For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಗೆ 'ಬಾಹುಬಲಿ', ರಕ್ಷಿತ್ ಗೆ 'ಶ್ರೀಮನ್ನಾರಾಯಣ'- ತೆಲುಗು ಜನರ ಜೈಕಾರ

  |

  'ಇದು ಚರಿತ್ರೆ ಸೃಷ್ಟಿಸೋ ಅವತಾರ' ಎಂದು ಬಂದ ಶ್ರೀಮನ್ನಾರಾಯಣ ತನ್ನ ಮಾತನ್ನು ಸತ್ಯ ಮಾಡುತ್ತಿದ್ದಾನೆ. ಕನ್ನಡದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಡುತ್ತಿರುವ ಈ ಸಿನಿಮಾ, ಇದೀಗ ತೆಲುಗಿನಲ್ಲಿ ಬಿಡುಗಡೆಯಾಗಿದೆ.

  ಹೊಸ ವರ್ಷದ ವಿಶೇಷವಾಗಿ ಜನವರಿ 1 ರಂದು ಸಿನಿಮಾ ಅಲ್ಲಿ ಬಿಡುಗಡೆ ಆಗಿದೆ. ಸಿನಿಮಾವನ್ನು ತೆಲುಗು ಜನರು ಅದ್ಭುತವಾಗಿ ಸ್ವಾಗತ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಜನರ ಸಂಖ್ಯೆ ಜೋರಾಗಿಯೇ ಇದೆ. ಅದಕ್ಕಿಂತ ಮುಖ್ಯವಾಗಿ ಒಂದು ಒಳ್ಳೆಯ ಸಿನಿಮಾ ನೋಡಿದ ತೃಪ್ತಿಯೊಂದಿಗೆ ಅವರು ಆಚೆ ಬಂದಿದ್ದಾರೆ.

  Avane Srimannarayana Review : ದೃಶ್ಯ ವೈಭವ.. ಸಂಗೀತದ ಸೊಬಗು..Avane Srimannarayana Review : ದೃಶ್ಯ ವೈಭವ.. ಸಂಗೀತದ ಸೊಬಗು..

  ಹಾಲಿವುಡ್ ಸಿನಿಮಾದ ರೀತಿ ಈ ಚಿತ್ರ ಇದೆ. ಬೇರೆ ಜಾನರ್ ಹೊಂದಿದೆ. ಹಿನ್ನಲೆ ಸಂಗೀತ, ಸಿನಿಮಾಟೋಗ್ರಾಫಿ ಸೂಪರ್. ರಕ್ಷಿತ್ ಶೆಟ್ಟಿ ಅಂದದ ಕಾಮಿಡಿ ಮಾಡಿದ್ದಾರೆ. ಟೆಕ್ನಿಷಿಯನ್ ಕೆಲಸ ಚೆನ್ನಾಗಿದೆ. ಹೀಗೆ 'ಅತಡೇ ಶ್ರೀಮನ್ನಾರಾಯಣ' ಸಿನಿಮಾವನ್ನು ನೋಡಿದ ಜನರು ಮೆಚ್ಚುಗೆ ಸೂಚಿಸಿದ್ದಾರೆ.

  ಸಿನಿಮಾಗೆ ಬಹುತೇಕ ಮಂದಿ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ಮೂರು ಗಂಟೆ ಇರುವ ಸಿನಿಮಾ ಕೊಂಚ ಉದ್ದವಾಯಿತು ಎನ್ನುವ ಮಾತು ಅಲ್ಲಿನ ಜನರ ಬಾಯಲ್ಲಿಯೂ ಕೇಳಿ ಬಂದಿದೆ. ಅದೊಂದು ಅಂಶ ಬಿಟ್ಟರೆ ಸಿನಿಮಾ ತೆಲುಗು ಮಂದಿಯ ಮನವನ್ನೂ ಗೆದ್ದಿದೆ.

  ನಾ ನೋಡಿದ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ವಿಮರ್ಶೆ: ಚರಿತ್ರೆ ಸೃಷ್ಟಿಸೋ ಮೇಕಿಂಗ್, ಡೋಂಟ್ ಮಿಸ್ ಇಟ್ನಾ ನೋಡಿದ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ವಿಮರ್ಶೆ: ಚರಿತ್ರೆ ಸೃಷ್ಟಿಸೋ ಮೇಕಿಂಗ್, ಡೋಂಟ್ ಮಿಸ್ ಇಟ್

  'ಬಾಹುಬಲಿ' ಸಿನಿಮಾ ಹೇಗೆ ಪ್ರಭಾಸ್ ಗೆ ದೊಡ್ಡ ಮಟ್ಟದ ಯಶಸ್ಸು ನೀಡಿತ್ತೊ, ಆ ರೀತಿ ರಕ್ಷಿತ್ ಶೆಟ್ಟಿಗೆ 'ಅತಡೇ ಶ್ರೀಮನ್ನಾರಾಯಣ' ಸಿನಿಮಾ ಆಗಲಿ ಎಂದು ಕೆಲವರು ಶುಭಾಶಯ ತಿಳಿಸಿದ್ದಾರೆ.

  ಬಿಡುಗಡೆ ಇದ್ದ ಕಾರಣ 'ಅತಡೇ ಶ್ರೀಮನ್ನಾರಾಯಣ' ಸಿನಿಮಾ ಟ್ವಿಟ್ಟರ್ ನಲ್ಲಿ ಇಂದು (ಜನವರಿ 1) ಟ್ರೆಂಡಿಂಗ್ ನಲ್ಲಿ ಇತ್ತು. ತೆಲುಗಿನ ನಂತರ ತಮಿಳು ಹಾಗೂ ಹಿಂದಿಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

  English summary
  Telugu audience grandly welcome Athade Srimannarayana movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X