ತೆಲುಗು 'ಕಾಂತಾರ' ತೋರಿಸಿ ತಮಿಳು ತಂಬಿಗಳಿಗೆ ಮಸಾಲೆ ಅರೆದ ತೆಲುಗು ಬಾಬುಗಳು!

'ಕಾಂತಾರ' ಸಿನಿಮಾ ತೋರಿಸಿ, ಕೆಲ ತಮಿಳು ವಿಮರ್ಶಕರ ಮೇಲೆ ತೆಲುಗು ಪ್ರೇಕ್ಷಕರು ತಿರುಗಿ ಬಿದ್ದಿದ್ದಾರೆ. "ಸಿನಿಮಾ ಚೆನ್ನಾಗಿದ್ದರೆ ನಾವು ಯಾವ ಭಾಷೆ ಎನ್ನುವುದನ್ನು ನೋಡದೇ ಬರೀ ಸಿನಿಮಾ ನೋಡಿ ಗೆಲ್ಲಿಸುತ್ತೇವೆ. ಮೊದಲು ಒಳ್ಳೆಯ ಸಿನಿಮಾ ಮಾಡಿ. ಆಮೇಲೆ ಮಾತಾಡಿ" ಎಂದು ತಿರುಗೇಟು ನೀಡಿದ್ದಾರೆ.

'ಪೊನ್ನಿಯಿನ್ ಸೆಲ್ವನ್' ಸಿನಿಮಾ ವಿಚಾರವಾಗಿ ಕೆಲ ದಿನಗಳಿಂದ ಕೆಲ ತಮಿಳು ಹಾಗೂ ಕೆಲ ತೆಲುಗು ಪ್ರೇಕ್ಷಕರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಶುರುವಾಗಿದೆ. 'ಕಾಂತಾರ' ತೆಲುಗು ವರ್ಷನ್‌ಗೆ ತೆಲುಗು ರಾಜ್ಯಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ತಿದೆ. ಇದನ್ನು ತೋರಿಸಿ ಕೆಲ ತಮಿಳು ಸಿನಿಮಾ ವಿಮರ್ಶಕರ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಚಿತ್ರಕ್ಕೆ ಬಹುಪರಾಕ್ ಹೇಳುತ್ತಿದ್ದಾರೆ. 'ಪೊನ್ನಿಯಿನ್ ಸೆಲ್ವನ್‌'ಗಿಂತ 'ಕಾಂತಾರ' ಅದ್ಭುತ ಸಿನಿಮಾ ಎನ್ನುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮತ್ತೆ ಚರ್ಚೆ ತಾರಕಕ್ಕೇರಿದೆ.

ಅಷ್ಟಕ್ಕೂ 'ಕಾಂತಾರ' ಚಿತ್ರಕ್ಕೂ ಈ ರೀತಿ ತಮಿಳು, ತೆಲುಗು ಪ್ರೇಕ್ಷಕರ ನಡುವಿನ ಸಂಘರ್ಷಕ್ಕೂ ಕಾರಣ ಏನು ಎನ್ನುವ ಅನುಮಾನ ಮೂಡುವುದು ಸಹಜ. 'ಪೊನ್ನಿಯಿನ್ ಸೆಲ್ವನ್' ಚಿತ್ರವನ್ನು ಕೆಲವರು ರಾಜಮೌಳಿ 'ಬಾಹುಬಲಿ'ಗೆ ಹೋಲಿಸಿ ಚೆನ್ನಾಗಿಲ್ಲ ಎಂದಿದ್ದರು. ಇದು ಸಹಜವಾಗಿಯೇ ತಮಿಳು ಪ್ರೇಕ್ಷಕರಿಗೆ ಬೇಸರ ತಂದಿತ್ತು. ಮುಂದೆ ಏನೆಲ್ಲಾ ಆಯ್ತು ಎನ್ನುವುದನ್ನು ಓದಿ.

'ಪೊನ್ನಿಯಿನ್ ಸೆಲ್ವನ್' Vs 'ಬಾಹುಬಲಿ'

'ಪೊನ್ನಿಯಿನ್ ಸೆಲ್ವನ್' Vs 'ಬಾಹುಬಲಿ'

ಸೆಪ್ಟೆಂಬರ್ 30ರಂದು 'ಕಾಂತಾರ' ಸಿನಿಮಾ ಜೊತೆಗೆ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಕೂಡ ರಿಲೀಸ್ ಆಗಿತ್ತು. ಬಹುಕೋಟಿ ವೆಚ್ಚದ ಕಾಸ್ಟ್ಯೂಮ್ ಡ್ರಾಮಾ ಏಕಕಾಲಕ್ಕೆ 5 ಭಾಷೆಗಳಲ್ಲಿ ತೆರೆಗಪ್ಪಳಿಸಿತ್ತು. ಆದರೆ ಆಂಧ್ರ, ತೆಲಂಗಾಣದಲ್ಲಿ ಚಿತ್ರಕ್ಕೆ ಹಿನ್ನಡೆ ಆಗಿತ್ತು. ಕೆಲವರು 'ಬಾಹುಬಲಿ' ಸಿನಿಮಾ ಜೊತೆಗೆ ಹೋಲಿಸಿ 'ಪೊನ್ನಿಯಿನ್ ಸೆಲ್ವನ್' ಚೆನ್ನಾಗಿಲ್ಲ ಎಂದಿದ್ದರು. ಟ್ರೋಲ್ ಮಾಡಿದ್ದರು. ಇದು ತಮಿಳು ಪ್ರೇಕ್ಷಕರಿಗೆ ಬೇಸರ ತಂದಿತ್ತು. "ತೆಲುಗು ಪ್ರೇಕ್ಷಕರಿಗೆ ಸಿನಿಮಾ ನೋಡಲು ಬರಲ್ಲ. ಬರೀ ಮಸಾಲಾ ಸಿನಿಮಾಗಳು ಮಾತ್ರ ಅವರಿಗೆ ಇಷ್ಟವಾಗುತ್ತದೆ, 'ಪೊನ್ನಿಯಿನ್ ಸೆಲ್ವನ್' ಅದ್ಭುತ ಸಿನಿಮಾ" ಎಂದು ಕೆಲ ತಮಿಳು ವಿಮರ್ಶಕರು ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದರು.

'ಆದಿಪುರುಷ್' ಟೀಸರ್ ಟ್ರೋಲ್

'ಆದಿಪುರುಷ್' ಟೀಸರ್ ಟ್ರೋಲ್

'ಪೊನ್ನಿಯಿನ್ ಸೆಲ್ವನ್' ಸಿನಿಮಾ ಚೆನ್ನಾಗಿಲ್ಲ ಎಂದು ಟ್ರೋಲ್ ಮಾಡಿದ್ದಕ್ಕೆ ಬೇಸರಗೊಂಡಿದ್ದ ತಮಿಳು ನೆಟ್ಟಿಗರು 'ಆದಿಪುರುಷ್' ಟೀಸರ್ ಮೇಲೆ ಮುಗಿಬಿದ್ದಿದ್ದರು. ಪ್ರಭಾಸ್ ಶ್ರೀರಾಮನಾಗಿ ನಟಿಸುತ್ತಿರುವ 'ಆದಿಪುರುಷ್' ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದನ್ನು ನೋಡಿ ತಮಿಳು ನೆಟ್ಟಿಗರು ಇದು ಕಾರ್ಟೂನ್ ಸಿನಿಮಾ, ಇದಕ್ಕಿಂತ 'ಕೊಚಡಿಯನ್' ವಾಸಿ ಎಂದು ವ್ಯಂಗ್ಯ ಮಾಡಿದ್ದರು. ಮುಯ್ಯಿಗೆ ಮುಯ್ಯಿ ತೀರಿಸಿಕೊಂಡಿದ್ದರು.

"ನಾವು ಮಸಾಲಾ ಮೂವಿ ಲವರ್ಸ್ ಅಲ್ಲ"

ಸದ್ಯ 'ಕಾಂತಾರ' ಸಿನಿಮಾ ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿದೆ. ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡ್ತಿದ್ದು, ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ "ಕೆಲವೇ ದಿನಗಳ ಹಿಂದೆ ತೆಲುಗು ಪ್ರೇಕ್ಷಕರು ಮಸಾಲಾ ಸಿನಿಮಾ ಲವರ್ಸ್ ಎಂದವರಿಗೆ 'ಕಾಂತಾರ' ತೆಲುಗು ಚಿತ್ರಕ್ಕೆ ಸಿಕ್ಕಿರುವ ಓಪನಿಂಗ್ ಕೆನ್ನೆಗೆ ಬಾರಿಸಿದಂತಿದೆ. ಒಮ್ಮೆ ಸಿನಿಮಾ ಟಿಕೆಟ್ ಬುಕ್ಕಿಂಗ್ ಹೇಗಿದೆ ಎಂದು ನೋಡಿ ಗೊತ್ತಾಗುತ್ತದೆ. ತೆಲುಗು ಪ್ರೇಕ್ಷಕರು ಭಾಷೆ, ರಾಜ್ಯದ ಭೇದಭಾವ ಇಲ್ಲದೇ ಎಲ್ಲಾ ಒಳ್ಳೆಯ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ" ಅಂದು ನಯವಾಗಿಯೇ ಕಿವಿ ಹಿಂಡಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಿಂದಿಗಿಂತ ತೆಲುಗು ವರ್ಷನ್ ಹಿಟ್!

ಹಿಂದಿಗಿಂತ ತೆಲುಗು ವರ್ಷನ್ ಹಿಟ್!

'ಕಾಂತಾರ' ಹಿಂದಿ ವರ್ಷನ್ ಶುಕ್ರವಾರ ( ಅಕ್ಟೋಬರ್ 14 ) ತೆರೆ ಕಂಡಿತ್ತು. ತೆಲುಗು ವರ್ಷನ್ ಶನಿವಾರ ( ಅಕ್ಟೋಬರ್ 15 ) ಬಿಡುಗಡೆಗೊಂಡಿತು. 'ಕಾಂತಾರ' ಹಿಂದಿ ಮೊದಲನೇ ದಿನ ದೇಶದಾದ್ಯಂತ 1.27 ಕೋಟಿ ಗಳಿಕೆ ಮಾಡಿತ್ತು. ಇತ್ತ 'ಕಾಂತಾರ' ಶನಿವಾರ ಹೈದರಾಬಾದ್ ನಗರ ಒಂದರಲ್ಲಿಯೇ 1.5 ಕೋಟಿ ಗಳಿಕೆ ಮಾಡಿದೆ. ಹೈದ್ರಾಬಾದ್ ನಗರದ ಮೊದಲ ದಿನದ ಗಳಿಕೆಯಲ್ಲಿ 'ಕಾಂತಾರ' ಹಿಂದಿ ವರ್ಷನ್ ಕಲೆಕ್ಷನ್ ಕೂಡ ಸೇರಿದೆ. ಆದರೆ ಹಿಂದಿ ವರ್ಷನ್ ಪ್ರದರ್ಶನಗಳ ಸಂಖ್ಯೆ ತೀರಾ ಕಡಿಮೆ ಇದ್ದು, ಇದರಲ್ಲಿ ಬಹುತೇಕ ಪಾಲು ತೆಲುಗು ಅವತರಣಿಕೆಯದ್ದೇ ಎನ್ನುವುದು ಗೊತ್ತಾಗುತ್ತಿದೆ. ಇನ್ನು ತೆಲುಗು ಮೊದಲ ದಿನಗಳ ಕಲೆಕ್ಷನ್ 5 ಕೋಟಿ ರೂ. ದಾಟಿದೆ.

More from Filmibeat

English summary
Telugu audiences have given a huge thumbs up to Rishab Shetty Starrer Kantara. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X