For Quick Alerts
  ALLOW NOTIFICATIONS  
  For Daily Alerts

  ಮತ್ತೆ ಪ್ರಾರಂಭವಾಗುತ್ತಿದೆ ತೆಲುಗು ಬಿಗ್‌ಬಾಸ್‌: ನಿರೂಪಕ ಯಾರು?

  |

  ತೆಲುಗು ಬಿಗ್‌ಬಾಸ್ ಕೆಲವು ತಿಂಗಳ ಮುಂಚೆಯಷ್ಟೆ ಅಂತ್ಯವಾಗಿದೆ. ಅತಿ ಹೆಚ್ಚು ಬಾರಿ ನಾಮಿನೇಟ್ ಆದರೂ ಸಹ ನಟ ಅಭಿಜೀತ್ ತೆಲುಗು ಬಿಗ್‌ಬಾಸ್‌ 4 ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

  2020ರ ಸೆಪ್ಟೆಂಬರ್ 6 ರಂದು ಪ್ರಾರಂಭವಾಗಿದ್ದ ತೆಲುಗು ಬಿಗ್‌ಬಾಸ್ 4, ಡಿಸೆಂಬರ್ 20ಕ್ಕೆ ಅಂತ್ಯವಾಗಿತ್ತು. ಫಿನಾಲೆಗೆ ಮೆಗಾಸ್ಟಾರ್ ಚಿರಂಜೀವಿ ಅತಿಥಿಯಾಗಿ ಆಗಮಿಸಿದ್ದರು.

  ಈವರೆಗಿನ ತೆಲುಗು ಬಿಗ್‌ಬಾಸ್ ಶೋಗಳಲ್ಲಿ ಅತಿ ಹೆಚ್ಚು ಟಿಆರ್‌ಪಿ ಪಡೆದಿದ್ದು ಬಿಗ್‌ಬಾಸ್‌ 4. ಹಾಗಾಗಿ ಶೋ ಮುಗಿದ ಆರೇ ತಿಂಗಳಿಗೆ ಮತ್ತೆ ಹೊಸ ಸೀಸನ್ ಬಿಗ್‌ಬಾಸ್ 5 ಪ್ರಾರಂಭಿಸಲು ಯೋಜನೆ ಹಾಕಲಾಗಿದೆ.

  ಸ್ಪರ್ಧಿಗಳ ಆಯ್ಕೆ ಈಗಾಗಲೇ ಆರಂಭವಾಗಿದ್ದು ಜೂಮ್ ಕಾಲ್‌ ಮೂಲಕ ಸ್ಪರ್ಧಿಗಳ ಸಂದರ್ಶನ ಮಾಡಲಾಗುತ್ತಿದೆ ಎಂದು ತೆಲುಗು ಆನ್‌ಲೈನ್ ಪತ್ರಿಕೆಗಳು ವರದಿ ಮಾಡಿವೆ. ಶೋ ಜುಲೈ ಆರಂಭದಲ್ಲಿ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.

  ಯೂಟ್ಯೂಬರ್ ಶನ್ಮುಖ್ ಜಸ್ವಂತ್, ಟಿಕ್‌ಟಾಕ್ ಸ್ಟಾರ್ ದುರ್ಗಾ ರಾವ್, ಗಾಯಕಿ ಮಂಗ್ಲಿ, ಕಮಿಡಿಯನ್ ಹೈಪರ್ ಆದಿ, ಸುದ್ದಿ ನಿರೂಪಕಿ ಪ್ರತ್ಯೂಶಾ, ನೃತ್ಯ ನಿರ್ದೇಶಕ ಶೇಖರ್ ಮಾಸ್ಟರ್ ಇನ್ನೂ ಕೆಲವರು ಈ ಬಾರಿಯ ಸ್ಪರ್ಧಿಗಳಾಗಲಿದ್ದಾರೆ ಎನ್ನಲಾಗುತ್ತಿದೆ.

  Cinema ಕಾರ್ಮಿಕರ ಸಂಕಷ್ಟ ಪರಿಹಾರಕ್ಕೆ 10 ಲಕ್ಷ ರೂ ಪರಿಹಾರ ಘೋಷಿಸಿದ Puneet Rajkumar | Filmibeat Kannada

  ಬಿಗ್‌ಬಾಸ್ 4 ನಿರೂಪಣೆ ಮಾಡಿದ್ದ ನಾಗಾರ್ಜುನ ಅವರೇ ಬಿಗ್‌ಬಾಸ್‌ 5 ಅನ್ನೂ ನಿರೂಪಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಬಿಗ್‌ಬಾಸ್‌ 4ಗೆ ಅತಿಥಿ ನಿರೂಪಕಿಯಾಗಿ ನಟಿ ಸಮಂತಾ ಆಗಮಿಸಿದ್ದರು. ಆ ಎಪಿಸೋಡ್‌ಗೆ ಉತ್ತಮ ಟಿಆರ್‌ಪಿ ಲಭಿಸಿತ್ತು. ಹಾಗಾಗಿ ಈ ಶೋನಲ್ಲಿಯೂ ಸಮಂತಾ ಅತಿಥಿ ನಿರೂಪಕಿಯಾಗಿ ಬರುವ ಸಾಧ್ಯತೆ ಇದೆ.

  English summary
  Telugu Bigg Boss season 5 most likely to start in July first week. Telugu Bigg Boss 4 ended on December 20.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X