ಹಾಸ್ಯನಟ ಬ್ರಹ್ಮಾನಂದಂ ಸಂಭಾವನೆಗೂ, ಆಸ್ತಿಗೂ ಅಜಗಜಾಂತರ ವ್ಯತ್ಯಾಸ.!

By Bharath Kumar

ಚಿತ್ರರಂಗದಲ್ಲಿ ನಟರಿಗಿಂತ ಹಾಸ್ಯನಟರೇ ಹೆಚ್ಚು ಶ್ರೀಮಂತರು ಎಂಬ ಮಾತಿದೆ. ಅದು ಬಹುಶಃ ನಿಜಾ ಅನ್ಸುತ್ತೆ. ಯಾಕಂದ್ರೆ, ಸ್ಟಾರ್ ನಟರು ವರ್ಷವೆಲ್ಲಾ ಒಂದು ಅಥವಾ ಎರಡು ಚಿತ್ರಗಳನ್ನ ಮಾಡಿ ಒಂದಿಷ್ಟು ಅಂತ ಸಂಭಾವನೆ ಪಡೆಯುತ್ತಾರೆ. ಆದ್ರೆ, ಹಾಸ್ಯ ನಟರು ವರ್ಷ ಪೂರ್ತಿ ಸುಮಾರು 15 ರಿಂದ 20 ಸಿನಿಮಾಗಳಲ್ಲಿ ನಟಿಸುತ್ತಾರೆ. ಅವರಿಗೆ ಸಿಗುವ ಸಂಭಾವನೆ ಕೂಡ ದೊಡ್ಡ ಮೊತ್ತವೇ. ಹೀಗೆ, ನಟರಿಗೆ ಹೋಲಿಸಿಕೊಂಡರೇ, ಹಾಸ್ಯನಟರೇ ಶ್ರೀಮಂತರು ಎನ್ನುವುದರಲ್ಲಿ ಅನುಮಾನವಿಲ್ಲ.

ಇದಕ್ಕೆ ತಾಜಾ ನಿದರ್ಶನ ತೆಲುಗಿನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ. ಹೌದು, ಬ್ರಹ್ಮಾನಂದಂ ಅವರ ಆಸ್ತಿ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಅತಿ ಹೆಚ್ಚು ಆಸ್ತಿ ಹೊಂದಿರುವ ಹಾಸ್ಯ ನಟರಾಗಿದ್ದಾರಂತೆ. ಇನ್ನು ಇವರು ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಕೇಳಿದ್ರೆ ನೀವು ಆಶ್ಚರ್ಯವಾಗುವುದಂತೂ ಪಕ್ಕಾ....!

ಹಾಗಾದ್ರೆ, ಬ್ರಹ್ಮಾನಂದಂ ಅವರು ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು? ಅವರ ಆಸ್ತಿಯ ಮೌಲ್ಯವೆಷ್ಟು? ಅವರ ಬಳಿ ಏನೆಲ್ಲಾ ಇದೆ ಎಂದು ಮುಂದೆ ಓದಿ....

ಒಂದು ಚಿತ್ರಕ್ಕೆ 1 ಕೋಟಿಯಂತೆ.!

ಒಂದು ಚಿತ್ರಕ್ಕೆ 1 ಕೋಟಿಯಂತೆ.!

ಮೂಲಗಳ ಪ್ರಕಾರ ಹಾಸ್ಯ ನಟ ಬ್ರಹ್ಮಾನಂದಂ ಅವರು ಒಂದು ಚಿತ್ರದಲ್ಲಿ ನಟಿಸಲು ಬರೋಬ್ಬರಿ 1 ಕೋಟಿ ಸಂಭಾವನೆ ಪಡೆಯುತ್ತಾರಂತೆ.

ವರ್ಷಕ್ಕೆ 20 ಚಿತ್ರ

ವರ್ಷಕ್ಕೆ 20 ಚಿತ್ರ

ಒಂದು ಚಿತ್ರಕ್ಕೆ 1 ಕೋಟಿ ಸಂಭಾವನೆ ಪಡೆಯುವ ಬ್ರಹ್ಮಾನಂದಂ ವರ್ಷದಲ್ಲಿ ಸುಮಾರು 15 ರಿಂದ 20 ಚಿತ್ರಗಳಲ್ಲಿ ನಟಿಸುತ್ತಾರೆ. ಕೆಲವೊಮ್ಮೆ 20 ಕ್ಕೂ ಹೆಚ್ಚು ಸಿನಿಮಾಗಳು ಮಾಡಿರುವ ಉದಾಹರಣೆ ಉಂಟು. ಹಾಗಾದ್ರೆ, ಸಿನಿಮಾಗಳಿಂದ ಬ್ರಹ್ಮಾನಂದಂ ಅವರು ಗಳಿಸುವ ವಾರ್ಷಿಕ ಆದಾಯ ಎಷ್ಟಿರಬಹುದು ಎಂದು ನೀವೇ ಊಹಿಸಿ?

ಒಟ್ಟು ಆಸ್ತಿಯ ಮೌಲ್ಯ

ಒಟ್ಟು ಆಸ್ತಿಯ ಮೌಲ್ಯ

ಹೀಗೆ, ವರ್ಷವಿಡೀ ಸಿನಿಮಾಗಳಲ್ಲಿ ಬ್ಯುಸಿಯಿರುವ ಹಾಸ್ಯ ನಟ ಬ್ರಹ್ಮಾನಂದಂ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 320 ಕೋಟಿ ಎಂದು ವರದಿಯಾಗಿದೆ.

ಐಷಾರಾಮಿ ಕಾರುಗಳ ಒಡೆಯ

ಐಷಾರಾಮಿ ಕಾರುಗಳ ಒಡೆಯ

ಬ್ರಹ್ಮಾನಂದಂ ಅವರಿಗೆ ಐಷಾರಾಮಿ ಕಾರುಗಳು ಅಂದ್ರೆ ತುಂಬಾ ಕ್ರೇಜ್. ಹೀಗಾಗಿ, ಅವರ ಬಳಿ ಹೊಸ ಹೊಸ ಬಗೆಯ ಕಾಸ್ಟ್ಲೀ ಕಾರ್ ಗಳಿವೆ. Audi R8, Audi Q7, ಮತ್ತು Mercedes-Benz (Black) ಸೇರಿದಂತೆ ಇನ್ನು ಹಲವರು ಕಾರುಗಳಿಗೆ ಒಡೆಯರಾಗಿದ್ದಾರೆ.

ದೊಡ್ಡ ಬಂಗಲೆ

ದೊಡ್ಡ ಬಂಗಲೆ

ಹೈದ್ರಾಬಾದ್ ನ ಜ್ಯೂಬ್ಲಿ ಹಿಲ್ಸ್ ನಲ್ಲಿ ಬ್ರಹ್ಮಾನಂದಂ ಅವರ ದೊಡ್ಡ ಬಂಗಲೆ ಇದೆ. ಇನ್ನು ಕೋಟ್ಯಾಂತರ ರೂಪಾಯಿ ಮೌಲ್ಯದ ಕೃಷಿ ಭೂಮಿಯನ್ನ ಕೂಡ ಇಟ್ಟುಕೊಂಡಿದ್ದಾರಂತೆ.

1986ರಲ್ಲಿ ಸಿನಿಮಾಗೆ ಎಂಟ್ರಿ

1986ರಲ್ಲಿ ಸಿನಿಮಾಗೆ ಎಂಟ್ರಿ

1986ರಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿನಯದಲ್ಲಿ ಮೂಡಿ ಬಂದಿದ್ದ 'ಚಂಟಬ್ಬಾಯಿ' ಚಿತ್ರದ ಮೂಲಕ ಬ್ರಹ್ಮಾನಂದಂ ಸಿನಿಮಾ ರಂಗ ಪ್ರವೇಶ ಮಾಡಿದ್ದರು. ಇಲ್ಲಿಯವರೆಗೂ ಸುಮಾರು 1000 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸುವುದರ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾರೆ.

More from Filmibeat

English summary
Brahmanandam is the now the most-sought after comedian and he might also be the highest paid comedy actor in the industry. And his current overall financial assets are pegged at Rs 320 crore, said a news report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X