For Quick Alerts
  ALLOW NOTIFICATIONS  
  For Daily Alerts

  ತೆಲುಗು ಬಿಗ್‌ಬಾಸ್ ಸ್ಪರ್ಧಿ ಉಡುಪಿಯಲ್ಲಿ ಬಂಧನ: ಕಾರಣವೇನು?

  |

  ತೆಲುಗು ಬಿಗ್‌ಬಾಸ್ ಸ್ಪರ್ಧಿ, ಸಿನಿಮಾ ನಿರ್ಮಾಪಕ ನೂತನ್ ನಾಯ್ಡುವನ್ನು ಉಡುಪಿ ಪೊಲೀಸರು ನಗರದ ಇಂದ್ರಾಳಿ ರೈಲ್ವೆ ಸ್ಟೇಶನ್‌ ಬಳಿ ಬಂಧಿಸಿದ್ದಾರೆ.

  Medical ಹಾಗು Industrial ದೃಷ್ಟಿಯಿಂದ Ganja ಕಾನೂನು ಬದ್ಧವಾಗಬೇಕು - Rakesh Adiga | Filmibeat Kannada

  ನೂತನ್ ನಾಯ್ಡು ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದ್ದು, ಆತನಿಗಾಗಿ ಆಂಧ್ರದ ವೈಜಾಗ್ ಪೊಲೀಸರು ಹುಡುಕಾಟ ನಡೆಸಿದ್ದರು. ನೂತನ್ ನಾಯ್ಡು, ಮಂಗಳೂರಿನಿಂದ ಮುಂಬೈಗೆ ಪರಾರಿಯಾಗಲೆಂದು ಯತ್ನಿಸುತ್ತಿದ್ದಾಗ ಉಡುಪಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

  ಡ್ರಗ್ ದಂಧೆ ಆರೋಪಿ ಅನಿಕಾ ನನಗೆ ಗೊತ್ತು- ಬಿಗ್ ಬಾಸ್ ಖ್ಯಾತಿಯ ಆ್ಯಡಂ ಪಾಷಾ

  ರೈಲ್ವೆ ಸ್ಟೇಶನ್ ಬಳಿ ಪೊಲೀಸರು ನೂತನ್ ನಾಯ್ಡುವನ್ನು ಸುತ್ತುವರೆದಾಗ ಆತ ತನ್ನ ಬಳಿ ಇದ್ದ ಮೊಬೈಲ್ ಫೋನ್ ಅನ್ನು ಬಿಸಾಡಲು ಯತ್ನಿಸಿದ್ದಾನೆ. ಆದರೆ ಆತನ ಬಳಿ ಇದ್ದ ನಾಲ್ಕು ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೂತನ್ ನಾಯ್ಡುವನ್ನು ಆಂಧ್ರಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

  ದಲಿತ ಯುವಕ ಮೇಲೆ ದೌರ್ಜನ್ಯ

  ದಲಿತ ಯುವಕ ಮೇಲೆ ದೌರ್ಜನ್ಯ

  ನೂತನ್ ನಾಯ್ಡು, ಪರ್ರಿ ಶ್ರೀಕಾಂತ್ ಹೆಸರು 20 ವರ್ಷದ ದಲಿತ ಯುವಕನ ಮೇಲೆ ದೌರ್ಜನ್ಯ ಎಸಗಿದ ಆರೋಪಿಯಾಗಿದ್ದಾನೆ. ಏಳು ಮಂದಿ ದಲಿತ ಯುವಕ ಮೇಲೆ ದೌರ್ಜನ್ಯ ಎಸಗಿ, ಆತನ ತಲೆ ಬೋಳಿಸಿದ್ದರು. ಏಳೂ ಮಂದಿಯನ್ನು ಪೊಲೀಸರು ಬಂಧಿಸಿದ್ದು, ನೂತನ್‌ಗಾಗಿ ಹುಡುಕಾಟ ನಡೆಸುತ್ತಿದ್ದರು.

  ದಲಿತ ಯುವಕನ ತಲೆ ಬೋಳಿಸಿದ ನೂತನ್ ಪತ್ನಿ

  ದಲಿತ ಯುವಕನ ತಲೆ ಬೋಳಿಸಿದ ನೂತನ್ ಪತ್ನಿ

  ಶ್ರೀಕಾಂತ್ ನೂತನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಆಗಸ್ಟ್ 28 ರಂದು ನೂತನ್‌ನ ಪತ್ನಿ ಪ್ರಿಯಾ ಮಾಧುರಿ ಆತನ ಮೇಲೆ ದೌರ್ಜನ್ಯ ನಡೆಸಿ, ಆತನ ತಲೆ ಬೋಳಿಸಿದ್ದರು. ಅದೇ ದಿನ ಹೈದರಾಬಾದ್‌ನಿಂದ ಎರಡು ಬಾರಿ ನೂತನ್ ನಾಯ್ಡು ಪತ್ನಿಗೆ ವಿಡಿಯೋ ಕರೆ ಮಾಡಿದ್ದ. ಫೋನಿನ ಮೂಲಕ ಶ್ರೀಕಾಂತ್ ಅನ್ನು ಕೆಟ್ಟ ಭಾಷೆಯಲ್ಲಿ ಬೈದಿದ್ದ.

  'ಬಿಗ್ ಬಾಸ್ ಸೀಸನ್ 14': ಸಲ್ಮಾನ್ ಖಾನ್ ಸಂಭಾವನೆ ಇಷ್ಟೊಂದಾ?

  ಐಎಎಸ್ ಅಧಿಕಾರಿ ಹೆಸರು ದುರ್ಬಳಕೆ

  ಐಎಎಸ್ ಅಧಿಕಾರಿ ಹೆಸರು ದುರ್ಬಳಕೆ

  ಅಷ್ಟೇ ಅಲ್ಲದೆ, ಮಾಜಿ ಐಎಎಸ್ ಅಧಿಕಾರಿ, ಆಂಧ್ರದ ಮಾಜಿ ಮುಖ್ಯ ಕಾರ್ಯದರ್ಶಿ ಡಾ.ರಮೇಶ್ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ, ಪ್ರಕರಣದ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದ ಎಂಬ ಆರೋಪವೂ ನೂತನ್ ಮೇಲಿದೆ.

  ಸುಳ್ಳು ಪ್ರಮಾಣ ಪತ್ರ ನೀಡುವಂತೆ ಒತ್ತಾಯ

  ಸುಳ್ಳು ಪ್ರಮಾಣ ಪತ್ರ ನೀಡುವಂತೆ ಒತ್ತಾಯ

  ಡಾ.ರಮೇಶ್ ಹೆಸರಲ್ಲಿ ವೈಧ್ಯಾಧಿಕಾರಿಗೆ ಕರೆ ಮಾಡಿದ್ದ ನೂತನ್, ಬಂಧಿತ ಏಳು ಮಂದಿಯಲ್ಲಿ ಆರು ಮಂದಿಗೆ ತಾನು ಹೇಳಿದಂತೆ ಆರೋಗ್ಯ ಪ್ರಮಾಣಪತ್ರ ನೀಡುವಂತೆ ಹೇಳಿದ್ದ. ಪತ್ನಿ ಪ್ರಿಯಾಗೆ ಖಾಯಿಲೆ ಇದ್ದು, ಆಕೆ ಆಸ್ಪತ್ರೆಯಲ್ಲಿಯೇ ಉಳಿಯುವಂತೆ ಪ್ರಮಾಣ ಪತ್ರ ನೀಡು ಎಂತಲೂ ನೂತನ್ ಒತ್ತಾಯಿಸಿದ್ದ.

  ಮತ್ತೆ 'ಗಲ್ಲಿ ಕಿಚನ್' ಫುಡ್ ಟ್ರಕ್ ಪ್ರಾರಂಭಿಸಿದ 'ಬಿಗ್ ಬಾಸ್' ವಿನ್ನರ್ ಶೈನ್ ಶೆಟ್ಟಿ

  ಟ್ರೂಕಾಲರ್‌ನಲ್ಲಿ ಹೆಸರು ಬದಲಾಯಿಸಿ ಕರೆ

  ಟ್ರೂಕಾಲರ್‌ನಲ್ಲಿ ಹೆಸರು ಬದಲಾಯಿಸಿ ಕರೆ

  ಟ್ರೂಕಾಲರ್ ಆಪ್‌ನಲ್ಲಿ ಹೆಸರನ್ನು ಮುಖ್ಯ ಕಾರ್ಯದರ್ಶಿ, ಆಂಧ್ರಪ್ರದೇಶ ಎಂದು ಹೆಸರು ಬದಲಾಯಿಸಿ, ವೈದ್ಯಾಧಿಕಾರಿಗೆ ನೂತನ್ ಕರೆ ಮಾಡಿದ್ದ. ಆದರೆ ಅನುಮಾನ ಬಂದ ವೈದ್ಯಾಧಿಕಾರಿ, ವಿಷಯವನ್ನು ನೇರವಾಗಿ ಪೊಲೀಸ್ ಕಮೀಷನರ್‌ಗೆ ತಲುಪಿಸಿದ್ದರು. ಈ ಪ್ರಕರಣವೂ ನೂತನ್‌ ಮೇಲೆ ದಾಖಲಾಗಿದೆ.

  English summary
  Telugu Biggboss contestant and movie producer Nutan Naidu arrested in Udupi on Sunday. Vigaz police were searching him in Sc/St atrocity case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X