ತೆಲುಗು ಚಿತ್ರರಂಗವನ್ನು ಬೆಚ್ಚಿ ಬೀಳಿಸಿದ ಮತ್ತೊಂದು ಕಾಮಕಾಂಡ,ಬಾಲಕಿಗೆ ಕಿರುಕುಳ ನೀಡಿದ ನೃತ್ಯ ನಿರ್ದೇಶಕ ಅರೆಸ್ಟ್
ತೆಲುಗು ಚಿತ್ರರಂಗವನ್ನು ಆಗಾಗ ಕಾಮದ ಪುರಾಣಗಳು ಆವರಿಸಿಕೊಳ್ಳುತ್ತಾವೆ. ಕಾಮ ಸಂಬಂಧಿ ಹಗರಣಗಳು ಇಡೀ ಚಿತ್ರ ಉದ್ಯಮವನ್ನು ಬೆಚ್ಚಿ ಬೀಳಿಸುತ್ತವೆ. ಕಳೆದ ವರ್ಷ ಇಂತಹದ್ದೇ ಒಂದು ಪ್ರಕರಣದಲ್ಲಿ ಪ್ರಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಹೆಸರು ಕೇಳಿ ಬಂದಿತ್ತು. ತನ್ನ ಜೊತೆ ಕೆಲಸ ಮಾಡ್ತಿದ್ದ ಶ್ರೇಷ್ಠಿ ವರ್ಮಾ ಅವರ ಮೇಲೆಯೇ ಕಣ್ಣಾಕಿದ್ದ ಜಾನಿ ಮಾಸ್ಟರ್ ವಿಷಯ ಹೊರ ಬರುತ್ತಿದ್ದಂತೆಯೇ ಗೋವಾಗೆ ಪೇರಿ ಕಿತ್ತಿದ್ದರು.
ಆ ನಂತರ.. ಗೋವಾದಲ್ಲಿ ಜಾನಿ ಮಾಸ್ಟರ್ ಅವರನ್ನು ಅರೆಸ್ಟ್ ಮಾಡಿ ಪೊಲೀಸರು ಜೈಲಿಗೆ ತಳ್ಳಿದ್ದರು. ಕೈಗೆ ಬಂದ ತುತ್ತು ಬಾಯಿಒಗೆ ಬರಲಿಲ್ಲ ಎಂಬಂತೆ ಇಡೀ ಪ್ರಕರಣದಿಂದ ಸಿಗಬೇಕಿದ್ದ ರಾಷ್ಟ್ರ ಪ್ರಶಸ್ತಿ ಕೂಡ ಜಾನಿ ಮಾಸ್ಟರ್ ಕೈಯಿಂದ ತಪ್ಪಿ ಹೋಯ್ತು.

ಸದ್ಯ ಜಾಮೀನು ಪಡೆದು ಜಾನಿ ಮಾಸ್ಟರ್ ಹೊರ ಬಂದಿದ್ದಾರೆ. ತಾಳಕ್ಕೆ ತಕ್ಕಂತೆ ಕುಣಿಯುವುದು ಹೇಗೆ ಎನ್ನುವುದನ್ನು ಮತ್ತೆ ಎಲ್ಲಾ ಸ್ಟಾರ್‌ಗಳಿಗೆ ಹೇಳಿ ಕೊಡುತ್ತಿದ್ದಾರೆ.
ತೆಲುಗು ಚಿತ್ರರಂಗ ಕೂಡ ಜಾನಿ ಮಾಸ್ಟರ್ ಅವರನ್ನು ತಮ್ಮಿಂದ ದೂರ ತಳ್ಳಿಲ್ಲ. ಕರೆದು ಕೆಲಸವನ್ನು ಕೊಡುತ್ತಿದೆ. ಆದರೂ ಕೂಡ ಈ ಕ್ಷಣದವರೆಗೆ ಜಾನಿ ಮಾಸ್ಟರ್ ಅವರ ನಡಾವಳಿಗಳ ಮೇಲೆ ಹಲವರಲ್ಲಿ ಅನುಮಾನ ಇದ್ದೇ ಇದೆ.
ಹೀಗಿರುವಾಗ ಇದೀಗ ಮತ್ತೊಮ್ಮೆ ಟಾಲಿವುಡ್ ನಲ್ಲಿ ಕಾಮದ ವಾಸನೆ ಮೂಗಿಗೆ ಬಡಿಯುತ್ತಿದೆ. ಮತ್ತೊಬ್ಬ ನೃತ್ಯ ನಿರ್ದೇಶಕ ಕೃಷ್ಣ ಅವರ ಕಾಮಕೇಳಿ ತೆಲುಗು ಉದ್ಯಮಕ್ಕೆ ಬರಸಿಡಿಲಿನಂತೆ ಬಡೆದಿದೆ.
ಹೌದು, ದಕ್ಷಿಣ ಭಾರತದ ಅತೀ ದೊಡ್ಡ ಡ್ಯಾನ್ಸ್ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ''ಧೀ''ಯಲ್ಲಿ ನೃತ್ಯ ನಿರ್ದೇಶಕನಾಗಿದ್ದ ಕೃಷ್ಣ ಮಾಸ್ಟರ್ ವಿರುದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಬಾಲಕಿಯ ಮನೆಯ ಸದಸ್ಯರು ಕೃಷ್ಣ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ದಾಖಲಾಗುತ್ತಿದ್ದಂತೆಯೇ ಕೃಷ್ಣ ಥೇಟ್ ಜಾನಿ ಮಾಸ್ಟರ್ ಶೈಲಿಯಲ್ಲಿಯೇ ಓಡಿ ಹೋಗುವ ಪ್ರಯತ್ನ ಮಾಡಿದ್ದಾರೆ. ಹೈದರಾಬಾದ್‌ದಿಂದ ಬೆಂಗಳೂರಿಗೆ ತಲೆ ಮರೆಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಆದರೆ.. ಇವರ ಈ ಪ್ರಯತ್ನ ವಿಫಲವಾಗಿದ್ದು, ಪ್ರಕರಣ ದಾಖಲಿಸಿಕೊಂಡ ಹೈದರಾಬಾದ್‌ನ ಗಚಿಬೌಲಿ ಪೊಲೀಸರು ಕೃಷ್ಣ ಮಾಸ್ಟರ್ ಅವರನ್ನು ಸದ್ಯ ಫೋಕ್ಸೋ ಕಾಯ್ಡೆಯಡಿ ಬಂಧಿಸಿ ಹೈದರಾಬಾದ್‌ಗೆ ಕರೆದೊಯ್ದಿದ್ದಾರೆ. ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಸದ್ಯ ಜೈಲಿಗೆ ಕಳುಹಿಸಿದ್ದಾರೆ.
ಇನ್ನು, ಕೃಷ್ಣ ಅತ್ತ ಜೈಲು ಪಾಲಾಗುತ್ತಿದ್ದಂತೆಯೇ ಇತ್ತ ಕೃಷ್ಣನ ಮತ್ತಷ್ಟು ಕಾಮಪುರಾಣಗಳು ಹೊರ ಬರುತ್ತಿವೆ. ''ಇನ್‌ಸ್ಟಾಗ್ರಾಮ್''ನಲ್ಲಿ ಡ್ಯಾನ್ಸ್ ನೆಪದಲ್ಲಿ ತಮ್ಮ ಜನಪ್ರಿಯತೆಯನ್ನು ಬಳಸಿಕೊಂಡು ಹುಡುಗಿಯರ ಪರಿಚಯ ಮಾಡಿಕೊಳ್ತಿದ್ದ ಕೃಷ್ಣ, ಹಲವಾರು ಯುವತಿಯರನ್ನು ವಂಚಿಸಿದ್ದಾರೆ ಎಂಬ ಆರೋಪ ಕೂಡ ಸದ್ಯ ಕೇಳಿ ಬರುತ್ತಿದೆ. ಮತ್ತಷ್ಟು ಪ್ರಕರಣಗಳು ಕೃಷ್ಣ ವಿರುದ್ದ ದಾಖಲಾಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿಗೆ ಓಡಿ ಬರುವ ತಮ್ಮ ಪತ್ನಿಯ ಹತ್ತು ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಬಂದಿದ್ದರು ಎಂಬ ಮಾತು ಕೂಡ ಸದ್ಯ ಕೇಳಿ ಬರುತ್ತಿದೆ. ಕೃಷ್ಣ ಅವರ ಈ ಕಾಮ ಪುರಾಣ ಸದ್ಯ ತೆಲುಗು ಚಿತ್ರರಂಗಕ್ಕೆ ಮತ್ತು ಕಿರುತೆರೆ ಲೋಕಕ್ಕೆ ತಲೆ ಬಿಸಿಯಾಗಿದೆ. ತಲೆ ತಗ್ಗಿಸುವಂತೆ ಮಾಡಿದೆ.
ಸದ್ಯ ಜೈಲು ಪಾಲಾದ ಕೃಷ್ಣಗೆ, ಜಾನಿ ಮಾಸ್ಟರ್ ಅವರಂತೆಯೇ ಜಾಮೀನು ಸಿಗುತ್ತಾ ? ಜಾಮೀನು ಸಿಕ್ಕರೆ ಕೃಷ್ಣ ಅವರನ್ನು ಮತ್ತೆ ತೆಲುಗು ಕಿರುತೆರೆ ಅಪ್ಪಿಕೊಳ್ಳುತ್ತಾ..? ಕೆಲಸ ಕೊಡುತ್ತಾ ? ''ಧೀ'' ಕಾರ್ಯಕ್ರಮದಲ್ಲಿ ಮತ್ತೆ ಸೇರಿಸಿಕೊಳ್ಳುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











