"ಶ್ರೀಲೀಲಾ, ಕೃತಿ ಶೆಟ್ಟಿ ತರ ನಾನು ಮಾಡಿದ್ರೆ, ಇಷ್ಟೊತ್ತಿಗೆ ಸ್ಟಾರ್ ನಟಿಯಾಗ್ತಿದ್ದೆ": ಇನಾಯಾ ಸುಲ್ತಾನ
ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ಹಿಂದಿಯಲ್ಲೂ ಬಿಗ್‌ಬಾಸ್ ಶೋ ನಡೀತಿದೆ. ತೆಲುಗಿನಲ್ಲಿ ನಾಗಾರ್ಜುನ ಬಿಗ್‌ಬಾಸ್ ಸೀಸನ್ 7ನ್ನು ನಡೆಸಿಕೊಡುತ್ತಿದ್ದಾರೆ. 7 ವಾರ ಪೂರೈಸಿ ಸೀಸನ್ ಬಹಳ ಕುತೂಹಲಭರಿತವಾಗಿ ಸಾಗುತ್ತಿದೆ. ಮಲಯಾಳಂ ನಟಿ ಶಕೀಲಾ, ನಟ ಶಿವಾಜಿ ಸೇರಿದಂತೆ ಹಲವರು ಈ ಬಾರಿ ದೊಡ್ಮನೆ ಪ್ರವೇಶಿಸಿದ್ದರು.
ಕಳೆದ ಸೀಸನ್‌ನಲ್ಲಿ ಕಿರುತೆರೆ ನಟಿ ಇನಾಯಾ ಸುಲ್ತಾನ ಬಿಗ್‌ಬಾಸ್ ಮನೆಯಲ್ಲಿದ್ದರು. 98 ದಿನಗಳ ಕಾಲ ಮನೆಯಲ್ಲಿ ಉಳಿದು ಪ್ರಬಲ ಪೈಪೋಟಿ ಕೊಟ್ಟಿದ್ದರು. ತಮ್ಮ ಉತ್ತಮ ಪ್ರದರ್ಶನದಿಂದ ವೀಕ್ಷಕರ ಮನಗೆದ್ದಿದ್ದರು. ಬಿಗ್‌ಬಾಸ್ ಹೊಸ ಸೀಸನ್ ನಡುವೆ ನಾಯಾ ಸುಲ್ತಾನ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ತಮ್ಮ ಬಿಗ್‌ಬಾಸ್ ಜರ್ನಿ ಜೊತೆಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೆ ಸಿನಿಮಾಗಳಲ್ಲಿ ಒಳ್ಳೆ ಅವಕಾಶಗಳು ಸಿಗುತ್ತೆ ಎಂದು ಆಕೆ ಅಂದುಕೊಂಡಿದ್ದಳು. ಆದರೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗಲಿಲ್ಲ. ಇನಾಯ ತಮ್ಮ ಬೋಲ್ಡ್ ಆಟಿಟ್ಯೂಡ್‌ನಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಸಿಕ್ಕಾಪಟ್ಟೆ ಎಕ್ಸ್‌ಪೋಸ್ ಮಾಡುವ ಚೆಲುವೆ, ನನ್ನ ಬಾಡಿ, ನಾನು ಎಕ್ಸ್‌ಪೋಸ್ ಮಾಡ್ತೀನಿ, ನಿಮಗೇನು? ಎಂದಿದ್ದಾರೆ.
ಸಿನಿಮಾ ಅವಕಾಶಗಳ ಬಗ್ಗೆ ಮಾತನಾಡಿರುವ ಇನಾಯಾ "ಸಿನಿಮಾ ಇಂಡಸ್ಟ್ರಿಗೆ ಕೆಲ ಹೆಣ್ಣು ಮಕ್ಕಳು ಟೀನೇಜ್‌ನಲ್ಲೇ ಎಂಟ್ರಿ ಕೊಡುತ್ತಾರೆ. 16, 17 ವರ್ಷಕ್ಕೆಲ್ಲಾ ಅವ್ರು ನಾಯಕಿಯರಾಗಿ ಗುರ್ತಿಸಿಕೊಳ್ಳುತ್ತಿದ್ದಾರೆ. ಶ್ರೀಲೀಲಾ, ಕೃತಿ ಶೆಟ್ಟಿ ಕೂಡ ಅದೇ ವಯಸ್ಸಿನಲ್ಲಿ ಇಂಡಸ್ಟ್ರಿಗೆ ಬಂದರು. ಆದರೆ ನಾನು 22 ವರ್ಷ ವಯಸ್ಸಿಗೆ ಬಂದೆ"
"ಕೃತಿ, ಶ್ರೀಲೀಲಾಗೆ ಹೋಲಿಸಿದರೆ ನಾನು 7 ವರ್ಷ ವ್ಯರ್ಥ ಮಾಡಿದೆ. ಅವರಂತೆ ನಾನು ಮೊದ್ಲೆ ಇಂಡಸ್ಟ್ರಿಗೆ ಬಂದಿದ್ದರೆ ನನ್ನ ಲೈಫ್ ಬೇರೆ ತರ ಇರುತ್ತಿತ್ತು ಎನಿಸುತ್ತಿದೆ. ಆದರೆ ಸದ್ಯಕ್ಕೆ ಅದರ ಬಗ್ಗೆ ನಾನು ಯೋಚಿಸುವುದಿಲ್ಲ."

"ಸದ್ಯ ನಾವು 60 ವರ್ಷಕ್ಕಿಂತ ಹೆಚ್ಚು ಬದುಕುವುದಿಲ್ಲ. ಯಾವಾಗ ಇರ್ತೀವಿ, ಯಾವಾಗ ಹೋಗ್ತೀವಿ ಅನ್ನೋದು ಯಾರಿಗೂ ಗೊತ್ತಿಲ್ಲ. ಸದ್ಯ ನನ್ನ ವಯಸ್ಸು 25 ವರ್ಷ. ದೇವರ ದಯೆಯಿಂದ ಇನ್ನೊಂದು 25 ವರ್ಷ ಬದುಕುತ್ತೀನಿ ಅನ್ನಿಸುತ್ತೆ. ಇದರಲ್ಲಿ ನಾನು 10 ರಿಂದ 15 ವರ್ಷ ಎಂಜಾಯ್ ಮಾಡ್ತೀನಿ. ಆ ಬಳಿಕ ಎಂಜಾಯ್ ಮಾಡಬೇಕು ಅಂದ್ರು ದೇಹ ಸಹಕರಿಸುವುದಿಲ್ಲ. ಹಾಗಾಗಿ ಇರುವ ಸಮಯದಲ್ಲಿ ಸಂತೋಷದಿಂದ ಇರಬೇಕು. ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಕಮ್ಮಿನೇ. ನನ್ನಲ್ಲಿ ಬಳಹ ಶೇಡ್‌ಗಳಿವೆ. ಅದನ್ನೆಲ್ಲಾ ಪೋಸ್ಟ್ ಮಾಡಿದರೆ ಕತೆ ಏನಾಗುತ್ತೋ"
ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೆ ಅವಕಾಶಗಳು ಸಿಗುತ್ತೆ ಎಂದುಕೊಂಡಿದ್ದೆ. ಸಿಗಲಿಲ್ಲ. ಸಿನಿಮಾ ಅವಕಾಶಗಳಿಗಾಗಿ ಸಾಕಷ್ಟು ಪ್ರಯತ್ನಿಸಿದೆ ಬರಲಿಲ್ಲ. ಹಾಗಂತ ನಾನು ಖಿನ್ನತೆಗೆ ಒಳಗಾಗಲಿಲ್ಲ. ಎಷ್ಟು ಆಫೀಸ್‌ಗಳ ಸುತ್ತಾ ಸುತ್ತಿದರೂ ಪ್ರಯೋಜನವಾಗಲಿಲ್ಲ. ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಬೇಕು ಎಂದು ಬಂದ್ರು ಅಂದು ಅವಕಾಶಗಳು ಕೇಳುತ್ತಿದ್ದಂತೆ ಇವತ್ತಿಗೂ ಕೇಳುತ್ತಿದ್ದೇನೆ" ಎಂದು ಇನಯಾ ಹೇಳಿದ್ದಾರೆ.
18 ವರ್ಷ ವಯಸ್ಸಿನಲ್ಲೇ ನಟಿ ಶ್ರೀಲೀಲಾ ಚಿತ್ರರಂಗಕ್ಕೆ ಬಂದರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಚೆಲುವೆ ಕನ್ನಡದ 'ಕಿಸ್' ಚಿತ್ರದಲ್ಲಿ ಮೊದಲಿಗೆ ನಟಿಸಿದರು. 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿ ಈಗ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ತುಳು ಕುಟುಂಬದ ಕೃತಿ ಶೆಟ್ಟಿ 16 ವರ್ಷಕ್ಕೆ ಬಣ್ಣದ ಲೋಕಕ್ಕೆ ಬಂದರು. ತೆಲುಗಿನ 'ಉಪ್ಪೆನ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಈಗ ತೆಲುಗಿನ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications