ್ರ ಬೆಸ್ಟ್ ಅಂತ ಪ್ರಶಾಂತ್ ನೀಲ್ ಯಾಕೆ ಹೇಳಿದರು ಎನ್ನುವುದು ಈಗ ಅರ್ಥವಾಯಿತು. ಒಟ್ಟಾರೆ ಸಿನಿಮಾ ಒಳ್ಳೆಯ ಅನುಭವ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
ಉಪೇಂದ್ರ ಕಂಬ್ಯಾಕ್
ತಮಿಳು ಸಿನಿಮಾ ಕ್ರಿಟಿಕ್ ಮನೊಬಲ ವಿಜಯಬಾಲನ್ ಕೂಡ ಸಿನಿಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಅವರ ಒನ್ ಮ್ಯಾನ್ ಶೋ.. ವಿಡಂಬನೆ ಹಾಗೂ ಮಾಸ್ ಡೈಲಾಗ್ಸ್ ಸೂಪರ್. ಉಪೇಂದ್ರ ಅವರ ಬಹಳ ಬೋಲ್ಡ್ ಹಾಗೂ ನೋಡುಗರ ಚಿಂತನೆಯನ್ನು ಪ್ರಚೋದಿಸುವ ಪ್ರಯತ್ನವನ್ನು ಈ ಚಿತ್ರದಲ್ಲೂ ಮಾಡಿದ್ದಾರೆ. ಮತ್ತೆ ಕಂಬ್ಯಾಕ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಫೋಕಸ್ ಮಾಡಬೇಕು
'ಯುಐ' ಪವರ್‌ಫುಲ್ ಫಿಲಾಸಫಿಯನ್ನು ಪ್ರಸ್ತುತಪಡಿಸುತ್ತದೆ. ನಾನು, ನೀವು ನೋಡುವವರೆಗೂ ಫೋಕಸ್ ಮಾಡಬೇಕು. ಸಿನಿಮಾ ನಿಜಕ್ಕೂ ಬಹಳ ವಿಭಿನ್ನ ಅನುಭವ ನೀಡುವಂತಿದೆ. ಡೈಲಾಗ್ಸ್, ಇಂಟರ್‌ವಲ್ ಹಾಗೂ ಕ್ಲೈಮ್ಯಾಕ್ಸ್ ಊಹಿಸಲು ಸಾಧ್ಯವಿಲ್ಲ. ಉಪ್ಪಿ ನಿರ್ದೇಶನದ ಬುದ್ಧಿವಂತಿಕೆಯು ಚಿತ್ರಕಥೆಯಲ್ಲಿ ಸ್ಪಷ್ಟವಾಗಿ ನೋಡಬಹುದು ಎನ್ನುವುದು ಮತ್ತೊಬ್ಬರ ಟ್ವೀಟ್.


Click it and Unblock the Notifications











