ಈಜುಡುಗೆ ತೊಟ್ಟು ಥಾಯ್ಲೆಂಡ್ ಬೀಚ್‌ನಲ್ಲಿ ಸುರೇಖಾ ವಾಣಿ ಎಂಜಾಯ್
ತೆಲುಗು ಪೋಷಕ ನಟಿ ಸುರೇಖಾ ವಾಣಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಆಕೆ ಮಗಳ ಜೊತೆ ಸೇರಿ ರೀಲ್ಸ್, ಯೂಟ್ಯೂಬ್ ವಾಲ್ಗ್ಸ್ ಮಾಡುತ್ತಿರುತ್ತಾರೆ.
ನಮ್ಮ ತಾಯಿಗೆ ಎರಡನೇ ಮದುವೆ ಮಾಡಬೇಕು ಎಂದು ಸುರೇಖಾ ವಾಣಿ ಪುತ್ರಿ ಸುಪ್ರೀತಾ ಹೇಳಿದ್ದು ಬಹಳ ಸುದ್ದಿ ಆಗಿತ್ತು. ಹುಡುಗ್ರು ಸಿದ್ಧರಿಲ್ಲ, ಅಂಕಲ್ಸ್ ಆದ್ರು ಓಕೆ, ನಮ್ಮ ತಾಯಿಗೆ 2ನೇ ಮದುವೆ ಮಾಡ್ಬೇಕು ಎಂದು ಆಕೆ ಹೇಳಿದ್ದರು. ಪತಿ ಅಗಲಿಕೆ ಬಳಿಕ ಸಿಂಗಲ್ ಪೇರೆಂಟ್ ಆಗಿ ಸುರೇಖಾ ಮಗಳನ್ನು ಸಾಕಿ ಸಲಹುತ್ತಿದ್ದಾರೆ.

ವಯಸ್ಸು 45 ದಾಟಿದರೂ ಇವತ್ತಿಗೂ ತಮ್ಮ ಚೆಲುವಿನಿಂದ ಸುರೇಖಾ ವಾಣಿ ಗಮನ ಸೆಳೆಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ತಾಯಿ ಮಗಳ ಫೋಟೊ ನೋಡಿದವರು ನೀವಿಬ್ಬರು ಸಹೋದರಿಯರಾ? ಎಂದು ಕೇಳವುದು ಇದೆಯಂತೆ. ಇನ್ನು ಆಗಾಗ್ಗೆ ತಾಯಿ, ಮಗಳು ದೇಶ, ವಿದೇಶಗಳಲ್ಲಿ ಪ್ರವಾಸ ಕೈಗೊಳ್ಳುತ್ತಾರೆ.
ಸದ್ಯ ಸುರೇಖಾ ಥಾಯ್ಲೆಂಡ್ ಪ್ರವಾಸದಲ್ಲಿದ್ದಾರೆ. ಈ ವರ್ಷದ ಮೊದಲ ಪ್ರವಾಸ ಎಂದು ಇತ್ತೀಚೆಗೆ ಪಾಸ್‌ಪೋರ್ಟ್ ತೋರಿಸಿ ಪೋಸ್ಟ್ ಹಾಕಿಕೊಂಡಿದ್ದರು. ಇದೀಗ ಥಾಯ್ಲೆಂಡ್ ಕಡಲ ಕಿನಾರೆಯಲ್ಲಿ ಮೋಜು ಮಸ್ತಿ ಮಾಡುತ್ತಿರುವ ಫೋಟೊ, ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಜುಡುಗೆಯಲ್ಲಿ ಬೀಚ್‌ನಲ್ಲಿ ಆಟ ಆಡುತ್ತಿರುವ ವೀಡಿಯೋ ಹಂಚಿಕೊಂಡಿದ್ದಾರೆ.

ಈ ವಯಸ್ಸಲ್ಲಿ ಇಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡ್ರಾ ಎಂದು ಕೆಲವರು ಕಾಮೆಂಟ್ ಮಾಡಿದರೆ ಮತ್ತೆ ಕೆಲವರು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ಸುರೇಖಾ ಎಂಜಾಯ್ ಮಾಡುತ್ತಿದ್ದಾರೆ. ಕಳೆದು ನಾಲ್ಕೈದು ದಿನಗಳಿಂದ ಥಾಯ್ಲೆಂಡ್‌ನಲ್ಲೇ ಉಳಿದುಕೊಂಡಿದ್ದಾರೆ. ಸೂರ್ಯಾಸ್ತ ಹಾಗೂ ಬೀಚ್ ನಿಜಕ್ಕೂ ಎಮೋಷನ್ ಎಂದು ಬರೆದು ವೀಡಿಯೋ ತೇಲಿ ಬಿಟ್ಟಿದ್ದಾರೆ.
ವಾರದ ಹಿಂದೆ ಸುರೇಖಾ ವಾಣಿ ಕುಂಭಮೇಳಕ್ಕೂ ಹೋಗಿ ಬಂದಿದ್ದರು. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಹರ ಹರ ಮಹಾದೇವ್ ಎಂದು ಫೋಟೊಗಳನ್ನು ಪೋಸ್ಟ್ ಮಾಡಿದ್ದರು. ಇದೀಗ ಥಾಯ್ಲೆಂಡ್‌ನಲ್ಲಿ ವಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸುರೇಖಾ ಪುತ್ರಿ ಸುಪ್ರೀತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
ಸಾಕಷ್ಟು ಸಿನಿಮಾಗಳಲ್ಲಿ ನಾಯಕ, ನಾಯಕಿಯರ ಅಕ್ಕ, ತಂಗಿ, ಅತ್ತೆ ಪಾತ್ರಗಳಲ್ಲಿ ಸುರೇಖಾ ನಟಿಸಿದ್ದಾರೆ. ಕಾಮಿಡಿ ರೋಲ್‌ಗಳಲ್ಲಿ ಕೂಡ ಮಿಂಚಿದ್ದಾರೆ. ಸೋಶಿಯಲ್ ಮೀಡಿಯಾದಿಂದ ಬಹಳ ಬಹುತೇಕ ಹಣವನ್ನು ತಾಯಿ- ಮಗಳು ತಮ್ಮ ಪ್ರವಾಸಕ್ಕೆ ಬಳಸುತ್ತಾರಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಸುಪ್ರೀತಾ ಹೇಳಿಕೊಂಡಿದ್ದರು.
'ಬೊಮ್ಮರಿಲ್ಲು', 'ದುಬಾಯ್ ಸೀನು', 'ನೇನಿಂತೆ', 'ನಮೋ ವೆಂಕಟೇಶ', 'ಬಾದ್‌ಷಾ', 'ಪವರ್', 'ಸನ್ ಆಫ್ ಸತ್ಯಮೂರ್ತಿ', 'ಸರೈನೋಡು' ಸೇರಿ ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ಸುರೇಖಾ ವಾಣಿ ನಟಿಸಿದ್ದಾರೆ.


Click it and Unblock the Notifications











